ಬೆಂಗಳೂರು: (ಡಿ.4) Senior Actor Shivaram ಕನ್ನಡ ಚಂದನವನದ ಹಿರಿಯನಟ ಶಿವರಾಂ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.
ಶಿವರಾಮ ಅವರ ಅಂತಿಮ ದರ್ಶನ ಪಡೆದ ಸಚಿವ ಆರ್ ಅಶೋಕ್ ಅವರು ಮಾತನಾಡಿ, ಶಿವರಾಂ ಅವರ ನಿಧನ ಕರ್ನಾಟಕಕ್ಕೆ ಶೋಕ ತಂದೊಡ್ಡಿದೆ. ನಮ್ಮವರನ್ನು ಕಳೆದುಕೊಂಡದ್ದರಿಂದ ಆಗಬೇಕೇ ನೋವಾಗಿದೆ. ಅವರ ಹೆಸರು ಚಿರಸ್ಥಾಯಿ ಆಗಿರುವಂತೆ ಕೆಲಸ ಮಾಡುತ್ತೇವೆ ನನ್ನ ಕ್ಷೇತ್ರದಲ್ಲಿ ಅವರ ನೆನಪು ಉಳಿಸುವ ಕೆಲಸ ಮಾಡುತ್ತೇವೆ. ಯಾವುದಾದರೂ ಕಟ್ಟಡ ಅಥವಾ ರಸ್ತೆಗೆ ಶಿವರಾಂ ಹೆಸರು ಇಡುತ್ತೇವೆ ಎಂದು ಸಚಿವರು ಹೇಳಿದ್ದಾರೆ.
ಶಿವರಾಮ್ ಅವರೊಂದಿಗೆ ನಾನು ನೆನಪುಗಳನ್ನು ಹಂಚಿಕೊಂಡ ಅಶೋಕ್ ಅವರು ತಿಂಗಳಿಗೆ ಒಮ್ಮೆಯಾದರೂ ಬಂಧುಗಳ ಜೊತೆ ಮಾತನಾಡುತ್ತಿದ್ದರು ತುಂಬಾ ಸಂಭಾವಿತ ಹಿರಿಯ ಕಲಾವಿದರು. ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ಎರಡು ಗಂಟೆಗಳ ಕಾಲ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ ನಂತರ ಬನಶಂಕರಿಯ ಚಿತಾಗಾರದಲ್ಲಿ ಬೆ.11 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಶಿವರಾಂ ಅವರು ಡಾಕ್ಟರ್ ರಾಜಕುಮಾರ್ ಜೊತೆ ಮಾಲೆ ಹಾಕಿ ಅಯ್ಯಪ್ಪ ದರ್ಶನ ಮಾಡಿದವರು, ನಮ್ಮ ಆಫೀಸಿಗೆ ಬರುತ್ತಿದ್ದರು. ಹಾಗೂ ಸ್ವಂತ ಗ್ರಂಥಾಲಯ ಸ್ಥಾಪನೆ ಮಾಡಿದರು ಎಂದು ಹೇಳಿದರು.
ಶಿವರಾಂ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ. ನಮ್ಮ ಕ್ಷೇತ್ರದಲ್ಲಿ ಅವರ ಹೆಸರು ಯಾವಾಗಲೂ ಇದ್ದೇ ಇರುತ್ತದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ: Senior Actor Shivaram ಹಿರಿಯ ನಟ ಶಿವರಾಂ ಅವರ ನಿಧನಕ್ಕೆ ಡಿ.ಕೆ. ಶಿವಕುಮಾರ್ ತೀವ್ರ ಸಂತಾಪ
ಕೊನೆಯ ಚಿತ್ರ ಆವರ್ತ
ಹಿರಿಯ ನಟ ಶಿವರಾಂ ಅವರು ನಟಿಸಿದ ಕೊನೆಯ ಚಿತ್ರ ಆವರ್ತ.ಈ ಚಿತ್ರದಬಗ್ಗೆ ನಟ ಶಿವರಾಂ ಅವರು ಅಭಿಪ್ರಾಯವನ್ನು ಹಂಚಿಕೊಂಡಿದ್ದರು “ಚಿತ್ರದಲ್ಲಿನ ಪಾತ್ರ ತುಂಬಾ ಖುಷಿ ಖುಷಿ ಕೊಟ್ಟಿತು. ಜೀವನದಲ್ಲಿ ಅದ್ಭುತ ಪಾತ್ರ ಎಂದು ಹೇಳಿಕೊಂಡಿದ್ದರು. ಚಿತ್ರದಲ್ಲಿ ಶಿವರಾಂ ಅವರು ನರೇಂದ್ರನಾಥ ಬಲ್ಲಾಳ ಎಂಬ ಪಾತ್ರವನ್ನು ನಿರ್ವಹಿಸಿದ್ದರು.
ತಮ್ಮ ಪಾತ್ರವನ್ನು ತೆರೆಯಮೇಲೆ ನೋಡುವ ಮೊದಲೇ, ನಮ್ಮನ್ನು ಅಗಲಿದ್ದಾರೆ. ಆವರ್ತ ಚಿತ್ರವನ್ನು ವೇಮಗಲ್ ಜಗನ್ನಾಥರಾವ್ ನಿರ್ದೇಶನ ಮಾಡಿದ್ದಾರೆ. ಮಡಿಕೇರಿಯಲ್ಲಿ ಹನ್ನೊಂದು ದಿನಗಳ ಚಿತ್ರೀಕರಣದಲ್ಲಿ ಯು ಶಿವರಾಂ ಅವರು ಭಾಗಿಯಾಗಿದ್ದರು .
ಈ ಬಗ್ಗೆ ಶಿವರಾಂ ಅವರ ಪುತ್ರ ಲಕ್ಷ್ಮೀಶ್ ಅವರು ಮಾತನಾಡಿ, ನಾಳೆ ಬೆಳಿಗ್ಗೆ ರವೀಂದ್ರ ಕಲಾಕ್ಷೇತ್ರದಲ್ಲಿ ಪಾರ್ಥಿವ ಶರೀರವನ್ನು ರವಾನಿಸಿ, 7:30 ರಿಂದ 10 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ಅವಕಾಶವಿದೆ. ನಂತರ 11ಗಂಟೆಗೆ ಬನಶಂಕರಿಯ ಚಿತಾಗಾರದಲ್ಲಿ ಅಂತ್ಯ ಸಂಸ್ಕಾರಕ್ಕೆ ಬರುತ್ತೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.