ಬೆಂಗಳೂರು:(ಡಿ.4) Senior Actor Shivaram ಕನ್ನಡ ಚಿತ್ರರಂಗದ ಹೆಸರಾಂತ ಹಿರಿಯ ನಟ ಶಿವರಾಂ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತೀವ್ರ ಸಂತಾಪ ಸೂಚಿಸಿದ್ದಾರೆ.
‘ಸುಮಾರು ಆರು ದಶಕಗಳಿಂದ ಕನ್ನಡ ಚಿತ್ರರಂಗದಲ್ಲಿ ಕಲಾಸೇವೆ ಮಾಡಿರುವ ಹಿರಿಯ ನಟ ಶಿವರಾಂ ಅವರ ಅಗಲಿಕೆ ಸುದ್ದಿ ಕೇಳಿ ಬಹಳ ಬೇಸರವಾಗಿದೆ.
ಗುಬ್ಬಿ ವೀರಣ್ಣನವರ ನಾಟಕ ಕಂಪನಿಯಲ್ಲಿ ಕೆಲಸ ಮಾಡಿದ್ದ ಶಿವರಾಂ ಅವರು ನಂತರ ಸಹಾಯಕ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದರು. ಪುಟ್ಟಣ್ಣ ಕಣಗಾಲ್, ಕೆ.ಆರ್. ಸೀತಾರಾಮ ಶಾಸ್ತ್ರಿ, ಸಂಗೀತಮ್ ಶ್ರೀನಿವಾಸರಾವ್ ರಂತಹ ಮಹಾನ್ ನಿರ್ದೇಶಕರ ಜತೆ ಕೆಲಸ ಮಾಡಿದ್ದರು.
ನಮ್ಮ ಕನ್ನಡ ಚಿತ್ರರಂಗದ ಹಿರಿಯ ನಟರಾದ ಶಿವರಾಮಣ್ಣ ಅವರ ನಿಧನವು ನೋವನ್ನುಂಟುಮಾಡಿದೆ. ಅಭಿನಯದ ಜೊತೆಗೆ ನಿರ್ಮಾಣದಲ್ಲಿಯೂ ಛಾಪು ಮೂಡಿಸಿದ್ದ ಶ್ರೀಯುತರು, ಚಿತ್ರರಂಗದ ಜ್ಞಾನಕೋಶವಾಗಿದ್ದರು. ಅವರ ಕುಟುಂಬ ವರ್ಗದವರಿಗೆ ಹಾಗೂ ಕನ್ನಡ ಚಿತ್ರಪ್ರೇಮಿಗಳಿಗೆ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/bGDMre5nIi
— DK Shivakumar (@DKShivakumar) December 4, 2021
ನಂತರ ಕಲಾವಿದರಾಗಿ ಬಣ್ಣ ಹಚ್ಚಿ ನಟನೆಗಿಳಿದ ಅವರು ಕನ್ನಡದ ದಿಗ್ಗಜ ನಟರ ಜತೆ ಅಭಿನಯಿಸಿದ್ದರು. ಪೋಷಕ ಪಾತ್ರಗಳಿಂದ ಹಿಡಿದು ಹಾಸ್ಯ ಪಾತ್ರಗಳವರೆಗೂ ಎಲ್ಲದರಲ್ಲೂ ಸೈ ಎನಿಸಿಕೊಂಡವರು ಶಿವರಾಂ ಅವರು.
ಇದನ್ನೂ ಓದಿ: Senior Actor Shivram:ಹಿರಿಯ ನಟ ಶಿವರಾಂ ನಿಧನ: ಕನ್ನಡ ಚಿತ್ರರಂಗ, ರಾಜಕೀಯ ಗಣ್ಯರಿಂದ ಸಂತಾಪ
ಶರಪಂಜರ, ನಾಗರಹಾವು, ಭಕ್ತ ಪ್ರಹ್ಲಾದ, ಗುರುಶಿಷ್ಯರು ಮತ್ತಿತರ ಸಿನಿಮಾಗಳಲ್ಲಿ ಅವರ ಪಾತ್ರ ಅವಿಸ್ಮರಣೀಯ.
ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ. ಅವರ ಅಗಲಿಕೆ ನೋವು ಭರಿಸುವ ಶಕ್ತಿಯನ್ನು ಕುಟುಂಬ ಸದಸ್ಯರು ಹಾಗೂ ಅಭಿಮಾನಿಗಳಿಗೆ ಕರುಣಿಸಲಿ ಎಂದು ಆ ಭಗವಂತನಲ್ಲಿ ಪ್ರಾರ್ಥಿಸುತ್ತೇನೆ’ ಎಂದು ಶಿವಕುಮಾರ್ ಅವರು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ