ದೆಹಲಿ (ನ.30):Twitter CEO Resigned ಟ್ವಿಟರ್ ಸಂಸ್ಥೆಯ ಸಿಇಒ ಸ್ಥಾನಕ್ಕೆ ಜ್ಯಾಕ್ ಡಾರ್ಸೆ ಅವರು ನೆನ್ನೆ ರಾಜೀನಾಮೆ ಘೋಷಿಸಿದ್ದಾರೆ. 16 ವರ್ಷಗಳ ಕಾಲ ಟ್ವಿಟರ್ ಸಂಸ್ಥೆಯ ಸಹ ಸಂಸ್ಥಾಪಕರಾಗಿದ್ದ ಜ್ಯಾಕ್ ಡಾರ್ಸೆ ಕಾರ್ಯ ನಿರ್ವಹಿಸಿದ್ದರು.
ನೂತನ ಸಿಇಒ ನೇಮಕ
ಟ್ವಿಟರ್ ನ ನೂತನ ಸಿಇಒ ಆಗಿ ಪರಾಗ್ ಅಗರ್ವಾಲ್ ನೇಮಕವಾಗಿದ್ದಾರೆ. ನೂತನ ಸಿಇಒ ಭಾರತೀಯ ಪರಾಗ್ ಅಗರವಾಲ್ ಆಯ್ಕೆ ಆಗಿದ್ದಾರೆ. ಮುಂಬೈನ ಐಐಟಿಯಲ್ಲಿ ವ್ಯಾಸಂಗ ಮಾಡಿದ್ದರು ಎನ್ನಲಾಗಿದೆ.

ಜ್ಯಾಕ್ ಡೋರ್ಸೆ ಮೇಲೆ ಆರೋಪ:
ಡೋರ್ಸೆ ಟ್ವಿಟರ್ ಸಿಇಒ ಸ್ಥಾನದಿಂದ ಕೆಳಗೆ ಇಳಿಯಬೇಕು ಎಂದು 2020ರ ಆರಂಭದಲ್ಲಿ ಒತ್ತಾಯಿಸಿತ್ತು.
ಜ್ಯಾಕ್ ಡೋರ್ಸೆ ಸ್ಕ್ವೇರ್ ಐಎನ್ಸಿ ಕಡೆಗೆಗಮನ ನೀಡುತ್ತಿದ್ದಾರೆ, ಟ್ವಿಟರ್ ಕಡೆಗೆ ಗಮನಹರಿಸುತ್ತಿಲ್ಲ ಎಂದು ಟ್ವಿಟರ್ನ ಪಾಲುದಾರ ಸಂಸ್ಥೆ ಎಲಿಯಟ್ ಮ್ಯಾನೇಜ್ಮೆಂಟ್ ಕಾರ್ಪ್ ಈ ಮೊದಲು ಆರೋಪ ಮಾಡಿತ್ತು.
ಟ್ವಿಟರ್ ಸಿಇಒ ಸ್ಥಾನಕ್ಕೆ ಜ್ಯಾಕ್ ಡಾರ್ಸೆ ರಾಜೀನಾಮೆ ನೀಡಿರುವ ಬಗ್ಗೆ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. ರಾಜೀನಾಮೆ ಪತ್ರವನ್ನು ಟ್ವೀಟ್ನಲ್ಲಿ ಲಗತ್ತಿಸಿದ್ದಾರೆ. ಇದನ್ನು ಯಾರಾದರೂ ಕೇಳಿಸಿಕೊಂಡಿರಾ ಎಂದು ಖಚಿತವಿಲ್ಲ. ಆದರೆ, ನಾನು ಟ್ವಿಟರ್ಗೆ ರಾಜೀನಾಮೆ ನೀಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.
not sure anyone has heard but,
— jack⚡️ (@jack) November 29, 2021
I resigned from Twitter pic.twitter.com/G5tUkSSxkl