ದಕ್ಷಿಣ ಕನ್ನಡ: (ನ.29) LakshaDeepothsava 2021 ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ಇಂದಿನಿಂದ ಕಾರ್ತಿಕ ಮಾಸದಲ್ಲಿ ನಡೆಯುವ ಲಕ್ಷದೀಪೋತ್ಸವ ಕಾರ್ಯಕ್ರಮ ನಡೆಯಲಿದೆ.
29ರಿಂದ ಡಿಸೆಂಬರ್ 4 ವರೆಗೆ ನಡೆಯಲಿರುವ ಲಕ್ಷದೀಪೋತ್ಸವಕ್ಕೆ ಧರ್ಮಸ್ಥಳ ವಿದ್ಯುತ್ ದೀಪಗಳಿಂದ ಅಲಂಕಾರಗೊಂಡು ಸಜ್ಜಾಗಿದೆ. ಮಂಜುನಾಥ ಸ್ವಾಮಿ ದೇಗುಲ ಹೆಗ್ಗಡೆಯವರ ಹಾಗೂ ಮಹಾದ್ವಾರ ಸಹಿತ ಸಂಪೂರ್ಣ ಧರ್ಮಸ್ಥಳ ಕ್ಷೇತ್ರವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ.
ಇಂದು ಸಂಜೆ ಉಜಿರೆ ಜನಾರ್ದನಸ್ವಾಮಿ ದೇವಸ್ಥಾನದಿಂದ 20ಕ್ಕೂ ಹೆಚ್ಚು ಸಾವಿರ ಭಕ್ತರು ಪಾದಯಾತ್ರೆ ಮಾಡುವ ಮೂಲಕ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಪಡೆಯಲಿದ್ದಾರೆ.
ಈ ಸಂದರ್ಭ ಪಾದಯಾತ್ರೆಗಳನ್ನು ಉದ್ದೇಶಿಸಿ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಮಾತನಾಡಲಿದ್ದಾರೆ. 9ನೇ ವರ್ಷದ ಪಾದಯಾತ್ರೆ ಆಗಿದ್ದು, ಪಾದಯಾತ್ರೆಯ ಬಳಿಕ ರಾತ್ರಿ ಮಂಜುನಾಥಸ್ವಾಮಿಯ ಹೊಸ ಕಟ್ಟೆಯಲ್ಲಿ ಉತ್ಸವ ನೆರವೇರಲಿದೆ.
ಡಿಸೆಂಬರ್ 2 ರಂದು ಲಕ್ಷ ದೀಪೋತ್ಸವ ನಡೆಯಲಿದ್ದು ಡಿಸೆಂಬರ್ 2ರಂದು ಗುರುವಾರ ಸಂಜೆ 5 ಗಂಟೆಗೆ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯಲಿರುವ ಸರ್ವಧರ್ಮ ಸಮ್ಮೇಳನದ 89ನೇ ಅಧಿವೇಶನವನ್ನು ಕರ್ನಾಟಕ ರಾಜ್ಯ ಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಉದ್ಘಾಟಿಸಲಿದ್ದಾರೆ.
ಡಿಸೆಂಬರ್ 3 ರಂದು ಸಾಹಿತ್ಯ ಸಮ್ಮೇಳನದ
ಡಿಸೆಂಬರ್ 3 ರಂದು ಸಾಹಿತ್ಯ ಸಮ್ಮೇಳನದ 89 ಸಮಾವೇಶನವನ್ನು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ ಕೆ ಸುಧಾಕರ್ ಅವರು ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ ಡಾ ಮಲ್ಲೇಪುರಂ ಜಿ ವೆಂಕಟೇಶ ಅವರು ಅಧ್ಯಕ್ಷತೆ ವಹಿಸಲಿದ್ದು. ಗೌರಿ ಮಾರುಕಟ್ಟೆಯಲ್ಲಿ ಉತ್ಸವ ಸಂಪನ್ನಗೊಳ್ಳಲಿದೆ.
ವೇಶನವನ್ನು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ ಕೆ ಸುಧಾಕರ್ ಅವರು ಉದ್ಘಾಟಿಸಲಿದ್ದಾರೆ. ಹಿರಿಯ ಸಾಹಿತಿ ಡಾ ಮಲ್ಲೇಪುರಂ ಜಿ ವೆಂಕಟೇಶ ಅವರು ಅಧ್ಯಕ್ಷತೆ ವಹಿಸಲಿದ್ದು. ಗೌರಿ ಮಾರುಕಟ್ಟೆಯಲ್ಲಿ ಉತ್ಸವ ಸಂಪನ್ನಗೊಳ್ಳಲಿದೆ.
ಪ್ರತಿದಿನ 9:00 ಗಂಟೆಯಿಂದ ಉತ್ಸವಗಳು ನಡೆಯಲಿದ್ದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.

ಲಕ್ಷದೀಪೋತ್ಸವದ ಕಾರ್ಯಕ್ರಮದ ವಿವರಗಳು:
ಡಿಸೆಂಬರ್ 1 2021 : ಬೆಂಗಳೂರಿನ ಡಾ ಪದ್ಮಿನಿ ಮತ್ತು ಬಳಗದವರಿಂದ ಗಾಯನ.
ರಾಘವೇಂದ್ರ ಸಂಗೀತ ಸೇವಾ ಪ್ರತಿಷ್ಠಾನದ ಕಲಾವಿದರಿಂದ ನೃತ್ಯ ರೂಪಕ ಕಾರ್ಯಕ್ರಮ.
ಡಿಸೆಂಬರ್ 2 2021: ತ್ರಿಶೂರ್ ನ ಶ್ರೀಕೃಷ್ಣ ಮೋಹನ್ ಮತ್ತು ರಾಮ್ ಕುಮಾರ್ ಮೋಹನ್ ಬಳಗದವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ. ಮಂಗಳೂರು ಸನಾತನಾ ನಾಟ್ಯಾಲಯ ಕಲಾವಿದರಿಂದ ನುಡಿಯಿಂದ ನಾಟ್ಯಾಮೃತ.
ಡಿಸೆಂಬರ್ 3 2021: ಬೆಂಗಳೂರಿನ ಮಂಜುಳಾ ಪರಮೇಶ್ ನಿರ್ದೇಶನದಲ್ಲಿ ನೃತ್ಯ ಸಂಭ್ರಮ.
ಶ್ವೇತಾ ದೇವನಹಳ್ಳಿ ಮತ್ತು ತಂಡದವರಿಂದ ಗಾನಲಹರಿ ಕಾರ್ಯಕ್ರಮ ನಡೆಯಲಿದೆ.
ಉಪ್ಪಿನಂಗಡಿ ಗ್ರಾಮದ ಕದಿಕ್ಕಾರು ಬಿಡು ಎಂಬಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳದ ಅಧೀನದಲ್ಲಿದ್ದ 1.6 ಎಕರೆ ಜಾಗದಲ್ಲಿ ಹಲ ವರ್ಷಗಳಿಂದ ವಾಸಮಾಡುತ್ತಿದ್ದ ಪರಿಶಿಷ್ಟ ಜಾತಿಗೆ ಸೇರಿದ 18 ಕುಟುಂಬಗಳಿಗೆ ಕ್ಷೇತ್ರದ ವತಿಯಿಂದ ಜಮೀನನ್ನು ದಾನದ ರೂಪದಲ್ಲಿ ನೀಡಲಾಯಿತು. ಭೂಮಿ ಹಕ್ಕುಪತ್ರ ವಿತರಣೆ ಸಹಾಯಕ ಆಯುಕ್ತರ ಕಚೇರಿ ಸಭಾಂಗಣದಲ್ಲಿ ನಡೆಯಿತು.
ಇದನ್ನೂ ಓದಿ: MLC Elections: ರಿವರ್ಸ್ ಆಪರೇಷನ್: ಕಾಂಗ್ರೆಸ್ ಪಕ್ಷಕ್ಕೆ ಗೆಲುವು
18 ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ
ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಭೂ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಿ ಬಳಿಕ ಶ್ರೀಕ್ಷೇತ್ರ ಧರ್ಮಸ್ಥಳದ ಪರವಾಗಿ ಹರ್ಷೇಂದ್ರಕುಮಾರ್ ಅವರು 18 ಕುಟುಂಬಗಳಿಗೆ ಹಕ್ಕುಪತ್ರವನ್ನು ಮಾಡಲಾಯಿತು. ಹಾಗೂ ಎಲ್ಲಾ ಕುಟುಂಬಗಳಿಗೆ ವಸ್ತ್ರದಾನ ಮಾಡಲಾಯಿತು.
ಈ ಬಳಿಕ ಮಾತನಾಡಿದ ಅವರು, ಉಳುವವನೇ ಹೊಲದೊಡೆಯ ಎಂಬ ಕಾನೂನು ಜಾರಿಯ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಸೇರಿದ 3600 ಎಕರೆ ಜಮೀನನ್ನು ಗೇಣಿದಾರರಿಗೆ ನೀಡಲಾಗಿತ್ತು ಆ ಕಾಲದಿಂದಲೇ ಕದಿ ಕ್ಕಾರು ಬೀಡಿನ ಜಾಗದಲ್ಲಿ ವಾಸವಾಗಿದ್ದ ಕುಟುಂಬಗಳು ಕ್ಷೇತ್ರದ ಮೇಲಿನ ಭಕ್ತಿಯಿಂದ ಡಿಕ್ಲರೇಷನ್ ಗೆ ಅರ್ಜಿ ಹಾಕಿರಲಿಲ್ಲ . ಆ ಕುಟುಂಬಕ್ಕೆ ಕ್ಷೇತ್ರದ ವತಿಯಿಂದ ಹಕ್ಕುಪತ್ರ ದಾನಮಾಡಿದ ರೂಪದಲ್ಲಿ ಜಮೀನು ನೀಡಲಾಗಿದೆ ಎಂದು ಹೇಳಿದರು.