ನವದೆಹಲಿ: (ಡಿ.5) Omicron Virus ಭಾರತದಲ್ಲಿ ಒಮಿಕ್ರೋನ್ ರೂಪಾಂತರ ಸೋಂಕಿನ ಪ್ರಮಾಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಇತ್ತೀಚಿಗೆ ಕರ್ನಾಟಕದ ಬೆಂಗಳೂರಿನಲ್ಲಿ Omicron ವೈರಸ್ ಪ್ರಕರಣ ಪತ್ತೆಯಾಗಿತ್ತು.
ಆದರೆ ಇಂದು ದೆಹಲಿಯಲ್ಲಿ 5ನೇ ಕೇಸ್ ಪತ್ತೆಯಾಗಿದೆ. ಸೋಂಕಿತ ನನ್ನು ಎಲ್ಎನ್ ಜೆಪಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸೋಂಕಿತ ವ್ಯಕ್ತಿ ತಾಂಜೇನಿಯದಿಂದ ಬಂದವರು ಎಂದು ಹೇಳಲಾಗಿದೆ.
17 ಮಂದಿಯಲ್ಲಿ ಕೋವಿಡ್ ಸೋಂಕು:
ದೆಹಲಿಯಲ್ಲಿ Omicron virus ಜೊತೆಯಲ್ಲಿ ಇನ್ನು 17 ಮಂದಿಯಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ ಹಾಗೂ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅವರು ತಿಳಿಸಿದ್ದಾರೆ.
Omicran ಹೋಗು ಮೊದಲು ಭಾರತದಲ್ಲಿ ಕಾಣಿಸಿಕೊಂಡಿದ್ದು ಬೆಂಗಳೂರಿನಲ್ಲಿ ಮೊದಲು ಕಾಣಿಸಿಕೊಂಡು ಮರುದಿನ ಗುಜರಾತಿನ 75 ವರ್ಷದ ವೃದ್ಧರಲ್ಲಿ ಸೋಂಕು ಪತ್ತೆಯಾಗಿತ್ತು.

ಸೋಂಕಿತ ಜಿಂಬಾಂಬೆ ಇಂದ ಗುಜರಾತಿಗೆ ಬಂದಿದ್ದರು ಎನ್ನಲಾಗಿದೆ. ಮಹಾರಾಷ್ಟ್ರದ ದೊಂಬಿವ್ಲಿಯ 33 ವರ್ಷದ ವ್ಯಕ್ತಿಯೊಬ್ಬರಲ್ಲಿ ಸೋಂಕು ದೃಢಪಟ್ಟಿತ್ತು. ದಕ್ಷಿಣ ಆಫ್ರಿಕಾದಿಂದ ದುಬಾಯಿ ಮಾರ್ಗವಾಗಿ ಮುಂಬೈಗೆ ಬಂದಿದ್ದರು ಎನ್ನಲಾಗಿದೆ.
ಇದನ್ನೂ ಓದಿ: Firing in Nagaland: ನಾಗಾಲ್ಯಾಂಡ್ನಲ್ಲಿ ಗುಂಡಿನ ದಾಳಿ:13 ಮಂದಿ ದುರ್ಮರಣ
ಸೋಂಕಿತ ವ್ಯಕ್ತಿಯವರ ಜೊತೆಗೆ ಬಂದವರೆಲ್ಲರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಇಂದು ದೆಹಲಿಯಲ್ಲಿ ಕಂಡು ಬಂದಿರುವ 5ನೇ ಕೇಸ್ ಎಂದು ಹೇಳಲಾಗಿದೆ.