ಮಂಗಳೂರು:( ಡಿ.4) Open Heart Surgery 10 ದಿನದ ಮಗುವಿಗೆ ಓಪನ್ ಹಾರ್ಟ್ ಸರ್ಜರಿ ಮಾಡಿಸಲು ಮಂಗಳೂರಿನಿಂದ ಬೆಂಗಳೂರಿಗೆ ವೇಗವಾಗಿ ಸಾಗಲಿದೆ ಈ ಆಂಬುಲೆನ್ಸ್.
ಬೆಂಗಳೂರು ಕೆಎಂಸಿಸಿ ಎಂ. ಕೆ ನೌಶದ್ ಅಧ್ಯಕ್ಷರ ನೇತೃತ್ವದಲ್ಲಿ ಒಂದು ಮಹತ್ತರ ಜವಾಬ್ದಾರಿ ಹಾಗೂ ಎಲ್ಲಾ ಕೆಎಂಸಿಸಿ ಪದಾಧಿಕಾರಿಗಳ ನೇತೃತ್ವದಲ್ಲಿ ಮಹತ್ತರ ಮಿಷನ್ ಕೈಗೆತ್ತಿಕೊಂಡಿದೆ.
10ದಿನದ ಕಂದನ ಓಪನ್ ಹಾರ್ಟ್ ಸರ್ಜರಿ
ಇಂದು ಬೆಳಗ್ಗೆ 10.30 ಗಂಟೆಗೆ ಸರಿಯಾಗಿ ಮಂಗಳೂರು ಇಂಡಿಯಾನಾ ಹಾಸ್ಪಿಟಲ್ ನಿಂದಾ ಬೆಂಗಳೂರು ಜಯದೇವ ಆಸ್ಪತ್ರೆಗೆ 10ದಿನದ ಮಗುವನ್ನು ಓಪನ್ ಹಾರ್ಟ್ ಸರ್ಜರಿಗಾಗಿ ಆಂಬುಲೆನ್ಸ್ ಮೂಲಕ ಕರೆದುಕೊಂಡು ಬರಲಾಗುತ್ತಿದೆ.

ಆಂಬುಲೆನ್ಸ್ ಸಾಗಲಿರುವ ಮಾರ್ಗಗಳು
ಮಂಗಳೂರಿನಿಂದಾ ಪಂಪ್ ವೆಲ್ , ಬಿಸಿ ರೋಡ್, ಬಂಟ್ವಾಳ, ಪುಂಜಾಲಕಟ್ಟೆ, ಮಡಂತ್ಯಾರು, ಗುರುವಾಯನಕೆರೆ, ಬೆಳ್ತಂಗಡಿ,ಉಜಿರೆ, ಕಕ್ಕಿಂಜೆ, ಚಾರ್ಮಾಡಿ, ಕೊಟ್ಟಿಗೆಹಾರ, ಬಂಕಲ್ ಹ್ಯಾಂಡ್ ಪೋಸ್ಟ್, ಬೇಲೂರು, ಹಾಸನ್,ನೆಲಮಂಗಲ ದಿಂದಾ ಬೆಂಗಳೂರು ಜಯದೇವ ಆಸ್ಪತ್ರೆ ಗೆ ಬೆಂಗಳೂರು ಕೆ ಎಂ ಸಿಸಿ ಹಾಸ್ಪಿಟಲ್ ಆಂಬುಲೆನ್ಸ್ ಬರುತ್ತಿದ್ದೆ.
ಮಂಗಳೂರಿನಿಂದ ಬೆಂಗಳೂರಿಗೆ ಆಗಮಿಸುತ್ತಿರುವ ಆಂಬುಲೆನ್ಸ್ ಗೆ ಯಾವುದೇ ರೀತಿಯ ಅಡಚಣೆ ಇಲ್ಲದೆ, ಅತ್ಯಂತ ವೇಗವಾಗಿ, ಸುರಕ್ಷಿತವಾಗಿ ಬೆಂಗಳೂರು ಜಯದೇವ ಆಸ್ಪತ್ರೆಗೆ ಮಗು ಸೇರಬೇಕಿದೆ.
ಟ್ರಾಫಿಕ್ ಮುಕ್ತ ಮಾಡಲು ಮನವಿ
ಈ ಒಂದು ಅಮೂಲ್ಯ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕು. ಯಾವ ರಸ್ತೆಯಲ್ಲಿ ಬ್ಲಾಕ್ ಇರುತ್ತದೋ ಅಲ್ಲಿ ಆಂಬುಲೆನ್ಸ್ ಸಂಚಾರಕ್ಕೆ ದಾರಿ ಮಾಡಿಕೊಡಬೇಕು.
ಮಗುವು ಆದಷ್ಟು ಬೇಗ, ಆಸ್ಪತ್ರೆಗೆ ಸೇರಲಿ ಹಾಗೂ ಸರ್ಜರಿ ಯಶಸ್ವಿಯಾಗಿ ನಡೆದು ಗುಣಮುಖವಾಗಿ, ಹಿಂದುರುಗಲಿ ಎಂದು ಸಾರ್ವಜನಿಕರು ಪ್ರಾರ್ಥಿಸಿಕೊಳ್ಳಬೇಕು ಹಾಗೂ ನಾವು ಹೋಗುವ ದಾರಿಯಲ್ಲಿ ಟ್ರಾಫಿಕ್ ಮುಕ್ತ ಮಾಡಿಕೊಡಬೇಕು ಎಂದು ಪೊಲೀಸರಿಗೆ ಹಾಗೂ ಸಾರ್ವಜನಿಕರಲ್ಲಿ ವಿನಂತಿ ಮಾಡಿದ್ದಾರೆ kmcc ಆಂಬುಲೆನ್ಸ್ ನ ಡ್ರೈವರ್ ಹನೀಫ್ ಅವರು ವಿನಂತಿಸಿಕೊಂಡಿದ್ದಾರೆ.