ಬೆಂಗಳೂರು:( ಡಿ.3) Kirik Keerthi: ಬಿಗ್ ಬಾಸ್ ರನ್ನರ್ ಅಪ್, ನಟ ಕಿರಿಕ್ ಕೀರ್ತಿ ಅವರ ಮೇಲೆ ಪಬ್ ನಲ್ಲಿ ಫೋಟೋ ತೆಗೆದ ವಿಚಾರವಾಗಿ ಮಾತಿನ ಚಕಮಕಿ ನಡೆದು ಕಿರಿಕ್ ಕೀರ್ತಿ ತಲೆಗೆ ಬಿಯರ್ ಬಾಟಲಿಯಿಂದ ಹೊಡೆದು ಹಲ್ಲೆ ನಡೆಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಸದಾಶಿವನಗರ ಪೊಲೀಸ್ ಠಾಣಾ ವ್ಯಾಪ್ತಿಯ
ಗುರುವಾರ ತಡರಾತ್ರಿ ಈ ಘಟನೆ ನಡೆದಿದ್ದು, ಸದಾಶಿವನಗರ ಬಳಿಯ ಹ್ಯಾಮರ್ಡ್ ಕ್ಲಬ್ನಲ್ಲಿ ಕಿರಿಕ್ ಕೀರ್ತಿ ಹಾಗೂ ಸ್ನೇಹಿತರು ಮದ್ಯಸೇವನೆಯಲ್ಲಿ ತೊಡಗಿದ್ದ ವೇಳೆ ಇನ್ನೊಂದು ಗುಂಪಿನ ಸದಸ್ಯ ಇವರ ಫೋಟೊ ತೆಗೆದಿದ್ದಾರೆ.
ಫೋಟೊ ತೆಗೆದ ವಿಚಾರಕ್ಕೆ ಜಗಳ:
ಮದ್ಯ ಸೇವನೆಯಲ್ಲಿ ನಿರತರಾಗಿದ್ದ ಕಿರಿಕ್ ಕೀರ್ತಿ ಅವರು ಇನ್ನೊಂದು ಗುಂಪಿನಲ್ಲಿದ್ದ ವ್ಯಕ್ತಿ ಫೋಟೋ ತೆಗೆದ ವಿಚಾರವಾಗಿ, ವ್ಯಕ್ತಿಯನ್ನು ಪ್ರಶ್ನೆ ಮಾಡಿದ್ದರೆ ಈ ವೇಳೆ ಮಾತು ಜಗಳಕ್ಕೆ ತಿರುಗಿ ಹಲ್ಲೆಗೆ ಕಾರಣವಾಗಿದೆ.
ಈ ವೇಳೆ ವ್ಯಕ್ತಿಯೊಬ್ಬ ಬಿಯರ್ ಬಾಟಲಿಯಿಂದ ಕಿರಿಕ್ ಕೀರ್ತಿ ತಲೆಗೆ ಹೊಡೆದು ಗಾಯಗೊಳಿಸಿದ್ದಾನೆ. ಕೂಡಲೇ ಕಿರಿಕ್ ಕೀರ್ತಿ ಅವರನ್ನು ಆಸ್ಪತ್ರೆಯೊಂದರಲ್ಲಿ ಪ್ರಾಥಮಿಕ ಚಿಕಿತ್ಸೆ ದಾಖಲು ಮಾಡಲಾಯಿತು.

ಸದಾಶಿವನಗರದಲ್ಲಿ ಪ್ರಕರಣ ದಾಖಲು:
ಕಿರಿಕ್ ಕೀರ್ತಿ ಅವರ ಮೇಲೆ ನಡೆದ ಹಳ್ಳಿಯ ವಿಚಾರವಾಗಿ ಕಿರಿಕ್ ಕೀರ್ತಿ ಅವರು ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಿಗೆ ಹುಡುಕಾಟ ನಡೆಸಿದ್ದಾರೆ.ಸಿನಿಮೀಯ ದೃಶ್ಯಗಳನ್ನು ನಿಜ ಜೀವನದಲ್ಲಿ ಅನುಸರಿಸಲು ಮುಂದಾಗಿರುವ ಈ ಘಟನೆಯ ಬಗ್ಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.
2018ರಲ್ಲೂ ಹಲ್ಲೆ ನಡೆದಿತ್ತು:
ಕಿರಿಕ್ ಕೀರ್ತಿ ಮೇಲೆ ಹಿಂದೆಯೂ ಕೂಡ ಹಲ್ಲೆ ನಡೆದಿತ್ತು.
2018 ರಲ್ಲಿ ಹಲ್ಲೆ ಮಾಡಲಾಗಿತ್ತು. ಕಾರಿನಲ್ಲಿ ತೆರಳುತ್ತಿದ್ದಾಗ ಜ್ಞಾನಭಾರತಿ ಕ್ಯಾಂಪಸ್ ರಸ್ತೆಯಲ್ಲಿ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ್ದ ಬೈಕ್ ಗೆ ದಾರಿ ಬಿಡುವಂತೆ ಹಾರನ್ ಹೊಡೆದಾಗ ಪಾನಮತ್ತರಾಗಿದ್ದ ಇಬ್ಬರು ಕೀರ್ತಿ ಮತ್ತು ಅವರ ಗೆಳೆಯನ ಮೇಲೆ ಹಲ್ಲೆ ಮಾಡಿದ್ದರು.
ಹಲ್ಲೆ ನಡೆದ ಸ್ಥಳದಲ್ಲಿದ್ದ ಸಾರ್ವಜನಿಕರು ಪಾನಮತ್ತ ಇಬ್ಬರು ಹಲ್ಲೆಕೋರರನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದರು.
ಸದಾ ಸಾಮಾಜಿಕ ಜಾಲತಾಣದಲ್ಲಿ ಅಕ್ವಿವ್ ಆಗಿರುವ ಕಿರಿಕ್ ಕೀರ್ತಿ ಅವರು ಪತ್ರಕರ್ತರಾಗಿ ಕೆಲಸ ಮಾಡುವ ಜೊತೆಗೆ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ.