ಮೈಸೂರು: (ಡಿ.4 ) Bahuroopi :ರಂಗಾಯಣ ಮೈಸೂರು ಪ್ರತಿವರ್ಷ ನಡೆಸುವ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಈ ವರ್ಷವೂ 2021 ಡಿಸೆಂಬರ್ 10 ರಿಂದ 19 ರವರೆಗೆ ನಡೆಸಲು ಯೋಜಿಸಲಾಗಿತ್ತು, ಅತ್ಯಂತ ವ್ಯವಸ್ಥಿತವಾಗಿ, ವಿಜೃಂಭಣೆಯಿಂದ ನಡೆಸುವ ಎಲ್ಲಾ ಸಿದ್ದತೆಗಳು ಶೇ.70%ರಷ್ಟು ಮುಗಿದಿದ್ದವು.
ರೂಪಾಂತರಿ ಒಮಿಕ್ರಾನ್ ವೈರಸ್ ಪತ್ತೆಯಾದ ಹಿನ್ನಲೆಯಲ್ಲಿ ನ.3 ರಂದು ರಾಜ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ಕೋವಿಡ್-19ರ ಪ್ರಕರಣಗಳು ಹೆಚಾಗುತ್ತಿರುವುದರ ಬಗ್ಗೆ, ಜೊತೆಗೆ ಓಮೈಕ್ರಾನ್ ಪ್ರಕರಣಗಳು ಪತ್ತೆಯಾದ ಹಿನ್ನಲೆಯಲ್ಲಿ ಚರ್ಚೆ ನಡೆದು ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಇದನ್ನೂ ಓದಿ: Senior Actor Shivram:ಹಿರಿಯ ನಟ ಶಿವರಾಂ ನಿಧನ: ಕನ್ನಡ ಚಿತ್ರರಂಗ, ರಾಜಕೀಯ ಗಣ್ಯರಿಂದ ಸಂತಾಪ
ನಾಟಕೋತ್ಸವ ಮುಂದೂಡಿಕೆ

ಈ ಹಿನ್ನಲೆಯಲ್ಲಿ 500ಕ್ಕಿಂತ ಹೆಚ್ಚು ಜನ ಸೇರದಂತೆ ನಿರ್ಬಂಧ ವಿಧಿಸಿದೆ. ಆದರೆ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವಕ್ಕೆ ಪ್ರತಿದಿನ ಸಾವಿರಾರು ರಂಗಾಸಕ್ತರು ಭಾಗವಹಿಸುತ್ತಾರೆ. ಪ್ರತಿದಿನ ಪ್ರದರ್ಶನ ನೀಡುವ ಕಲಾವಿದರೇ ೫೦೦ಕ್ಕಿಂತ ಹೆಚ್ಚು ಜನ ಭಾಗವಹಿಸುತ್ತಾರೆ. ಇವರನ್ನು ನಿರ್ಬಂಧಿಸಿ ಕಾರ್ಯಕ್ರಮ ನಡೆಸುವುದರಲ್ಲಿ ಯಾವುದೇ ಅರ್ಥವಿರುವುದಿಲ್ಲ. ಆದ್ದರಿಂದ ಈ ವರ್ಷ ಬಹುರೂಪಿ ರಾಷ್ಟ್ರೀಯ ನಾಟಕೋತ್ಸವವನ್ನು ಮುಂದೂಡಲಾಗಿದೆ. ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ಜನವರಿ ಮೊದಲ ವಾರದಲ್ಲಿ ಹೊಸ ದಿನಾಂಕವನ್ನು ಪ್ರಕಟಿಸಲಾಗುವುದು ಎಂದು ನಿರ್ದೇಶಕ ಅಡ್ಡಂಡ ಸಿ ಕಾರ್ಯಪ್ಪ ಅವರು ತಿಳಿಸಿದ್ದಾರೆ
ಈಗ ತೀರ್ಮಾನಿಸಿರುವಂತೆ ಭಾಗವಹಿಸುವ ಎಲ್ಲಾ ನಾಟಕ ತಂಡಗಳು, ಜಾನಪದ ತಂಡಗಳು, ವಿಚಾರ ಸಂಕಿರಣದ ಸಂಪನ್ಮೂಲ ವ್ಯಕ್ತಿಗಳು, ಈ ಮೊದಲು ನಿಶ್ಚಿತವಾದ ಸಮಾರಂಭದ ಎಲ್ಲಾ ಅತಿಥಿಗಳು ಅವರೇ ಇರುತ್ತಾರೆ. ಇದರಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಕಾರ್ಯಕ್ರಮ ಮುಂದೂಡಿರುವುದರಿಂದ ಆಗಿರುವ ತೊಂದರೆಗಳಿಗೆ ವಿಷಾದಿಸುತ್ತೇವೆ.