ಮಂಗಳೂರು: (ಡಿ.1) Children Missing ಮಕ್ಕಳು ನಾಪತ್ತೆಯಾಗಿರುವ ಪ್ರಕರಣಗಳ ಕುರಿತು ಅಂಕಿಅಂಶಗಳನ್ನು ಹಾಕಲಾಗಿದೆ. ಇದುವರೆಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 133 ಮಕ್ಕಳು ನಾಪತ್ತೆಯಾಗಿದ್ದಾರೆ.
18 ವರ್ಷಕ್ಕಿಂತ ಕೆಳಗಿನವರಲ್ಲಿ ನಾಪತ್ತೆಯಾಗಿದ್ದು 7 ಮಂದಿ ಬಾಲಕರು ಹಾಗೂ 5 ಬಾಲಕರನ್ನು ಇನ್ನೂ ಪತ್ತೆ ಹಚ್ಚಲಾಗಿಲ್ಲ.
ಕಾರಣಗಳು ಹೀಗಿವೆ:
ಮಕ್ಕಳು ನಾಪತ್ತೆಯಾದುದರ ಬಗ್ಗೆ ಕಾರಣಗಳನ್ನು ವಿಂಗಡಿಸಿದಾಗ. ಮೊದಲನೇದಾಗಿ ಹೆತ್ತವರ ವರ್ತನೆಯಿಂದಲೇ ಕಾರಣವಾಗುತ್ತದೆ.
ಕೌಟುಂಬಿಕ ವಿಚಾರಕ್ಕೆ ಬಂದಾಗ ಮಕ್ಕಳ ತಜ್ಞರು ಮಕ್ಕಳ ಕಲ್ಯಾಣ ಸಮಿತಿಯವರು ಹಾಗೂ ಮಕ್ಕಳ ಆಪ್ತಸಮಾಲೋಚಕರ ವಿಶ್ಲೇಷಣೆಯಲ್ಲಿ ಹೆತ್ತವರ ಕುಡಿತದ ಚಟ, ನಿರಂತರ ಕಲಹದಿಂದ ಮನನೊಂದು ಅನೇಕ ಮಕ್ಕಳು ಮನೆ ಬಿಟ್ಟಿದ್ದಾರೆ ಎನ್ನಲಾಗಿದೆ.

ಹೆತ್ತವರು ನೀಡುವ ಶಿಕ್ಷೆ:
ಸಣ್ಣಪುಟ್ಟ ತಪ್ಪಿಗೂ ಮಕ್ಕಳಿಗೆ ಕಠಿಣ ಶಿಕ್ಷೆಯನ್ನು ನೀಡುವ ಹೆತ್ತವರು ಇನ್ನೊಂದು ಪ್ರಮುಖ ಕಾರಣವಾಗುತ್ತದೆ.
ಉಳಿದಂತೆ ವಿದ್ಯಾಭ್ಯಾಸದಲ್ಲಿ ಹಿಂದುಳಿದು ಮನೆಯವರಿಂದ ನಿರ್ಲಕ್ಷಿಸಲ್ಪಟ್ಟ ಅಥವಾ ತಿರಸ್ಕರಿಸಿದಾಗ ಮಕ್ಕಳಲ್ಲಿ ವರ್ತನೆ ಬದಲಾಗುತ್ತದೆ.
ಹದಿಹರೆಯದಲ್ಲಿ ಕಾಲಿಡುವ ಮಕ್ಕಳು ಗಂಡು ಹಾಗೂ ಹೆಣ್ಣಿನ ಕುರಿತಾದ ಆಕರ್ಷಣೆ ಕುತೂಹಲ ಹಾಗೂ ತಪ್ಪುಕಲ್ಪನೆ ಆಮಿಷ ಮೊದಲಾದವುಗಳು ಕೂಡ ಮಕ್ಕಳ ನಾಪತ್ತೆಗೆ ಕಾರಣವಾಗುತ್ತದೆ ಎಂದು ಹೇಳಲಾಗಿದೆ.
ಈ ಬಗ್ಗೆ ಮಂಗಳೂರಿನ ಮಾನಸಿಕ ಆರೋಗ್ಯ ತಜ್ಞ ಡಾ. ರಮೀಳಾ ಶೇಖರ್ ಅವರು ಮಾತನಾಡಿ, ಕಲಹ ಗಿರುವ ಕುಟುಂಬದಿಂದ ಮಕ್ಕಳು ನಾಪತ್ತೆಯಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ.
ಹೆತ್ತವರು ತಮ್ಮ ವರ್ತನೆಯನ್ನು ಸುಧಾರಿಸಿಕೊಳ್ಳಬೇಕು ಹಾಗೂ ಮಕ್ಕಳನ್ನು ಸೂಕ್ಷ್ಮವಾಗಿ ನಿಭಾಯಿಸುವುದನ್ನು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಕ್ಕಳನ್ನು ಕೌಶಲ್ಯಗಳನ್ನು ಹೆಚ್ಚಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 101 ಮತ್ತು ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 32 ಪ್ರಕರಣಗಳು ದಾಖಲಾಗಿದೆ.ಇನ್ನು ಲಾಕ್ಡೌನ್ ಇರುವ ಸಂದರ್ಭದಲ್ಲಿ 38 ಮಕ್ಕಳು ನಾಪತ್ತೆಯಾಗಿದ್ದರು ಹಾಗೂ ಈ ವರ್ಷ ನಾಪತ್ತೆಯಾಗಿರುವ ಎಲ್ಲಾ ನಾಲ್ಕು ಮಕ್ಕಳನ್ನು ಪತ್ತೆ ಹಚ್ಚಲಾಗಿದೆ.
ಚೈಲ್ಡ್ ಲೈನ್ ಕುರಿತು ಜಾಗೃತಿ:
18 ವರ್ಷಕ್ಕಿಂತ ಕೆಳಗಿನವರು ಕಾಣೆಯಾದರೆ ಪೊಲೀಸ್ ಠಾಣೆಗಳಲ್ಲಿ ಅಪಹರಣ ಪ್ರಕರಣಗಳು ದಾಖಲಿಸಿಕೊಳ್ಳಲಾಗುತ್ತದೆ. ಮಕ್ಕಳ ರಕ್ಷಣೆಗಾಗಿ ಪೊಲೀಸರ ಜೊತೆಗಿನ ಮಕ್ಕಳ ರಕ್ಷಣಾ ಘಟಕ ಹಾಗೂ ಚೈಲ್ಡ್ ಲೈನ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಹೆಚ್ಚಿನ ಸಂಖ್ಯೆಯಲ್ಲಿ ದೂರುಗಳು ದಾಖಲಾಗುತ್ತಿವೆ ಎನ್ನುತ್ತಾರೆ ಪೊಲೀಸ್ ಅಧಿಕಾರಿಗಳು.