Violence Against Christian (ಡಿ.3)ಭಾರತದಾದ್ಯಂತ 2021ರ (273) ದಿನಗಳಲ್ಲಿ (305) ಹಿಂಸಾಚಾರ ಘಟನೆಗಳು ಕ್ರೈಸ್ತರ ವಿರುದ್ಧ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ 1-800-208-4545 ರಲ್ಲಿ ವರದಿಯಾಗಿದೆ.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಅತಿ ಹೆಚ್ಚು 69 ಘಟನೆಗಳಿಗೆ ಸಾಕ್ಷಿಯಾಗಿದ್ದು ಅನುಕ್ರಮವಾಗಿ ಆಗಸ್ಟ್ ನಲ್ಲಿ 50, ಜನವರಿಯಲ್ಲಿ 37, ಜುಲೈನಲ್ಲಿ 33, ಮಾರ್ಚ್ ಎಪ್ರಿಲ್ ಹಾಗೂ ಜೂನ್ ನಲ್ಲಿ 27, ಫೆಬ್ರವರಿಯಲ್ಲಿ 20 , ಮತ್ತು ಮೇ ತಿಂಗಳಲ್ಲಿ 15 ಘಟನೆಗಳು ವರದಿಯಾಗಿದೆ.
ಹಿಂಸಾಚಾರಕ್ಕೆ ಒಳಗಾದ ರಾಜ್ಯಗಳು:
4 ಉತ್ತರ ಭಾರತದ ರಾಜ್ಯಗಳಾದ ಉತ್ತರಪ್ರದೇಶ 66, ಛತ್ತಿಸ್ಗಢ 47, ಜಾರ್ಖಂಡ್ 30 ಮತ್ತು ಮಧ್ಯಪ್ರದೇಶ 26 ಸೇರಿ ಈ ಒಂಬತ್ತು ತಿಂಗಳಲ್ಲಿ ಕ್ರೈಸ್ತರ ವಿರುದ್ಧ 169 ಹಿಂಸಾಚಾರದ ಘಟನೆಗಳು ದಾಖಲಾಗಿದೆ. ಆದರೆ ದಕ್ಷಿಣದ ಒಂದು ರಾಜ್ಯ ಕರ್ನಾಟಕ ಕ್ರೈಸ್ತರ ವಿರುದ್ಧ 32 ಘಟನೆಗಳೊಂದಿಗೆ ಹೆಚ್ಚಿನ ಸಂಖ್ಯೆಯ ಹಿಂಸಾಚಾರದ ಘಟನೆಗಳಿಗೆ ಸಾಕ್ಷಿಯಾಗಿದೆ.
ಕ್ರೈಸ್ತರು ತಮ್ಮ ಧಾರ್ಮಿಕ ನಂಬಿಕೆ ಗಾಗಿ ಹಿಂಸಾಚಾರಕ್ಕಾಗಿ ಗುರಿಯಾಗಿರುವ ಇತರ ರಾಜ್ಯಗಳೆಂದರೆ, ಬಿಹಾರ 19, ಒಡಿಶಾ 15, ಮಹಾರಾಷ್ಟ್ರ 13, ತಮಿಳುನಾಡು 12, ಗುಜರಾತ್ 9, ಪಂಜಾಬ್ 8, ಆಂಧ್ರಪ್ರದೇಶ 5, ಹರಿಯಾಣ 5, ಉತ್ತರಖಂಡ 5, ತೆಲಂಗಾಣ 2, ಪಶ್ಚಿಮ ಬಂಗಾಳ ಎರಡು ರಾಜಸ್ಥಾನ 2 ಅಸ್ಸಾಂ 1 ಹಿಮಾಚಲ ಪ್ರದೇಶ ಒಂದು.

ಯುಸಿಎಫ್ ಸಹಾಯವಾಣಿ 1000 (1362)ಕ್ಕೂ ಅಧಿಕ ಕರೆಗಳನ್ನು ಸ್ವೀಕರಿಸಿದೆ . ವಕಾಲತ್ತಿನ ಮುಖೇನ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಕುಂದುಕೊರತೆಗಳನ್ನು ತಲುಪಿಸುವ ಸಹಾಯ ಮಾಡುವ ಮೂಲಕ ಅವರಿಗೆ ಅಗತ್ಯವಿರುವ ಸಾಂತ್ವನವನ್ನು ಒದಗಿಸಲಾಗಿದೆ. ತನ್ನ ಮಧ್ಯಸ್ಥಿಕೆಗಳ ಮೂಲಕ ತಂಡವು 210 ಜನರನ್ನು ಬಂಧನದಿಂದ ಬಿಡುಗಡೆಗೊಳಿಸುವ ಕಾರ್ಯನಿರ್ವಹಿಸಿದೆ.
27 ಎಫ್ ಐ ಆರ್ ದಾಖಲು:
ಅಲ್ಲದೆ 46 ಆರಾಧನಾ ಸ್ಥಳಗಳನ್ನು ಪುನಹ ತೆರೆಯಲಾಗಿದೆ ಅಥವಾ ಪ್ರಾರ್ಥನಾ ಸೇವೆಗಳನ್ನು ಮುಂದುವರಿಸಲಾಗಿದೆ. ಆದರೆ ಎಂದಿನಂತೆ ವಿಷಾದವೆಂದರೆ ಹಿಂಸಾಚಾರ ಅಪರಾಧಿಗಳ ವಿರುದ್ಧ ಕೇವಲ 27 ಎಫ್ಐಆರ್ ಗಳು ಮಾತ್ರ ದಾಖಲಿಸಲಾಗಿದೆ.
100 – 200 ಜನರ ಹಿಂಸಾಚಾರ ಗುಂಪು,ಪೋಲಿಸ್ ತಂಡದೊಂದಿಗೆ ಪ್ರಾರ್ಥನಾ ಸ್ಥಳಕ್ಕೆ ಆಗಮಿಸಿ ಪ್ರಾರ್ಥನೆ ಅಥವಾ ಚರ್ಚ್ ಸೇವೆಗಾಗಿ ಅಡ್ಡಿಪಡಿಸುವುದು,ಪಾದ್ರಿಗಳನ್ನು ತಳಿಸುವುದು ಒಂದು ಸಂಸ್ಕೃತಿಯಾಗತೊಡಗಿದೆ.
ಇಂತಹ ಹಿಂಸಾತ್ಮಕ ದೌರ್ಜನ್ಯವನ್ನು ತಡೆಯಲು ಅಂದಿನ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ನೇತೃತ್ವದಲ್ಲಿ ಭಾರತದ ಸುಪ್ರೀಂ ಕೋರ್ಟಿನಿಂದ ಸರ್ಕಾರಕ್ಕೆ ಹಲವಾರು ನಿರ್ದೇಶನಗಳ ನೀಡಿಕೆಯ ಹೊರತಾಗಿಯೂ ಮುಂದುವರೆದಿದೆ.
ಹಿಂಸಾಚಾರ ಘಟನೆಗಳು:
ಇವಿಷ್ಟು ಘಟನೆಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು 1331 ಮಹಿಳೆಯರು ಮತ್ತು 400ರಕ್ಕೂ ಹೆಚ್ಚು ಆದಿವಾಸಿಗಳು 588, ಮತ್ತು ದಲಿತರು 513, ಗಾಯಗೊಂಡಿದ್ದಾರೆ. ಎಂಟು ತಿಂಗಳಲ್ಲಿ ಸುಮಾರು ಮುನ್ನೂರು 288, ಗುಂಪು ದಾಳಿ/ಹಿಂಸಾಚಾರದ ಘಟನೆಗಳು ವರದಿಯಾಗಿದೆ.
23 ಪ್ರಾರ್ಥನಾ ಸ್ಥಳ ಚರ್ಚೆಗಳಿಗೆ ಹಾನಿಯುಂಟುಮಾಡುವ ಘಟನೆಗಳು ವರದಿಯಾಗಿವೆ. 85 ಬಾರಿ ಪೊಲೀಸ್ ಇತರ ಸಂಬಂಧಪಟ್ಟ ಅಧಿಕಾರಿಗಳು, ಜನರು ಧಾರ್ಮಿಕ ಚಟುವಟಿಕೆಗಳಿಗಾಗಿ ಸೇರಲು ಒಂದಲ್ಲ ಒಂದು ನೆಪದಲ್ಲಿ ಅನುಮತಿಸುತ್ತಿಲ್ಲ.
ಈ ವರ್ಷ ಹತ್ತು ಹೊಸ ಪ್ರಕರಣಗಳನ್ನು ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯಡಿ ದಾಖಲಿಸಲಾಗಿದೆ. ಕೆಲವು ರಾಜ್ಯಗಳಲ್ಲಿ ಇಂತಹ ಕಾನೂನುಗಳು 1967 ರಿಂದ ಜಾರಿಯಲ್ಲಿದ್ದರೂ, 50 ವರ್ಷಗಳಿಂದ ಇಂದಿನವರೆಗೂ ಯಾರನ್ನು ಮತಾಂತರಕ್ಕೆ ಒತ್ತಾಯಿಸಿದ್ದ ಕ್ಕಾಗಿ ಒಬ್ಬನೇ ಒಬ್ಬ ಕ್ರಿಸ್ತನನ್ನು ಅಪರಾಧಿಯಾಗಿಸಿಲ್ಲ.
ಇದಲ್ಲದೆ ಪ್ರತಿ ಜನಗಣತಿಯ ನಂತರ ಭಾರತದ 136.64 ಕೋಟಿ (2019) ಜನಸಂಖ್ಯೆಯಲ್ಲಿ ಕ್ರೈಸ್ತ ಜನಸಂಖ್ಯೆಯು ಶೇಕಡ 2.3 ರಷ್ಟು ಇದೆ ಎಂದು ತೋರಿಸಿದೆ.
ಯುಸಿಎಫ್ ಸಹಾಯವಾಣಿ ಸಂಖ್ಯೆ ಬಗ್ಗೆ
ಯುಸಿಎಫ್ ಟೋಲ್ ಸಹಾಯವಾಣಿ ಸಂಖ್ಯೆ 1-800-208-4545 ಅನ್ನು 19 ನೇ ಜನವರಿ 2015 ರಂದು ಮೂಲಭೂತ ಸ್ವತಂತ್ರ್ಯವನ್ನು ಹಿಡಿಯುವ ಮತ್ತು ಭಾರತದ ನ್ಯಾಯ , ಸ್ವಾತಂತ್ರ್ಯ ಸಮಾನತೆ ಮತ್ತು ಭಾತೃತ್ವದ ಮೌಲ್ಯಗಳನ್ನು ಉತ್ತೇಜಿಸುವ ಉದ್ದೇಶದಿಂದ ಪ್ರಾರಂಭಿಸಲಾಗಿದೆ.
ಸಹಾಯವಾಣಿಯು ಸಂಕಷ್ಟದಲ್ಲಿರುವ ಜನರಿಗೆ, ವಿಶೇಷವಾಗಿ ದೇಶದ ಕಾನೂನು ಮತ್ತು ವ್ಯವಸ್ಥೆಯ ಬಗ್ಗೆ ಅರಿವಿಲ್ಲದವರಿಗೆ ಸಾರ್ವಜನಿಕ ಅಧಿಕಾರಿಗಳನ್ನು ಹೇಗೆ ತಲುಪಬೇಕೆಂಬ ಮತ್ತುಮಾರ್ಗದರ್ಶನವನ್ನು ಒದಗಿಸುವ ಮೂಲಕ ಸಹಾಯ ಮಾಡುತ್ತದೆ.