ಬೆಂಗಳೂರು (ಡಿ.5)Senior Actor Shivram ಸ್ಯಾಂಡಲ್ವುಡ್ನ ಹಿರಿಯ ನಟ ಹಾಗೂ ನಿರ್ಮಾಪಕ ಶಿವರಾಂ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ನೆರವೇರಿದೆ. ಬೆಂಗಳೂರಿನ ಬನಶಂಕರಿ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರದಾಯದಂತೆ ಅವರ ಅಂತ್ಯಕ್ರಿಯೆ ನಡೆಸಲಾಯಿತು.
ಶಿವರಾಂ ಅವರಿಗೆ ಸರ್ಕಾರದ ಪರವಾಗಿ ಕಂದಾಯ ಸಚಿವ ಆರ್ ಅಶೋಕ್ ಅವರು ಅಂತಿಮ ನಮನ ಸಲ್ಲಿಸಿದರು. ಪುತ್ರರಾದ ರವಿಶಂಕರ್ ಹಾಗೂ ಲಕ್ಷ್ಮೀಶರು ಅಂತಿಮ ವಿಧಿ-ವಿಧಾನಗಳನ್ನು ನೆರವೇರಿಸಿದರು ಇದೇ ವೇಳೆ ಸ್ವಾಮಿ ಅಯ್ಯಪ್ಪ ಭಕ್ತರು ಪೂಜೆ ಸಲ್ಲಿಸಿದರು.

ಶಿವರಾಂ ಮಕ್ಕಳಾದ ರವಿಶಂಕರ್, ಲಕ್ಷ್ಮೀಶ್ ಅವರು ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಸ್ಯಾಂಡಲ್ವುಡ್ಗೆ ಮಾರ್ಗದರ್ಶಕರಾಗಿದ್ದ ಶಿವರಾಂ ಅವರು, ಪಂಚಭೂತಗಳಲ್ಲಿ ಲೀನರಾದರು.
ಇದನ್ನೂ ಓದಿ: Senior Actor Shivaram: ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಿರಿಯ ನಟ ಶಿವರಾಂ ಅವರ ಅಂತಿಮ ದರ್ಶನ
ಅಂತ್ಯ ಸಂಸ್ಕಾರಕ್ಕೂ ಮೊದಲು ಪಾರ್ಥಿವ ಶರೀರಕ್ಕೆ ಅಷ್ಟಾಭಿಷೇಕದ ಪೂಜೆ ಮಾಡಲಾಯಿತು. ತುಪ್ಪ, ಹೂವು, ಗಂಧ, ವಿಭೂತಿ, ಖರ್ಜೂರ, ಕೆಂಪು, ಕಲ್ಲು ಸಕ್ಕರೆ, ಹಾಲು, ಮೊಸರು , ಅವಲಕ್ಕಿಯಿಂದ ಪೂಜೆ ನಡೆಸಲಾಯಿತು.
ಶಿವರಾಂ ನಿಧನ ವಿಚಾರ ಸ್ಯಾಂಡಲ್ವುಡ್ಗೆ ಆಘಾತ ತಂದಿದೆ. ಸಾಕಷ್ಟು ಸೆಲೆಬ್ರಿಟಿಗಳು ಅವರ ಸಾವಿಗೆ ಸಂತಾಪ ಸೂಚಿಸುತ್ತಿದ್ದಾರೆ.