Food in Freez: (ನ.30): ಮನೆಯಲ್ಲಿ ಮಾಡಿದ ಆಹಾರ ವ್ಯರ್ಥವಾಗಬಾರದು ಎಂದು ಮನೆಯಲ್ಲಿರುವ ಫ್ರೀಜರ್ನಲ್ಲಿ ಇರುತ್ತೇವೆ.
ಆಹಾರ ಮಾತ್ರವಲ್ಲದೆ ಕೆಲವೊಂದು ಕಾಡು ಕಡ್ಡಿಗಳನ್ನು ಸಹ ಸೀಸನ್ನಲ್ಲಿ ಇಡುತ್ತಾರೆ ಆದರೆ ಯಾವ ವಸ್ತುಗಳನ್ನು ಇಡಬಹುದು ಹಾಗೂ ಇಡಬಾರದು ಎಂದು ತಿಳಿದಿರಬೇಕು.
ಕೆಲವು ಆಹಾರ ಪದಾರ್ಥಗಳು ಆರೋಗ್ಯಕ್ಕೆ ಅಪಾಯಗಳನ್ನು ಉಂಟುಮಾಡಬಹುದು ಹಾಗಾಗಿ ನೀವು ಈ ಕೆಲವು ಆಹಾರಗಳನ್ನು ಎಂದಿಗೂ ಫ್ರೀಜರ್ ಇಡಬೇಡಿ.
ಸೌತೆಕಾಯಿ
ನೀರು ಅಂಶವಿರುವ ಸೌತೆಕಾಯಿಗಳನ್ನು ಫ್ರೀಜರ್ನಲ್ಲಿ ಹೆಚ್ಚು ಸಮಯ ಸಂಗ್ರಹಿಸಿದಾಗ ಅವುಗಳ ರುಚಿ ಕೆಡುತ್ತದೆ. ಸೌತೆಕಾಯಿಯನ್ನು ಫ್ರೀಜರ್ನಲ್ಲಿ ಇಟ್ಟ ಮೇಲೆ ಅದರ ರುಚಿ ಹಾಗೂ ನೀರಿನ ಅಂಶ ಬೇಗ ಕಡಿಮೆಯಾಗುತ್ತದೆ.
ಮೊಟ್ಟೆ:
ಮೊಟ್ಟೆಗಳನ್ನು ಫ್ರೀಜರ್ ನಲ್ಲಿಟ್ಟು ತುಂಬಾ ಸಮಯದವರೆಗೆ ಬಳಸಿಕೊಳ್ಳಬಹುದು ಎಂದಾದರೆ ಅದು ತಪ್ಪು. ಮೊಟ್ಟೆಗಳನ್ನು ಫ್ರೀಜರ್ನಲ್ಲಿ ಸಂಗ್ರಹಿಸಿದರೆ ಅದರಲ್ಲಿರುವ ನೀರಿನ ಅಂಶವು ಹೆಚ್ಚಾಗುತ್ತದೆ.
ಇದರಿಂದ ಮೊಟ್ಟೆಯ ಮೇಲೆ ಬಿರುಕುಗಳು ಉಂಟಾಗಿ ಹಲವಾರು ಬ್ಯಾಕ್ಟೀರಿಯಾಗಳಿಗೆ ಕಾರಣವಾಗುತ್ತದೆ.ನೀವು ಮೊಟ್ಟೆಗಳನ್ನು ಫ್ರೀಜರ್ನಲ್ಲಿ ಇಡಬೇಕು ಎಂದಾದರೆ ಮೊಟ್ಟೆಗಳನ್ನು ಗಾಳಿಯಾಡದ ಡಬ್ಬಗಳಲ್ಲಿ ಇಡಬಹುದು.

ಹಣ್ಣುಗಳು
ಯಾವುದೇ ಕಾರಣಕ್ಕೂ ಹಣ್ಣುಗಳನ್ನು ಫ್ರೀಜರ್ನಲ್ಲಿ ಇಡಬಾರದು. ಇದರಿಂದ ಹಣ್ಣುಗಳಲ್ಲಿರುವ ಪೌಷ್ಟಿಕಾಂಶ ಕಡಿಮೆಯಾಗುತ್ತದೆ ಹಾಗೂ ಅದರಲ್ಲಿರುವ ರುಚಿ ಹಾಗೂ ಇತರ ಅಂಶಗಳು ನಷ್ಟವಾಗುತ್ತದೆ.
ಕರಿದ ಪದಾರ್ಥಗಳು:
ಕರಿದ ಪದಾರ್ಥಗಳನ್ನು ಹಾಗೂ ಫ್ರೈಡ್ ಫುಡ್ ಹೆಚ್ಚಾಗಿ ಉಳಿದರೆ ಅವುಗಳನ್ನು ಮರು ಬಳಸಲು ನಾವು ಫ್ರೀಜರ್ನಲ್ಲಿ ಇಡುತ್ತೇವೆ ಅಂದರೆ ಹಾಗೆ ಮಾಡುವುದರಿಂದ ಮತ್ತೆ ಬಿಸಿ ಮಾಡೋದು ಕಷ್ಟ ಆಗುತ್ತದೆ.ಅದರಲ್ಲಿರುವ ಕ್ರಿಸ್ಪಿನೆಸ್ ಕಡಿಮೆಯಾಗುತ್ತದೆ.

ಯಾವುದನ್ನು ಇಡಬಹುದು?
ಕೆಲವು ಅಹಾರ ಪದಾರ್ಥವನ್ನು ಫ್ರೀಜರ್ ನಲ್ಲಿ ಇಡಬಹುದು. ಯಾಕೆಂದರೆ ಅಂಗಡಿಯಿಂದ ತಂದ ಕೆಲವು ಆಹಾರಗಳು, ಹೊರಗಡೆ ಇಟ್ಟಾಗ ಹುಳ, ಬೂಸ್ಟ್ ಬರುವ ಸಾಧ್ಯತೆಗಳು ಇರುತ್ತದೆ.
ಧಾನ್ಯಗಳು
ಅಂಗಡಿಯಿಂದ ತಂದ ಕಡಲೆಕಾಳು, ಹುರುಳಿ, ತೊಗರಿಬೇಳೆ ಮುಂತಾದ ಧಾನ್ಯಗಳನ್ನು ಫ್ರೀಜರ್ನಲ್ಲಿ ಇಡಬಹುದು. ಈ ದಾನ್ಯಗಳು ಹೊರಗೆ ಇದ್ದಷ್ಟು ಹುಳಗಳು, ಪೋಸ್ಟ್ ಬರುವ ಸಾಧ್ಯತೆ ಇರುತ್ತದೆ.
ಸೊಪ್ಪು
ಸೊಪ್ಪುಗಳನ್ನು ಫ್ರೀಜರ್ನಲ್ಲಿ ಇರುವಾಗ ಪ್ಲಾಸ್ಟಿಕ್ ಕವರಿನಲ್ಲಿ ಬಿಗಿಯಾಗಿ ಕಟ್ಟಿ ಅಥವಾ ಗಾಳಿಯಾಡದ ಡಬ್ಬದಲ್ಲಿ ಸೊಪ್ಪುಗಳನ್ನು ಬೇರಿನಿಂದ ಬಿಡಿಸಿಕೊಂಡು ಇಡಬಹುದು.
ನೆನಪಿರಲಿ! ಸೊಪ್ಪುಗಳನ್ನು ಎಂದಿಗೂ ಹಾಗೆ ಇಡಬೇಡಿ, ಎಲೆಗಳು ತನ್ನ ತಾಜಾತನ ಕಳೆದುಕೊಳ್ಳುತ್ತದೆ.