ಬೆಂಗಳೂರು:( ಡಿ.2) Kavya Gowda ಕಿರುತೆರೆಯ ಖ್ಯಾತ ನಟಿ ಕಾವ್ಯ ಗೌಡ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಉದ್ಯಮಿ ಸೋಮಶೇಖರ ಜೊತೆ ಸಪ್ತಪದಿ ತುಳಿದರು.
ನಿನ್ನೆ ತಾಜ್ ಹೋಟೆಲ್ ನಲ್ಲಿ ಕಾವ್ಯ ಗೌಡ ಹಾಗೂ ಸೋಮಶೇಖರ್ ಅವರ ಆರತಕ್ಷತೆ ಕಾರ್ಯಕ್ರಮ ನಡೆದಿತ್ತು. ಆರತಕ್ಷತೆಗೆ ಅನೇಕ ಕಿರುತೆರೆ ಕಲಾವಿದರು, ನಾಯಕ ನಟಿಯರು, ಆಗಮಿಸಿ ಜೋಡಿಗೆ ಶುಭ ಹಾರೈಸಿತ್ತು. ಗಟ್ಟಿಮೇಳ ಧಾರಾವಾಹಿ ನಟಿ ಅಶ್ವಿನಿ, ಇಂಚರ ಆರತಕ್ಷತೆ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಬ್ಯಾಚುಲರ್ ಪಾರ್ಟಿ:
ಕಾವ್ಯ ಗೌಡ ಮದುವೆಯ ಮುನ್ನ ಸೋಮಶೇಖರ್ ಅವರು ಪತ್ನಿಯ ಆಸೆಯಂತೆ ಬ್ಯಾಚುಲರ್ ಪಾರ್ಟಿ ಆರೆಂಜ್ ಮಾಡಿದ್ದರು. ಕಾವ್ಯ ಗೌಡ ಅವರ ಇಷ್ಟದಂತೆ ಸೋಮಶೇಖರ್ ಅವರು ಅದ್ದೂರಿಯಾಗಿ ಮಾಡಿದರು. ಈ ವೇಳೆ ವಿಶೇಷ ಉಡುಗೆಯನ್ನು ಕೊಟ್ಟು ಇಬ್ಬರು ಮಿಂಚಿದ್ದರು.
ಎಲ್ಲ ಅಂದುಕೊಂಡಂತೆ ಆಗಿದ್ದರೆ ಕಳೆದ ಮೇ ತಿಂಗಳಿನಲ್ಲಿ ಕಾವ್ಯಾ ಗೌಡ ಮದುವೆ ಆಗಬೇಕಿತ್ತು. ಆದರೆ ಕೊರೊನಾ ಕಾರಣಕ್ಕೆ ಮದುವೆಯನ್ನು ಮುಂದಕ್ಕೆ ಹಾಕಿದ್ದರು.
ಈ ಕುರಿತು ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ್ದ ಕಾವ್ಯಾ ಗೌಡ, “ದೇಶದಲ್ಲಿ ಅನೇಕರು ನರಳುತ್ತಿರುವಾಗ ಈ ಸಮಯದಲ್ಲಿ ಮದುವೆಯಾಗೋದು ಸರಿಯಲ್ಲ ಎಂದು ನಿರ್ಧರಿಸಿದ್ದೇವೆ. ಬಹುಬೇಗ ಪರಿಸ್ಥಿತಿ ಸುಧಾರಿಸಲಿದೆ ಎಂದು ಭಾವಿಸುವೆ. ನಮ್ಮ ಮದುವೆ ಮುಂದಕ್ಕೆ ಹೋಗಿದೆ ಎಂದು ಎಲ್ಲರಿಗೂ ಹೇಳಬಯಸುವೆ. ನಿಮ್ಮೆಲ್ಲರ ಪ್ರೀತಿ-ಸಹಕಾರಕ್ಕೆ ಧನ್ಯವಾದಗಳು” ಎಂದು ಹೇಳಿದ್ದರು. ಮೆಹೆಂದಿ, ಅರಿಷಿಣ ಶಾಸ್ತ್ರ ಕೂಡ ಅದ್ದೂರಿಯಾಗಿ ನಡೆಯಿತು.

“ಹುಡುಗ ಪರ್ಫೆಕ್ಟ್ ಅಂತ ಸಿಗೋದು ಕಷ್ಟ, ಆದರೆ ಆಯ್ಕೆ ನಮ್ಮ ಕೈಯಲ್ಲಿರುತ್ತದೆ. ನನಗೆ ಹೇಗೆ ಬೇಕೋ ಹಾಗೆ ಹುಡುಗ ಇದ್ದಾನೆ, ಅವರಿಗೆ ಹೇಗಿರಬೇಕೋ ಹಾಗೆ ನಾನು ಇದ್ದೇನೆ.

ಸೋಮಶೇಖರ್‌ರಂತಹ ಹುಡುಗನನ್ನು ಪಡೆಯಲು ನಾನು ಪುಣ್ಯ ಮಾಡಿದ್ದೇನೆ. ನಿಜಕ್ಕೂ ಅವರ ಗುಣ, ಸ್ವಭಾವ ನನಗೆ ತುಂಬ ಇಷ್ಟ. ನಾನು ಸಾಯಿಬಾಬ ಅವರನ್ನು ತುಂಬ ನಂಬುತ್ತೇನೆ. ನನಗೂ ಸೇರಿ ಎಲ್ಲರಿಗೂ ಒಳ್ಳೆಯದನ್ನು ಮಾಡು ಅಂತ ಕೇಳಿಕೊಳ್ಳುತ್ತೇನೆ, ಅಂತೆಯೇ ಒಳ್ಳೆಯದಾಗುತ್ತಿದೆ” ಎಂದು ಹುಡುಗನ ಬಗ್ಗೆ ‘ವಿಜಯ ಕರ್ನಾಟಕ ವೆಬ್’ ಜೊತೆ ಕಾವ್ಯಾ ಗೌಡ ಅಭಿಪ್ರಾಯ ಹಂಚಿಕೊಂಡಿದ್ದರು.
ಮದುವೆಗೆ ಬಂದವರಿಗೆ ಕಾವ್ಯಾ ಗೌಡ ಹಾಗೂ ಸೋಮಶೇಖರ್ ಜೋಡಿ ಗಿಡವನ್ನು ನೀಡಿ ಪರಿಸರ ಕಾಳಜಿ ಮೆರೆದರು.
ಸೀರಿಯಲ್ ಬಿಟ್ಟು ಡಿಸೈನರ್ ಫೀಲ್ಡ್:
ಕಳೆದ 2 ವರ್ಷಗಳಿಂದ ಕಾವ್ಯಾ ಗೌಡ ಎಷ್ಟೇ ಧಾರಾವಾಹಿ, ಸಿನಿಮಾ ಬಂದರೂ ನಟಿಸುತ್ತಿಲ್ಲ. ಕಾವ್ಯಾ ನಟನೆ ಬಿಟ್ಟು, ಆಭರಣ ಡಿಸೈನ್ ಕಲಿಯುತ್ತಿದ್ದಾರೆ, ಅದನ್ನು ಮುಂದುವರಿಸುತ್ತಾರಂತೆ. ಮದುವೆಗೆ ಸಂಬಂಧಪಟ್ಟ ಎಲ್ಲ ಶಾಸ್ತ್ರಗಳಿಗೂ ಕೂಡ ಕಾವ್ಯಾ ಗೌಡ ತುಂಬ ವಿಭಿನ್ನವಾಗಿ ವಸ್ತ್ರ ವಿನ್ಯಾಸ ಮಾಡಿದ್ದಾರೆ, ಸ್ಟಾರ್ ಡಿಸೈನರ್ ಬಳಿ ವಸ್ತ್ರ ವಿನ್ಯಾಸ ಮಾಡಿಸಿದ್ದರು.
ಕಾವ್ಯಾ ಡಿಸೈನ್ ಮಾಡಿದ ಆಭರಣವನ್ನು ಅವರ ಸಹೋದರಿಯರಿಗೆ ಮದುವೆ ಪ್ರಯುಕ್ತ ಕೊಡಬೇಕು ಅಂದುಕೊಂಡರೂ ಆಗಲಿಲ್ಲ. ಮುಂದಿನ ವರ್ಷ ಅವರಿಗೆ ಕಾವ್ಯಾ ಕೈಯ್ಯಾರೆ ಡಿಸೈನ್ ಮಾಡಿದ ಆಭರಣ ನೀಡುವ ಆಶಯ ಹೊಂದಿದ್ದಾರೆ.