ಹುಬ್ಬಳ್ಳಿ (ಡಿ.1): Booster Dose ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದಿರುವ ಹೊಸ ರೂಪಾಂತರಗಳ ಒಮಿಕ್ರನ್ ಸದ್ಯ ಭಾರತದಲ್ಲಿ ಪ್ರಕರಣಗಳು ಪತ್ತೆಯಾಗಿಲ್ಲ ಎಂಬ ಮಾಹಿತಿ ಅಧಿಕಾರಿಗಳು ತಿಳಿಸಿದ್ದರೂ, ಮುಂಜಾಗ್ರತಾ ಕ್ರಮವಾಗಿ ಸರ್ಕಾರ ಭಾರತದ ಗಡಿ ಪ್ರದೇಶಗಳಲ್ಲಿ ಬಿಗಿ ಭದ್ರತೆ ಕೈಗೊಂಡಿದೆ.
ಕರೋನಾ ಮೊದಲನೇ ಮತ್ತು ಎರಡನೇ ಅಲೆಗೆ ಕೋವಾಕ್ಸಿನ್, ಕೋವಿಶೀಲ್ಡ್ ಲಸಿಕೆಗಳನ್ನು ಜನರು ಹಾಕಿಸಿಕೊಳ್ಳುತ್ತಿದ್ದಾರೆ.ಇದರ ನಡುವೆ ಹೊಸ ರೂಪಾಂತರಿ ವೈರಸ್ ವಿಶ್ವಕ್ಕೆ ಕಾಲಿಟ್ಟಿದ್ದು, ಕೋವಿಡ್ ವಾರಿಯರ್ಸ್ ಗೆ ಕೋವಿಡ್ ಬೂಸ್ಟರ್ ಲಸಿಕೆ ನೀಡಲು ನಿರ್ಧರಿಸಿದೆ.
ಏನಿದು ಬೂಸ್ಟರ್ ಡೋಸ್:
ಲಸಿಕೆ ಹೆಚ್ಚುವರಿ ಶಾಟ್ ನೊಂದಿಗೆ ಜನರಿಗೆ ಚುಚ್ಚುಮದ್ದು ನೀಡುವ ಪ್ರಕ್ರಿಯೆಯಾಗಿದೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಸಹಕಾರಿಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೊರೊನಾ ವಾರಿಯರ್ಸ್ಬೂ ಸ್ಟರ್ ಡೋಸ್ ಲಸಿಕೆ ನೀಡಲು ತಿಳಿಸಿದ್ದಾರೆ.

ಮುಖ್ಯ ಮಂತ್ರಿಯವರು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾತನಾಡಿ, ಕೋರೋನಾ ಕಠಿಣ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿದೆ . ನಾಳೆ ದೆಹಲಿಗೆ ಭೇಟಿ ನೀಡಿ ಕೇಂದ್ರ ಆರೋಗ್ಯ ಸಚಿವರನ್ನು ಭೇಟಿ ಮಾಡುತ್ತಿದ್ದೇನೆ ನಮ್ಮ ಕೋರೋನಾ ವಾರಿಯರ್ಸ್ 2 ಡೋಸ್ ತೊಗೊಂಡು 6, 7 ತಿಂಗಳು ಕಳೆದಿದೆ ಅವರಿಗೆ ಕೊಡುವ ಬಗ್ಗೆ ಚರ್ಚೆ ಮಾಡುತ್ತೇವೆ.
ರಾಜ್ಯದ ಗಡಿ ಪ್ರದೇಶಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದು ಆಫ್ರಿಕಾದಿಂದ ಬಂದ ಪ್ರವಾಸಿಗರ ಸ್ಯಾಂಪಲ್ ಕಳುಹಿಸಿದ್ದೇವೆ.ವಿದೇಶದಿಂದ ಬಂದವರ ಮೇಲೆ ಒಂದು ವಾರ ಹನಿಗಳ ಲಾಗಿದ್ದು ಕೇರಳ ರಾಜ್ಯದಿಂದ ಬಂದವರಿಗೂ ಸೂಚನೆ ನೀಡಲಾಗಿದೆ.
ಹೊಸವರ್ಷ ಆಚರಣೆ ಬ್ರೇಕ್?
ಹೊಸ ವರ್ಷ ಆಚರಣೆಗೆ ಹಾಗೂ ಕ್ರಿಸ್ಮಸ್ ಹಬ್ಬಕ್ಕೆ ಹೊಸ ಮಾನದಂಡ ರೂಪಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.ಜನರ ಆರ್ಥಿಕ ಪರಿಸ್ಥಿತಿ ಈಗಷ್ಟೇ ಸುಧಾರಿಸುತ್ತಿದೆ ಹಾಗಾಗಿ ಲಾಕ್ ಡೌನ್ ಬಗ್ಗೆ ಪ್ರಸ್ತಾವನೆ ಇಲ್ಲ ಎಂದು ಹೇಳಿದ್ದಾರೆ.
94 ಕೋಟಿ ಬೂಸ್ಟರ್ ಡೋಸ್:
ಕಡಿಮೆ ರೋಗ ನಿರೋಧಕ ಶಕ್ತಿಯನ್ನು ಹೊಂದಿರುವ ಜನರಿಗೆ ಹೆಚ್ಚುವರಿ ಕೋವಿಡ್ ಲಸಿಕೆ ಡೋಸ್ಗಳನ್ನು ನೀಡುವ ಕುರಿತು ಮುಂದಿನ ಎರಡು ವಾರಗಳಲ್ಲಿ ಸಮಗ್ರ ನೀತಿಯನ್ನು ರಚಿಸಲಾಗುತ್ತೆ ಎಂದು ದೇಶದ ಕೋವಿಡ್ ಕಾರ್ಯಪಡೆ ಅಧ್ಯಕ್ಷ ಡಾ. ಎನ್.ಕೆ. ಅರೋರಾ ಮಾಹಿತಿ ನೀಡಿದ್ದಾರೆ.
ಬೂಸ್ಟರ್ ಡೋಸ್ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ವಿವಿಧ ದೇಶಗಳಲ್ಲಿ ವೃದ್ಧರಿಗೆ ಬೂಸ್ಟರ್ ಡೋಸ್ಗಳನ್ನು ನೀಡಲಾಗುತ್ತಿದೆ. ಅದರಲ್ಲೂ ಕೊರೊನಾದ ಹೊಸ ರೂಪಾಂತರಿ ಓಮಿಕ್ರಾನ್ನ್ನು ದೃಷ್ಟಿಯಲ್ಲಿರಿಸಿ ಈ ಬೂಸ್ಟರ್ ಡೋಸ್ ಬಗ್ಗೆ ಚಿಂತಿಸಬೇಕಿದೆ. ಬೂಸ್ಟರ್ ಡೋಸ್ ಅಂದರೆ ನಾವು 94 ಕೋಟಿ ಡೋಸ್ಗಳನ್ನು ಉತ್ಪಾದಿಸಬೇಕು. ಇದು ಒಂದೇ ರಾತ್ರಿಯಲ್ಲಿ ಆಗುವ ಕೆಲಸವಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ದೇಶದಲ್ಲಿ ಕೊರೊನಾ ಲಸಿಕೆಗೆ ಯಾವುದೇ ಕೊರತೆ ಇಲ್ಲ ಅಂತಲೂ ಹೇಳಿದ್ರು. ಕೊರೊನಾ ಲಸಿಕೆ ಅಭಿಯಾನ ಆರಂಭವಾಗಿ ಇಷ್ಟು ಸಮಯ ಕಳೆದರೂ ಸಹ ದೇಶದಲ್ಲಿ ಇನ್ನೂ 12 ರಿಂದ 15 ಕೋಟಿ ಜನರು ಒಂದೇ ಒಂದು ಡೋಸ್ ಲಸಿಕೆಯನ್ನು ಪಡೆದಿಲ್ಲ. 30 ಕೋಟಿ ಭಾರತೀಯರು 2ನೇ ಡೋಸ್ ಲಸಿಕೆಯನ್ನು ಪಡೆದಿಲ್ಲ. ಆದರೆ ಈ ಸಂದರ್ಭದಲ್ಲಿ ಕೊರೊನಾ ಲಸಿಕೆ ಅಭಿಯಾನಕ್ಕೆ ಚುರುಕು ಮುಟ್ಟಿಸುವುದು ಅತ್ಯಂತ ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.