ಬೆಂಗಳೂರು: (ನ.30) Omicran ದಕ್ಷಿಣ ಆಫ್ರಿಕಾದಲ್ಲಿ ಕಂಡುಬಂದಿರುವ ಕೊರೋನಾದ ಹೊಸ ರೂಪಾಂತರ ಒಮಿಕ್ರಾನ್ ವೈರಸ್ ತಡೆಯುವ ಮುನ್ನೆಚ್ಚರಿಕೆಯ ಕ್ರಮವಾಗಿ ಇಂದು ಆರೋಗ್ಯ ಸಚಿವ ಕೆ ಸುಧಾಕರ್ ನೇತೃತ್ವದಲ್ಲಿ ನಡೆದ ತಾಂತ್ರಿಕ ಸಲಹಾ ಸಮಿತಿಯ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಲಹೆ ಸೂಚನೆಗಳನ್ನು ನೀಡಿದ್ದು ವಿದೇಶದಿಂದ ಬರುವವರಿಗೆ RTPCR ಟೆಸ್ಟ್ ಕಡ್ಡಾಯಗೊಳಿಸಲಾಗಿದೆ
ಒಂದು ವಾರ ಕ್ವಾರಂಟೈನ್
ಅಂತರಾಷ್ಟ್ರೀಯ ಪ್ರಯಾಣಿಕರು ಒಂದು ವಾರ ಮನೆಯಲ್ಲೇ Quarntine ಮಾಡಬೇಕಿದೆ. ವರದಿಯ ಪ್ರಕಾರ ಎರಡುವರೆ ಸಾವಿರ ಪ್ರಯಾಣಿಕರು ವಿದೇಶದಿಂದ ಆಗಮಿಸುತ್ತಿದ್ದಾರೆ. ಕೊರೋನಾ ಗುಣಲಕ್ಷಣಗಳು ಐದನೇ ದಿನ ಮತ್ತು ಆರ್ಟಿ ಪಿಸಿಆರ್ ಟೆಸ್ಟ್ ಮಾಡಿಸಲಾಗುವುದು.
ಏಳನೇ ದಿನ ಟೆಸ್ಟ್ ಮಾಡಿ ನೆಗೆಟಿವ್ ಬಂದರೆ ಹೊರಗಡೆ ಹೋಗಬಹುದು ಹಾಗೂ ಟೆಲಿಮೆಡಿಸಿನ್ App ಮೂಲಕ ವಾರಂಟಿ ಮೇಲ್ವಿಚಾರಣೆ ಮಾಡಲಾಗುವುದು.

ಆ್ಯಪ್ ಬಳಕೆ:
ಕರ್ನಾಟಕ ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಇಂದು ಸಭೆ ನಡೆಸಿದ್ದು, ವೈರಸ್ ನಿಯಂತ್ರಣ ಮಾಡುವ ಕುರಿತು ಚರ್ಚೆ ಮಾಡಲಾಗಿದೆ ಬಂದರೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು ಹಾಗೂ ಅನೇಕ ತಂತ್ರಜ್ಞಾನ ಬಳಸಿ ವೈರಸ್ ಸಂಬಂಧಿತ ವಿವಿಧ App ಮಾಡಿದ್ದೇವೆ.
ಪ್ರೋಟಾಕಾಲ್ ಸಮಿತಿ ಅಧ್ಯಕ್ಷರಾಗಿ ಡಾ. ರವಿ ಅವರನ್ನು ನೇಮಕ ಮಾಡಲಾಗಿದೆ. ಈ ಸಮಿತಿಯಲ್ಲಿ ಹೊಸ ಪ್ರಭೇದದಿಂದ ಇನ್ಫೆಕ್ಟ್ ಆದವರಿಗೆ ಯಾವ ರೀತಿಯ ಚಿಕಿತ್ಸೆ ನೀಡಬೇಕು ಎಂಬ ಪ್ರೋಟೋಕಾಲ್ ನೀಡಲಾಗುತ್ತದೆ. ಇದಕ್ಕೆ ಯಾವ ಔಷಧಿ ಎಂಬುದನ್ನು ಸಹ ಪ್ರೋಟೋಕಾಲ್ ನಲ್ಲಿ ನಮೂದಿಸಲಾಗುತ್ತದೆ. ಪ್ರತಿ ಜಿಲ್ಲೆಯಲ್ಲೂ ಪ್ರತಿಯೊಬ್ಬರೂ ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಈ ಹೊಸ ವೈರಸ್ ಹರಡುವಿಕೆ ಹೆಚ್ಚಾಗಿದ್ದು ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ ಮುಂಜಾಗ್ರತೆ ಕ್ರಮ ವಹಿಸಬೇಕು ಎಂದು ಮಾಡಿದ್ದಾರೆ.
ಕೆಲವು ದೇಶಗಳಿಗೆ ನಿರ್ಬಂಧ:
ಕೆಲವು ವಿದೇಶಗಳಿಂದ ಬರುವವರಿಗೆ ನಿರ್ಬಂಧ ಹೇರಬೇಕು ಎಂಬ ಅಭಿಪ್ರಾಯವು ಮುಂದಿದ್ದು, ಈ ಬಗ್ಗೆ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಹಾಗೂ ಲಸಿಕೆ ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದ್ದು ಜನರು ಸ್ವಯಂ ಪ್ರೇರಿತವಾಗಿ ಲಸಿಕೆಯನ್ನು ಪಡೆಯಬೇಕು ಎಂದರು.
ವೈರಸ್ ನಿಯಂತ್ರಣದ ಸಭೆಯಲ್ಲಿ ಬೆಳಗಾವಿ ಅಧಿವೇಶನ ರದ್ದು ಮಾಡಬೇಕು ಎಂಬ ಕೂಗು ಕೇಳಿಬಂದಿದೆ ದೆಹಲಿಯಲ್ಲಿ ಸಂಸತ್ ಅಧಿವೇಶನ ನಡೆಯುತ್ತಿದೆ. ಬೆಳಗಾವಿ ಅಧಿವೇಶನ ಬಗ್ಗೆ ಸದ್ಯ ಏನು ಹೇಳಲಾಗುವ ಪರಿಸ್ಥಿತಿ ಇದೆ. ಇಂದು ಈ ಬಗ್ಗೆ ಚರ್ಚೆ ಮಾಡಿದ್ದೇವೆ. ಈ ವಿಷಯ ಕುರಿತು ಮುಖ್ಯಮಂತ್ರಿಯವರ ಬಳಿ ಹಾಗೂ ತಾಂತ್ರಿಕ ಸಲಹಾ ಸಮಿತಿಯ ಬಳಿ ಸಿಎಂ ಅವರು ಚರ್ಚೆ ಮಾಡಬೇಕಾಗಿದೆ ಎಂದು ಹೇಳಿದರು.