ಬೆಂಗಳೂರು: (ನ 30) Auto Price Hike: ಆಟೋ ಪ್ರಯಾಣಿಕರಿಗೆ ಇನ್ನು ಮುಂದೆ ಆಟೋದಲ್ಲಿ ಹಿಂದಿನಂತೆ ಇದ್ದ ದರ ಅನ್ವಯಿಸುವುದಿಲ್ಲ. ಒಂಬತ್ತು ವರ್ಷಗಳ ಬಳಿಕ ಆಟದಲ್ಲಿನ ಕನಿಷ್ಠ ಪ್ರಯಾಣದರವನ್ನು ಹೆಚ್ಚಳ ಮಾಡಿದೆ.
ದೂತರ ಪರಿಷ್ಕರಣೆಯ ಪ್ರಯಾಣದರ ನಾಳೆಯಿಂದ ಆಟೋ ದರ ಬದಲಾಗಲಿದೆ. ಡಿಸೆಂಬರ್ 1 ರಿಂದ ಈ ನಿಯಮ ಜಾರಿಗೆ ಬರಲಿದ್ದು. ಮೊದಲ ಎರಡು ಕಿಲೋಮೀಟರ್ ಗೆ ಕನಿಷ್ಠ 30₹ ರೂಪಾಯಿ ನೀಡಬೇಕಾಗಿತ್ತು ನಂತರ ಪ್ರತಿ ಕಿಲೋಮೀಟರ್ಗೆ ₹15 ದರವನ್ನು ಆಟೋ ಪ್ರಯಾಣಿಕರು ನೀಡಬೇಕಾಗಿದೆ.
ಪ್ರತಿನಿತ್ಯ ದಿನದ ಅವಶ್ಯಕತೆಗಳ ವಸ್ತುಗಳ ಬೆಲೆ ಜಾಸ್ತಿಯಾಗುತ್ತಿದ್ದು ನಡುವೆ ಆಟೋ ದರವು ಹೆಚ್ಚಾಗಿರುವುದು ಪ್ರಯಾಣಿಕರಿಗೆ ಮತ್ತಷ್ಟು ದರದ ಬಿಸಿ ಮುಟ್ಟಿದೆ.

ದರ ಹೆಚ್ಚಳದ ಅನಿವಾರ್ಯತೆ:
ಈ ಬಗ್ಗೆ ಪ್ರತಿಕ್ರಿಯಿಸಿರುವ ಆಟೋ ಚಾಲಕರು,ಆಟೋದಲ್ಲಿ ಬಳಸುವ ಇಂಧನ ಬೆಲೆ ಕೂಡ ಜಾಸ್ತಿಯಾಗಿದೆ. ಪ್ರತಿನಿತ್ಯ ಪೆಟ್ರೋಲ್ ಹಾಗೂ ಡೀಸೆಲ್ ದರಗಳ ಜಾಸ್ತಿಯಾಗುತ್ತಿತ್ತು ಹಾಗೂ ದಿನನಿತ್ಯ ಬಳಕೆಯ ವಸ್ತುಗಳ ಜಾಸ್ತಿಯಾಗಿತ್ತು ಆದರೆ ಕಳೆದ 9 ವರ್ಷಗಳಿಂದ ನಗರದಲ್ಲಿ ಮಾಡಿಲ್ಲ. ಇದಲ್ಲದೆ ಬೆಲೆ ಏರಿಕೆಗೆ ಅನುಗುಣವಾಗಿ ನಾವು ಕೂಡ ಪಯಣದ ದರವನ್ನು ಹೆಚ್ಚು ಮಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿತ್ತು.
ದುಬಾರಿ ಜೀವನದಲ್ಲಿ ಬದುಕುವುದು ಕಷ್ಟ:
ಪ್ರಯಾಣದ ದರ ಹೆಚ್ಚು ಮಾಡಿದರೆ ಪ್ರಯಾಣಿಕರು ದುಡ್ಡು ಕೊಡಲು ನಿರಾಕರಿಸುವ ನಿದರ್ಶನಗಳು ಎದುರಾಗಿತ್ತು. ಬೇರೆ ದಾರಿಯಿಲ್ಲದೆ ಪ್ರಯಾಣಿಕರು ಕೊಡುವ ದುಡ್ಡನ್ನೇ ತೆಗೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆಟೋ ದರ ದರ 9ವರ್ಷಗಳ ಬಳಕೆ ಹೆಚ್ಚಿರುವುದು ಸ್ವಾಗತಾರ್ಹ. ಈ ಹಣದಿಂದಲೇ ನಮ್ಮ ಜೀವನವನ್ನು ಕಟ್ಟಿಕೊಳ್ಳಬೇಕಾಗಿದೆ.
ಬೆಂಗಳೂರಿನಲ್ಲಿ ಆಟೋದಲ್ಲಿ ಬರುವ ದುಡ್ಡಿನಿಂದ ಬದುಕಲು ಸಾಧ್ಯವಿಲ್ಲ. ಇದರಿಂದ ಸಂಸಾರವನ್ನು ನಡೆಸಲು, ಆಟೋ ದಿಂದ ಬರುವ ಆದಾಯವು ಸಾಲುತ್ತಿರಲಿಲ್ಲ ಎಂದು ಆಟೋ ಚಾಲಕರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.