ಬೆಂಗಳೂರು:(ಡಿ.3) Goldenstar Ganesh: ಗೋಲ್ಡನ್ ಸ್ಟಾರ್ ಗಣೇಶ್ ಅವರು ಸಖತ್ ಆಗಿ ತೆರೆಮೇಲೆ ಮಿಂಚುತ್ತಿದ್ದರೇ, ಮತ್ತೊಂದೆಡೆ ಅಭಿಮಾನಿಯೊಬ್ಬರ ಆಸೆಯನ್ನು ಈಡೇರಿಸಿದ್ದಾರೆ.
ಮೊದಲೇ ಹೇಳಿದಂತೆ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ದೊಡ್ಡ ಫ್ಯಾನ್ ಫಾಲೋವರ್ಸ್ ಇದ್ದಾರೆ, ಅದರಲ್ಲೂ ಮುಂಗಾರುಮಳೆ ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಗಣೇಶ ಫಾಲೋವರ್ಸ್ ರೈಲು ಬಂಡಿಯಂತೆ ಬೆಳೆದಿತ್ತು.
ಮುಂಗಾರುಮಳೆ ಸಿನಿಮಾ, ನೋಡಿದ ಬಾಲಕಿಗೆ ಗಣೇಶ್ ಅವರ ಜೊತೆ ಮಾತನಾಡಬೇಕು ಹಾಗೂ ಫೋಟೋ ತೆಗೆದುಕೊಳ್ಳಬೇಕು ಎಂಬ ಆಸೆ ಹುಟ್ಟಿತ್ತು.
ಭದ್ರಾವತಿ ಮೂಲದ ಬಾಲಕಿ, ಇರುವುದು ಬೆಂಗಳೂರಿನಲ್ಲಿ. ಇತ್ತೀಚಿಗಷ್ಟೇ ಗಣೇಶ್ ಅವರ ಸಿಂಪಲ್ ಸುನಿ ನಿರ್ದೇಶನದ ಸಖತ್ ಸಿನೆಮಾ ನೋಡೋದಕ್ಕೆ ಬಾಲಕಿ ಓರಿಯನ್ ಮಾಲ್ ಗೆ ಭೇಟಿ ನೀಡಿದ್ದರು. ಈ ವೇಳೆ ನಟ ಗಣೇಶ್ ಕೂಡ ಊರಿಗೆ ಹೋಗಿದ್ದಾರೆ ಎನ್ನಲಾಗಿದೆ.

ಲಾರ್ಗೆ ಹೋಗಿದ್ದರು ಗಣೇಶ್ ಅವರನ್ನು ಭೇಟಿ ಮಾಡಲು ಸಾಧ್ಯವಾಗದೆ ಬಾಲಕಿ ಮೂರು ದಿನ ಊಟವನ್ನೇ ಬಿಟ್ಟಿದ್ದಾಳೆ. ಕುಟುಂಬಸ್ಥರು ಗಣೇಶ್ ಅವರ ಆಪ್ತರ ಮೂಲಕ ಬಾಲಕಿಯನ್ನು ಗಣೇಶ್ ಅವರ ಮನೆಗೆ ಕರೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ:Kirik Keerthi: ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಕಿರಿಕ್ ಕೀರ್ತಿ ಮೇಲೆ ಹಲ್ಲೆ
ಈ ವೇಳೆ ಗಣೇಶ್ ಅವರು ತಮ್ಮ ನೆಚ್ಚಿನ ಅಭಿಮಾನಿಯನ್ನು ಭೇಟಿ ಮಾಡಿ ಪ್ರೀತಿಯಿಂದ ತಬ್ಬಿಕೊಂಡು ಮಾತನಾಡಿದರು. ಊಟ ಬಿಡಬಾರದು ಎಂದು ಹೇಳಿ ಬುದ್ಧಿವಾದ ಹೇಳಿದ್ದಾರೆ. ಬಾಲಕಿ ಗಣೇಶ್ ಅವರಿಗೆ “ಗಣೇಶ್ ಮಾಮ ಎಂದು ಪ್ರೀತಿಯಿಂದ ಮಾತನಾಡುತ್ತಿದ್ದಾಳೆ” ಈ ಮೂಲಕ ಬಾಲಕಿಯ ಆಸೆಯನ್ನು ಈಡೇರಿಸಿದ್ದಾರೆ ಗೋಲ್ಡನ್ ಸ್ಟಾರ್ ಗಣೇಶ್.
ಈ ವಿಷಯ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ, ಗಣೇಶ್ ಅವರ ಅಭಿಮಾನಿಗಳು ಬಾಲಕಿಗೆ ನೀಡಿದ ಸತ್ಕಾರಕ್ಕೆ ಮನತುಂಬಿ ಹೊಗಳಿದ್ದಾರೆ.