ಮುಂಬೈ: (ಡಿ.6) Reliance Jio Mart ದೇಶದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ದಿನಬಳಕೆಯ ವಸ್ತುಗಳ ಉತ್ಪಾದಿಸುವ ದೇಶದ ಬೃಹತ್ ಕಂಪನಿಗಳ ವಿರುದ್ಧ ಲಕ್ಷಾಂತರ ಸೇಲ್ಸ್ ಮನ್ ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶಾದ್ಯಂತ ಇರುವ 4.5 ಲಕ್ಷ ಮಾರಾಟ ಪ್ರತಿನಿಧಿಗಳು ರಿಲಯನ್ಸ್ ಕಂಪನಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಿಲಯನ್ಸ್ ಗೆ ಕಡಿಮೆ ದರಕ್ಕೆ ಸರಕು ಪೂರೈಕೆ ನಿಲ್ಲಿಸಿದರೆ ದೇಶದಲ್ಲಿರುವ ಕಿರಾಣಿ ಅಂಗಡಿಗಳಿಗೆ ನಿಮ್ಮ ಉತ್ಪನ್ನಗಳ ಪೂರೈಕೆಯನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ರಿಲಯನ್ಸ್ ಕಂಪನಿಯ ಜಿಯೋ ಮಾರ್ಟ್, Jio Mart ಆಪ್ ಮೂಲಕ ಕಿರಾಣಿ ಅಂಗಡಿ ಮಾಲೀಕರನ್ನು ತನ್ನ ಗ್ರಾಹಕರನ್ನಾಗಿ ಮಾಡಿಕೊಂಡಿದೆ. ಕಡಿಮೆ ದರಕ್ಕೆ ಸಗಟು ದರದಲ್ಲಿ ಎಲ್ಲಾ ರೀತಿಯ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದು, ಕಮ್ ಉತ್ಪಾದನಾ ಕಂಪನಿಗಳು ತಮಗೆ ನೀಡುವ ದರಕ್ಕಿಂತ ಕಡಿಮೆ ದರಕ್ಕೆ ರಿಲಯನ್ಸ್ ಗೆ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ.
ಹೀಗಾಗಿ ರಿಲಯನ್ಸ್ ಕಂಪನಿ ತಮಗಿಂತಲೂ ಕಡಿಮೆ ದರಕ್ಕೆ ಚಿಲ್ಲರೆ ಅಂಗಡಿಗಳಿಗೆ ಉತ್ಪನ್ನಗಳನ್ನು ಪೂರೈಸುತ್ತಿದೆ ಇದರಿಂದ ವ್ಯಾಪಾರದಲ್ಲಿ ಶೇ.25 ರಷ್ಟು ನಷ್ಟವಾಗಿದೆ ಎಂದು ಪ್ರತಿನಿಧಿಗಳು ಕೋಪಗೊಂಡಿದ್ದಾರೆ.

ಕಡಿಮೆ ದರಕ್ಕೆ ಮಾಡಲು ಕಾರಣ:
ಜನವರಿ 1ರ ಒಳಗಾಗಿ ರಿಲಯನ್ಸ್ ಕಂಪನಿಗೆ ಕಡಿಮೆ ಬೆಲೆಗೆ ಸರಕು ಮಾರಾಟ ನಿಲ್ಲಿಸಬೇಕು ಇಲ್ಲದಿದ್ದಲ್ಲಿ ಕಿರಾಣಿ ಅಂಗಡಿಗಳಿಗೆ ಯಾವುದೇ ವಸ್ತುಗಳನ್ನು ಪೂರೈಸುವುದಿಲ್ಲ ಹಾಗೂ ಹೊಸದಾಗಿ ಮಾರುಕಟ್ಟೆ ಪ್ರವೇಶಿಸಲಿರುವ ಸರಕುಗಳು ರಿಲಯನ್ಸ್ ಗೆ ಒದಗಿಸದೆ ಅಸಹಕಾರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಇದನ್ನೂ ಓದಿ: Jacqueline Fernandez ವಂಚಕನ ಜೊತೆ ಡೇಟಿಂಗ್: ದೇಶ ಬಿಟ್ಟು ಹೋಗದಂತೆ ಜಾಕ್ವೆಲಿನ್ ಗೆ ತಾಕೀತು
ಮುಂದಿನ ಯೋಜನೆ:
ಭಾರತದ ಚಿಲ್ಲರೆ ಮಾರುಕಟ್ಟೆ ವಲಯವು ವಾರ್ಷಿಕವಾಗಿ 67 ಲಕ್ಷ ಕೋಟಿ ರು ವಹಿವಾಟು ನಡೆಸುತ್ತಿದೆ. ಇದರಲ್ಲಿ 80 ರಷ್ಟು ಪಾಲು ಕಿರಾಣಿ ಅಂಗಡಿಗಳ ಆಗಿದ್ದು, ಕೆಲ ತಿಂಗಳಿನಿಂದ 150 ನಗರಗಳ 300000 ಕಿರಾಣಿ ಅಂಗಡಿಗಳು ಜಿಯೋ ಮಾಲ್ಟ್ ಮೂಲಕ ವ್ಯಾಪಾರ ನಡೆಸುತ್ತಿದೆ. 2024ರ ವೇಳೆ ತನ್ನ ವಹಿವಾಟು ಜಾಲಕ್ಕೆ 1 ಕೋಟಿ ಕಿರಾಣಿ ಅಂಗಡಿ ಗಳನ್ನು ಸೇರಿಸಿಕೊಳ್ಳುವ ಗುರಿಯನ್ನು ಜಿಯೋ ಕಂಪನಿ ಯೋಜನೆ ಹಾಕಿಕೊಂಡಿದೆ.