ಬೆಂಗಳೂರು: (ಡಿ.2) Rajyotsava Award ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 66 ಮಂದಿಗೆ ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು. ಪುರಸ್ಕೃತರಿಗೆ ನೀಡಲಾಗುವ ನಗದು ರೂಪದ ಒಂದು ಲಕ್ಷ ರೂ. ನೀಡಲಾಗುವುದು ಎಂದು ತಿಳಿಸಿದ್ದರೂ ಗೌರವಧನ ಒಂದು ತಿಂಗಳಾದರೂ ಇನ್ನೂ ಅವರಿಗೆ ತಲುಪಿಲ್ಲ.
ಪ್ರತಿವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಸಲ್ಲಿಸುತ್ತಿರುವ ಸಾಧಕರಿಗೆ ಮತ್ತು ಸಂಸ್ಕೃತಿ ಇಲಾಖೆ ಈ ಬಾರಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವಿಶೇಷವಾಗಿ ಪ್ರಶಸ್ತಿ ಪುರಸ್ಕೃತರನ್ನು ಗುರುತಿಸಿ 66 ಮಂದಿಯನ್ನು ಆಯ್ಕೆ ಮಾಡಿತ್ತು.

ಬೆಂಗಳೂರಿನಲ್ಲಿ ಪ್ರದಾನ ಮಾಡಲಾಗಿತ್ತು:
ನವಂಬರ್ 1ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬೆಂಗಳೂರಿನ ರವೀಂದ್ರ
ಕಲಾಮಂದಿರದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿತ್ತು.
ಪ್ರಶಸ್ತಿಯಲ್ಲಿ 25 ಗ್ರಾಂ. ಚಿನ್ನದ ಪದಕ, ಶಾಲು, ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ನೀಡಿ ಗೌರವಿಸಿದ್ದರು.
ಹಿಂದಿನ ವರ್ಷ ಪ್ರಶಸ್ತಿ ಪ್ರದಾನ ಮಾಡುವ ಸಂದರ್ಭದಲ್ಲಿ
ನಗದು ಗೌರವ ಧನ ನೀಡಲಾಗುತ್ತಿತ್ತು. ಪ್ರಶಸ್ತಿ ಸ್ವೀಕರಿಸುವರು ಬಾರದೆ ಅವರ ಪ್ರತಿನಿಧಿಗಳು ಸ್ವೀಕರಿಸುವ ಸಂದರ್ಭದಲ್ಲಿ ಕೆಲವೊಂದು ಸಮಸ್ಯೆಗಳ ಆಗುತ್ತಿತ್ತು ಎಂದು ಖಾತೆಗೆ ಹಣ ವರ್ಗಾವಣೆ ಮಾಡುವುದಾಗಿ ತಿಳಿಸಿದರು.
ಈ ಬಾರಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಖಾತೆಗೆ ಹಣ ವರ್ಗಾವಣೆ ಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರಶಸ್ತಿ ಸ್ವೀಕರಿಸಿದವರು ತಮ್ಮ ತಮ್ಮ ಊರಿಗೆ ಮರಳಿ ಖಾತೆಯನ್ನು ಪರಿಶೀಲಿಸಿದ್ದು, ಹಣ ಜಮಾ ಆಗಿಲ್ಲ ಎಂದು ಇಲಾಖೆಗೆ ಸಂಪರ್ಕಿಸಿದ್ದಾರೆ.
ಪ್ರಶಸ್ತಿ ಸ್ವೀಕರಿಸಲು ತೆರಳುವ ಸಂದರ್ಭ ಬಹಳಷ್ಟು ಕಾಳಜಿ ವಹಿಸಿದ್ದರು. ಆದರೆ ಇದೀಗ ಗೌರವಧನಕ್ಕಾಗಿ ಅಂಗಲಾಚುವ ಸ್ಥಿತಿ ಬಂದಿದೆ. ಈ ಮೂಲಕ ಪ್ರಶಸ್ತಿ ಪುರಸ್ಕೃತರಿಗೆ ಅವಮಾನ ಮಾಡಲಾಗಿದೆ ಎಂದು ಪ್ರಶಸ್ತಿ ಪುರಸ್ಕೃತರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

1 ಲಕ್ಷದ ಬದಲಿಗೆ 5 ಲಕ್ಷ:
ರಾಜ್ಯ ಸರ್ಕಾರ ಮುಂದಿನ ವರ್ಷದಿಂದ ಗೌರವಧನದ ಮತ್ತು ಹೆಚ್ಚು ಮಾಡುವುದಾಗಿ ಘೋಷಿಸಿದ್ದರು. ಬಂದು ಲಕ್ಷದ ಬದಲಾಗಿ ಐದು ಲಕ್ಷ ನೀಡುವುದಾಗಿ ಘೋಷಣೆ ಮಾಡಿದ್ದರು ಆದರೆ ಒಂದು ಲಕ್ಷ ನೀಡಲು ಇಷ್ಟು ಸಮಯ ತೆಗೆದುಕೊಂಡವರು ಇನ್ನು ಐದು ಲಕ್ಷ ಭರವಸೆಯ ಮಾತು ಎಂದು ಅಭಿಪ್ರಾಯ ವ್ಯಕ್ತವಾಗಿದೆ.
ಈ ಬಗ್ಗೆ ಮಾತನಾಡಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಲಕ್ಷ್ಮಿ ಮಂಗಳಮೂರ್ತಿ ಅವರು, ಗೌರವಧನವನ್ನು ಬ್ಯಾಂಕ್ ಖಾತೆಗೆ ಹಾಕುವುದಾಗಿ ಪ್ರಶಸ್ತಿ ನೀಡುವ ಸಂದರ್ಭದಲ್ಲಿ ತಿಳಿಸಿದರು ಹಾಗೂ ದಾಖಲೆಗಳನ್ನು ಪಡೆದುಕೊಂಡಿದ್ದರು.
ಇಷ್ಟು ದಿನವಾದರೂ ಖಾತೆಗೆ ಹಣ ವರ್ಗಾವಣೆ ಆಗಿಲ್ಲ ಇಷ್ಟೊಂದು ಕಾಯಬೇಕಾದ ಪರಿಸ್ಥಿತಿ ಬಂದಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಇದನ್ನು ಓದಿ: Karrnikhoda kallurti: ನಾಳೆಯಿಂದ ‘ಕಾರ್ನಿಕೊದ ಕಲ್ಲುರ್ಟಿ’ ತೆರೆಗೆ

ಕನ್ನಡ ಸಂಸ್ಕೃತಿ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಾದ ಮಂಜುಳಾ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸರ್ಕಾರದಿಂದ ಹಣ ಡೈರೆಕ್ಟರಿಗೆ ಬಿಡುಗಡೆಯಾಗುತ್ತದೆ.
ಆನಂತರ ಹಣ ಖಜಾನೆ 2 ಮುಖಾಂತರ ಪಾವತಿಯಾಗಿ, ನೇರವಾಗಿ ಖಾತೆಗೆ ಹೋಗುತ್ತದೆ.
ಬಿಲ್ಲ ಟ್ರೇಸರ್ ಗೆ ಮನವಿ ಸಲ್ಲಿಸಲಾಗಿದ್ದು ಅದರಲ್ಲಿ ಸ್ವಲ್ಪ ವಿಳಂಬವಾದರೆ ಸಮಸ್ಯೆಯಾಗುತ್ತದೆ ಈ ಬಗ್ಗೆ ಪರಿಶೀಲಿಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ.