James (ಡಿ.6 ) ಪುನೀತ್ ರಾಜ್ ಕುಮಾರ್( Puneeth Rajkumar) ನಟನೆಯ ‘ಜೇಮ್ಸ್’ ಚಿತ್ರದ ಚಿತ್ರೀಕರಣ ಮತ್ತೆ ಆರಂಭವಾಗಿದೆ. ಚಿತ್ರದ ಟಾಕಿ ಪೋಷನ್ ಶೂಟಿಂಗ್ ಬಾಕಿ ಇತ್ತು. ಪುನೀತ್ ಇಲ್ಲದೇ ಚಿತ್ರೀಕರಣವನ್ನು ಚಿತ್ರತಂಡ ಶುರು ಮಾಡಿದೆ.
ಪುನೀತ್ ಹುಟ್ಟುಹಬ್ಬದ ದಿನವಾದ (James)ಮಾರ್ಚ್ 17ಕ್ಕೆ ‘ಜೇಮ್ಸ್’ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ. ಚಿತ್ರದ (Satellite Rights) ಸ್ಯಾ,ಟಲೈಟ್ ಹಕ್ಕುಗಳು ಈಗಾಗಲೇ 15 ಕೋಟಿಗೆ ಮಾರಾಟವಾಗಿದೆ ಎಂದು ತಿಳಿದು ಬಂದಿದೆ.
ಅಪ್ಪು(Appu) ಅವರ ಡ್ರೀಮ್ ಪ್ರಾಜೆಕ್ಟ್ ಗಂಧದ ಗುಡಿ(Gandhada Gudi) ಸಿನಿಮಾದ ಟೀಸರ್ ಬಿಡುಗಡೆಯಾಗುದೆ. ಅಭಿಮಾನಿಗಳು ಪುನೀತ್ ರಾಜ್ಕುಮಾರ್(Puneeth Rajkumar) ಈ ಸಮಯದಲ್ಲಿ ನಮ್ಮೊಂದಿಗೆ ಇಲ್ಲ ಎಂದು ನೆನೆದು ಕಣ್ಣೀರು ಹಾಕುತ್ತಿದ್ದಾರೆ. ಈ ಮಧ್ಯೆ ಗಂಧದ ಗುಡಿ 2022ರಲ್ಲಿ(Gandhada Gudi) ಚಿತ್ರಮಂದಿರಗಳಲ್ಲೇ ರಿಲೀಸ್ ಆಗಲಿದೆ.

‘ಜೇಮ್ಸ್’ನಲ್ಲಿ (James)ನಾಯಕಿಯಾಗಿ ತಮಿಳು ನಟಿ ಪ್ರಿಯಾ ಆನಂದ್ ನಟಿಸಿದ್ದಾರೆ. ‘ರಾಜಕುಮಾರ’ ಚಿತ್ರದಲ್ಲಿ ಪುನೀತ್ ತಂದೆಯಾಗಿ ಅಭಿನಯಿಸಿದ್ದ ಹಿರಿಯ ತಮಿಳು ನಟ ಶರತ್ ಕುಮಾರ್(Sharath Kumar) ಈ ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಚೇತನ್ ನಿರ್ದೇಶನದ ಈ ಚಿತ್ರಕ್ಕೆ ಎ. ಹರ್ಷ ಕೊರಿಯೋಗ್ರಫಿ, ಸ್ಟಂಟ್ ಮಾಸ್ಟರ್ ವಿಜಯ್ ಫೈಟಿಂಗ್ ದೃಶ್ಯಾವಳಿ ನಿರ್ದೇಶಿಸಿದ್ದಾರೆ. ಕಿಶೋರ್ ಪತಿಕೊಂಡ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಚರಣ್ ರಾಜ್ ಸಂಗೀತ ಸಂಯೋಜನೆ, ಶ್ರೀಶ ಛಾಯಾಗ್ರಹಣ, ರವಿಸಂತೆ ಹೈಕ್ಲು ಕಲಾ ನಿರ್ದೇಶನ, ದೀಪು ಎಸ್.ಕುಮಾರ್ ಸಂಕಲನ ಇದೆ.
ಇದನ್ನೂ ಓದಿ:Gandhada Gudi Teaser :ಗಂಧದಗುಡಿ ಟೈಟಲ್ ಟೀಸರ್ ರಿಲೀಸ್: ಕರ್ನಾಟಕ ಅರಣ್ಯಗಳು, ವನ್ಯಜೀವಿಗಳ ದೃಶ್ಯವೈಭವ
ಈ ಚಿತ್ರದಲ್ಲಿ ತೆಲುಗು ನಟ ಶ್ರೀಕಾಂತ್, ಆದಿತ್ಯ ಮೆನನ್, ಅನು ಪ್ರಭಾಕರ್, ರಂಗಾಯಣ ರಘು ಮತ್ತು ಮುಕೇಶ್ ರಿಷಿ ಸೇರಿದಂತೆ ದೊಡ್ಡ ತಾರಾಗಣ ನಟಿಸಿದೆ. ಪುನೀತ್ ರಾಜ್ ಕುಮಾರ್ ನಟನೆಯ ಈ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಪುನೀತ್ ಅವರಿಗೆ ಯಾರು ಧ್ವನಿ ನೀಡುತ್ತಾರೆ ಎನ್ನುವ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.

ಅಪ್ಪು ನಟಿಸಿದ್ದ ಜೇಮ್ಸ್(James) ಚಿತ್ರ ಶೇಕಡಾ 80ರಷ್ಟು ಮುಗಿದಿತ್ತು. ಕೆಲ ಸಣ್ಣ ಪುಟ್ಟ ಟಾಕಿ ಪೋಷನ್ಗಳು ಮಾತ್ರ ಬಾಕಿ ಇತ್ತು. ಆದರೆ, ವಿಧಿಯಾಟಕ್ಕೆ ಅಪ್ಪು ನಮ್ಮನ್ನೆಲ್ಲ ಬಿಟ್ಟು ದೂರದ ಊರಿಗೆ ಹೋಗಿದ್ದರು. ಅಪ್ಪು ಅವರ ಕಡೆಯ ಕಮರ್ಷಿಯಲ್ ಸಿನಿಮಾ(Commercial Movie) ಬಿಡುಗಡೆಯಾಗೇ ಆಗುತ್ತೆ ಅಂತ ಚಿತ್ರದ ನಿರ್ದೇಶಕ ಚೇತನ್(Chethan) ಅಪ್ಪು ಅವರ ಅಭಿಮಾನಿಗಳಿಗೆ ಭರವಸೆ ನೀಡಿದ್ದರು.
ಇದೀಗ ಆ ಕಾರ್ಯಗಳು ನಡೆಯುತ್ತಿವೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಇಲ್ಲದೇ ಜೇಮ್ಸ್ ಚಿತ್ರ ಶೂಟಿಂಗ್ ಮತ್ತೆ ಆರಂಭವಾಗಿದೆ. ಕಣ್ಣೀರು ಹಾಕುತ್ತಲೇ ಜೇಮ್ಸ್ ಚಿತ್ರತಂಡ ಕೆಲಸ ಮಾಡ್ತಿದೆ. ಅಪ್ಪು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅಂತ ಚಿತ್ರತಂಡ ಹೇಳಿದೆ.