ಮುಂಬೈ: (ಡಿ.6): Jacqueline Fernandez ಶ್ರೀಲಂಕಾದ ಮಿಸ್ ಯೂನಿವರ್ಸ್ ಖ್ಯಾತಿಯ ಬಾಲಿವುಡ್ ನಟಿ ಜಾಕ್ವಲಿನ್ ಫರ್ನಾಂಡೀಸ್ ಅವರು 200 ಕೋಟಿ ವಂಚಕ ಚಂದ್ರಶೇಖರ್ ಜೊತೆ ತೆಗೆಸಿಕೊಂಡ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇತ್ತೀಚೆಗಷ್ಟೇ ಜಾಕ್ವಲಿನ್ ಅವರು ಚಂದ್ರಶೇಖರ್ ಅವರಿಗೆ ಮುತ್ತು ಕೊಡುತ್ತಿರುವ ಫೋಟೋಗಳು ಲೀಕ್ ಆಗಿತ್ತು. ಈ ಬಗ್ಗೆ ನೆಟ್ಟಿಗರು ಸಾಕಷ್ಟು ಕಮೆಂಟ್ಗಳನ್ನು ಮಾಡಿದ್ದರು. ವಂಚಕ ಸುಖೇಶ್ ಚಂದ್ರಶೇಖರ್ ಅವರ ಜೊತೆ ಜಾಕ್ವಲಿನ್ ಇರುವುದು ಭಾರಿ ಸುದ್ದಿಯಾಗಿತ್ತು.
ವಂಚಕ ಸುಕೇಶ ಚಂದ್ರಶೇಖರ್ ಜೊತೆ ಡೇಟಿಂಗ್

ಇದೀಗ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಭಾರತ ದೇಶವನ್ನು ಬಿಟ್ಟು ಹೋಗಲು ಸಾಧ್ಯವಿಲ್ಲ ಎಂದು ಹೇಳಬಹುದು. ಯಾಕೆ ಅಂತೀರಾ? ಜಾಕ್ವಲಿನ್ ವಂಚಕ ಸುಕೇಶ ಚಂದ್ರಶೇಖರ್ ಅವರ ಜೊತೆ ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಇದನ್ನೂ ಓದಿ: Inhumanity: 9 ಮಕ್ಕಳಿದ್ದರು ತಾಯಿಯನ್ನು ನೋಡಿಕೊಳ್ಳುವವರಿಲ್ಲ: ಇದು 85 ವರ್ಷದ ವೃದ್ಧೆಯ ಮನಕಲಕುವ ಕಥೆ
ವಂಚಕ ಸುಕೇಶ್ ಚಂದ್ರಶೇಖರ್ ಅವರು ಹಲವು ಸಲಬ್ರೇಟಿ ಗಳಿಗೆ ರಾಜಕಾರಣಿಗಳಿಗೆ ಮತ್ತು ಉದ್ಯಮಿಗಳಿಗೆ ಬೆದರಿಕೆ ಹಾಕಿ ಕೋಟಿ ಕೋಟಿ ರೂಪಾಯಿಗಳನ್ನು ಸುಲಿಗೆ ಮಾಡಿದ್ದಾನೆ ಎಂದು ಆರೋಪವಿದೆ.
200 ಕೋಟಿ ರೂ ಸುನಿಗೆ ಪ್ರಕರಣದಲ್ಲಿ ವಂಚಕ ಸುಖೇಶ್ ಅವರು ಜೂನ್ ತಿಂಗಳಲ್ಲಿ ಜೈಲು ಸೇರಿದ್ದರು ಜೊತೆ ಡೇಟಿಂಗ್ ಮಾಡಿರುವುದಾಗಿ ಎಲ್ಲೆಡೆ ಹರಿದಾಡಿತ್ತು ಆದರೆ ಆ ಸುದ್ದಿಗಳನ್ನು ಜಾಕ್ವೆಲಿನ್ ಅವರು ನಿರಾಕರಿಸಿದರು.
ಇತ್ತೀಚಿಗೆ ವೈರಲ್ ಆಗುತ್ತಿರುವ ಜಾಕ್ವಲಿನ್ ಹಾಗೂ ಸುಕೇಶ್ ಅವರ ಫೋಟೋಗಳು ಬಹಳ ಸಂಕಷ್ಟ ತಂದೊಡ್ಡಿದೆ. ಪಂಚಮಿಯ ಕೇಸ್ನಲ್ಲಿ ಜಾರಿ ನಿರ್ದೇಶನಾಲಯ ಸುಖೇಶ್ ಹಾಗೂ ಆತನ ಪತ್ನಿ ಲೀಲಾ ಮತ್ತು ಜೊತೆಗಿದ್ದ ಆರು ಜನರ ವಿರುದ್ಧ ಆರೋಪಪಟ್ಟಿ (charge sheet)ಸಲ್ಲಿಸಲಾಗಿದೆ.
ನಟಿ ಭಾರತದಲ್ಲೇ ಲಾಕ್:

ಸುಕೇಶ್ ನಿಂದ ಅರೇಬಿಯನ್ ಕುದುರೆ ಸೇರಿ 10 ಕೋಟಿ ರುಪಾಯಿಗೂ ಹೆಚ್ಚು ಬೆಲೆಬಾಳುವ ಉಡುಗೊರೆಗಳನ್ನು ಕೂಡ ಲಭಿಸಿದೆ ಎಂದು ಮಾಹಿತಿ ಹೊರಬಂದಿದೆ. ಹಾಗಾಗಿ ನಟಿ ಜಾಕ್ವಲಿನ್ ಫರ್ನಾಂಡೀಸ್ ಅವರು ವಿಚಾರಣೆ ಮುಗಿಯುವವರೆಗೂ ದೇಶಬಿಟ್ಟು ಹೋಗುವ ಹಾಗಿಲ್ಲ ಎಂದು ಸುತ್ತೋಲೆ ಹೊರಡಿಸಿದೆ.
ನಟಿ ಜಾಕ್ವಲಿನ್ ಫರ್ನಾಂಡೀಸ್ ನಿನ್ನಲ್ಲಿನ ರಾಮಸೇತು ಚಿತ್ರದ ಶೂಟಿಂಗ್ ನಿಂದಾ ಹಿಂದಿರುಗಿದ್ದರು ಹಾಗೂ ಡಿಸೆಂಬರ್ 10ರಂದು ರಿಯಾದ್ ನಲ್ಲಿ ನಡೆಯಲಿರುವ ನಟ ಸಲ್ಮಾನ್ ಖಾನ್ ಅವರ ದಬಾಂಗ್ ಸಿನಿಮಾ ಪ್ರವಾಸದಲ್ಲಿ ಭಾಗವಹಿಸಬೇಕಿತ್ತು
ಆದರೆ ಅದಕ್ಕೂ ಮುನ್ನವೇ ಮುಂಬೈ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ವಿಮಾನ ನಿಲ್ದಾಣದ ಅಧಿಕಾರಿಗಳು ತಡೆದು ನಟಿಯನ್ನು ವಾಪಸ್ ಮನೆಗೆ ಕಳುಹಿಸಿದ್ದಾರೆ.