ಲಖನೌ: (ಡಿ.4) Road Damage: ತೆಂಗಿನಕಾಯಿ ಹೊಡೆದರೆ ರಸ್ತೆ ಹಾಳಾಗುವ ಸಾಧ್ಯತೆ ಇದೆಯೆ? ಹೌದು ಇಂಥದೊಂದು ಘಟನೆ ಉತ್ತರಪ್ರದೇಶದ ರಸ್ತೆಯೊಂದರಲ್ಲಿ ನಡೆದಿದೆ.
ಉತ್ತರಪ್ರದೇಶದ ಬಿಜನೋರ್ ಸಾದರ್ ಎಂಬಲ್ಲಿ ರಸ್ತೆಯನ್ನು ಉದ್ಘಾಟನೆ ಮಾಡುವ ವೇಳೆ, ತೆಂಗಿನಕಾಯಿ ಹೊಡೆದದ್ದಕ್ಕೆ ರಸ್ತೆ ಹಾನಿಯಾಗಿದೆ. ಬಿದನೂರ ಸಾದರ್ ಕ್ಷೇತ್ರದ ಬಿಜೆಪಿ ಶಾಸಕಿ ಸುಚಿ ಮೌಸಮ್ ಚೌದರಿ ಅವರು ರಸ್ತೆಯ ಉದ್ಘಾಟನೆ ಮಾಡಲು ಬಂದಿದ್ದರು.
1.16₹ಕೋಟಿ ವೆಚ್ಚದಲ್ಲಿ ಅಪೂರ್ಣ ಕಾಮಗಾರಿ:
ಸಾಮಾನ್ಯವಾಗಿ ಸಾಂಪ್ರದಾಯಿಕ ವೆಂದು ರಸ್ತೆಗೆ ತೆಂಗಿನಕಾಯಿ ಒಡೆದು ಪೂಜೆ ಮಾಡುತ್ತರೆ. ಹಾಗೆಯೇ ಇಲ್ಲೂ ತೆಂಗಿನಕಾಯಿ ಹೊಡೆದಿದ್ದಾರೆ. ತೆಂಗಿನಕಾಯಿ ಹೊಡೆದಾಗ ಅದು ಹೊಳಗದೆ ರಸ್ತೆಗೆ ಹಾನಿಯಾದ ಘಟನೆ ನಡೆದಿದೆ. ಅಂದರೆ ಎಷ್ಟು ಕಳಪೆ ಕಾಮಗಾರಿ ಮಾಡಿರಬಹುದು ಎಂದು ಯೋಚಿಸಿ?
ಸುಮಾರು 1.16₹ಕೋಟಿ ವೆಚ್ಚದಲ್ಲಿ ಸುಮಾರು 7 ಕಿಮೀ ರಸ್ತೆ ಕಾಮಗಾರಿ ನಡೆಸಲಾಗಿತ್ತು. ಉತ್ತರ ಪ್ರದೇಶದ ನೀರಾವರಿ ವಿಭಾಗದಿಂದ ಈ ರಸ್ತೆಯನ್ನು ನಿರ್ಮಾಣ ಮಾಡಲಾಗಿತ್ತು.

ಉದ್ಘಾಟನೆಗೆಂದು ಬಂದಿದ್ದ ಶಾಸಕಿ ಕಾಮಗಾರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕಿ ಅವರು ಕರಣೇಕರ್ತರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಇದನ್ನೂ ಓದಿ: Senior Actor Shivaram: ನಾಳೆ ರವೀಂದ್ರ ಕಲಾಕ್ಷೇತ್ರದಲ್ಲಿ ಹಿರಿಯ ನಟ ಶಿವರಾಂ ಅವರ ಅಂತಿಮ ದರ್ಶನ
ಈ ಬಗ್ಗೆ ಮಾತನಾಡಿದ ಅವರು, ರಸ್ತೆಯನ್ನು ಉದ್ಘಾಟಿಸಲು ನನ್ನನ್ನು ಆಹ್ವಾನ ಮಾಡಿದ್ದರು. ಉದ್ಘಾಟನೆ ವೇಳೆ ಟೆಂಗಿನಕಾಯಿ ಹೊಳೆದಾಗ ಹಾಳಾಗುವ ಬದಲು ರಸ್ತೆಗೆ ಹಾನಿಯಾಗಿದೆ. ರಸ್ತೆಯ ಮೇಲ್ಭಾಗ ಕಿತ್ತುಬಂದಿತ್ತು ಎಂದು ಶಾಸಕಿ ತಿಳಿಸಿದ್ದಾರೆ. ರಸ್ತೆಯನ್ನು ಪರಿಶೀಲಿಸಿದಾಗ ಕಳಪೆ ಕಾಮಗಾರಿಯಿಂದ ಮಾಡಲಾಗಿದೆ ಎಂದು ತಿಳಿದುಬಂದಿತ್ತು ರಸ್ತೆ ಕೆಲಸ ಸರಿಯಾಗಿ ಪೂರ್ಣಗೊಂಡಿರಲಿಲ್ಲ ಹಾಗಾಗಿ ರಸ್ತೆಯ ಉದ್ಘಾಟನೆ ಕಾರ್ಯಕ್ರಮವನ್ನು ನಿಲ್ಲಿಸಬೇಕಾಯಿತು.
ಜಿಲ್ಲಾ ಮ್ಯಾಜಿಸ್ಟ್ರೇಟ್ ಜೊತೆ ಮಾತನಾಡಿದಾಗ ಮೂವರು ಸದಸ್ಯರ ತಂಡವನ್ನು ಪರಿಶೀಲನೆಗೆ ಕಳುಹಿಸಿ, ರಸ್ತೆಯ ಮಾದರಿಯನ್ನು ಹೆಚ್ಚಿನ ತನಿಖೆಗೆ ಕಳಿಸಲಾಗಿದೆ ಸುಮಾರು ಮೂರು ಗಂಟೆಗಳ ಕಾಲ ಸ್ಥಳದಲ್ಲೇ ಮಾತುಕತೆ ನಡೆದಿದ್ದು. ಕಳಪೆ ಕಾಮಗಾರಿಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಹೆಚ್ಚುವರಿ ಪರಿಶೀಲನೆಗಾಗಿ ರಸ್ತೆ ಮಾದರಿಯನ್ನು ಕಳುಹಿಸಲಾಗಿದೆ ಎಂದು ನೀರಾವರಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ವಿಕಾಸ್ ಅಗರ್ವಾಲ್ ಅವರು ತಿಳಿಸಿದ್ದಾರೆ.