
Radha Searching Audio Launch: (ಡಿ.5) ಚಂದನವನದ ಅಂಗಳದಲ್ಲಿ ಟೈಟಲ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ‘ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’ ಸಿನಿಮಾದ ಆಡಿಯೋ ಲಾಂಚ್ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನೆರವೇರಿದೆ. ನಗರದ ಖಾಸಗಿ ಹೋಟೆಲ್ ವೊಂದ್ರಲ್ಲಿ ನಡೆದ ಕಾರ್ಯಕ್ರಮಕ್ಕೆ ವಿಷೇಶ ಅತಿಥಿಯಾಗಿ ಆಗಮಿಸಿದ ಖ್ಯಾತ ನಿರ್ದೇಶಕ ನಿರೂಪ್ ಭಂಡಾರಿ ಸಿನಿಮಾದ ಆಡಿಯೋ ಬಿಡುಗಡೆ ಮಾಡಿದರು.
ಸದ್ಯದಲ್ಲೇ ಸಿನಿಮಾ ರಿಲೀಸ್

ಮೈಸೂರು ಮೂಲದವರಾದ ಅಮೆರಿಕಾದ ಪ್ರಜೆ ಯಶಸ್ವಿ ಶಂಕರ್ ‘ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’ ಸಿನಿಮಾ ನಿರ್ಮಾಣ ಮಾಡಿದ್ದು, ಎಂ ಎನ್ ಶ್ರೀಕಾಂತ್ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಸದ್ಯದಲ್ಲಿಯೇ ‘ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡುವುದಾಗಿ ಚಿತ್ರತಂಡ ತಿಳಿಸಿದೆ.
ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ‘ರಾಧಾ ಸರ್ಚಿಂಗ್ ರಮಣ ಮಿಸ್ಸಿಂಗ್’ ಸಿನಿಮಾದಲ್ಲಿ ಸೆಲೆಬ್ರಿಟಿ ಫೋಟೋಗ್ರಾಫರ್ ಆಗಿದ್ದ ರಾಘವ್ ನಾಯಕ್ ಹೀರೋ ಆಗಿ ಬಣ್ಣ ಹಚ್ಚಿದ್ದು, ಸಂಜನಾ ಬುರ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ತೆಲುಗಿನ ಗೋಪಿನಾಥ್ ಭಟ್, ಯುಮುನಾ ಶ್ರೀನಿಧಿ, ರೇಖಾ, ಪ್ರದೀಪ್ ತಿಪಟೂರು, ಗುರು ಹೆಗಡೆ ಮುಂತಾದ ತಾರಾಬಳಗ ಸಿನಿಮಾದಲ್ಲಿದೆ. ಟಾಲಿವುಡ್ ನ ನವನೀತ್ಚಲರಿ ಸಂಗೀತ ಸಂಯೋಜಿಸಿದ್ದು, ಸಂಕಲನ ವಿಜೇತ್ ಚಂದ್ರ, ನೃತ್ಯ ಕಲೈ-ಹರಿಕೃಷ್ಣ ನಿರ್ವಹಿಸಿದ್ದಾರೆ. ಸಂತೋಷ್ ನಾಯಕ್ ಸಾಹಿತ್ಯ ಬರೆದಿರುವ ನಾಲ್ಕು ಹಾಡುಗಳಿಗೆ ಸೋನು ನಿಗಮ್, ಅನುರಾಧಾ ಭಟ್, ನವೀನ್ ಸಜ್ಜು ಧ್ವನಿಯಾಗಿದ್ದಾರೆ. ಸಿನಿಮಾವನ್ನು ಬೆಂಗಳೂರು, ಮೈಸೂರು, ಮಂಗಳೂರು ಹಾಗೂ ಹಾಸನಗಳಲ್ಲಿ ಸುಮಾರು 60 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.
ಇದನ್ನೂ ಓದಿ: Bahuroopi ಬಹುರೂಪಿ ಅಂತರ ರಾಷ್ಟ್ರೀಯ ನಾಟಕೋತ್ಸವಕ್ಕೆ ಒಮಿಕ್ರಾನ್ ಕರಿನೆರಳು