ಗುಜರಾತ್: (ನ.28) Viral Video: ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರನ್ನು ಬೀಳ್ಕೊಡುವಾಗ ಅಥವಾ ಕಚೇರಿಯಲ್ಲಿ ಸಿಬ್ಬಂದಿಗಳು ಅಥವಾ ಇನ್ಯಾರೇ ಆತ್ಮೀಯರನ್ನು ಬೀಳ್ಕೊಡುವಾಗ ಹೃದಯ ತುಂಬಿ ಬರುವುದು ಸಹಜ. ಆದರೆ ಇನ್ನೊಂದು ಕಡೆ ಪೊಲೀಸ್ ಅಧಿಕಾರಿಗಳನ್ನು ಬೀಳ್ಕೊಡುವ ಸಂದರ್ಭದಲ್ಲಿ ಸಿಬ್ಬಂದಿಗಳು ಹಾಗೂ ಸ್ಥಳೀಯರು ಕಣ್ಣೀರಿಟ್ಟ ಸಂದರ್ಭ ಬಹಳ ಭಾವುಕತೆಯಿಂದ ಕೂಡಿತ್ತು.
ಗುಜರಾತಿನ ಪಟ್ಟಣದಲ್ಲಿರುವ ಪೊಲೀಸ್ ಸಬ್ ಇನ್ಸ್ಪೆಕ್ಟರ್ ವಿಶಾಲ್ ಭಾಯ್ ಪಟೇಲ್ ಅವರು ಬೇರೆ ಇಲಾಖಾ ವರ್ಗಾವಣೆಗೊಂಡ ಸಂದರ್ಭದಲ್ಲಿ ಪೊಲೀಸ್ ಠಾಣೆಯ ಸಿಬ್ಬಂದಿಗಳ ಕಂಗಳು ಒದ್ದೆಯಾಗಿದ್ದವು.
ವಿಶಾಲ್ ಭಾಯ್ ಪಟೇಲ್ ಅವರು ಗ್ರಾಮದಲ್ಲಿ ಸೇವೆ ಸಲ್ಲಿಸಿ ಹೊರಡುವಾಗ ಅಧಿಕಾರಿಗಳ ಮೇಲೆ ಹೂವನ್ನು ಚೆಲ್ಲಿ ಪ್ರೀತಿಯಿಂದ ಬೀಳ್ಕೊಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪೊಲೀಸ್ ಅಧಿಕಾರಿಯ ನಿರ್ಗಮನದ ಸಂದರ್ಭದಲ್ಲಿ ಸಹ ಪೊಲೀಸ್ ಅಧಿಕಾರಿಗಳು ಭಾವುಕತೆಯಿಂದ ಅಪ್ಪಿಕೊಳ್ಳುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: Winter Session: ಚಳಿಗಾಲ ಅಧಿವೇಶನದ ಸರ್ವಪಕ್ಷದ ಸಭೆಗೆ ಪ್ರಧಾನಿ ಮೋದಿ ಗೈರು: ಖರ್ಗೆ ಆರೋಪ
ಜನರ ಜೀವ ಕಾರ್ಯ ಮಾಡಿದ್ದರು
ಅಂದಹಾಗೆ ವಿಶಾಲ್ ಭಾಯ್ ಪಟೇಲ್ ಅವರು ಸರಕಾರ ಜಿಲ್ಲೆಯ ಖೆದ್ ಬ್ರಹ್ಮ ಪೊಲೀಸ್ ಠಾಣೆಯಲ್ಲಿ ಸುಮಾರು ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿ ವರ್ಗಾವಣೆಗೊಂಡರು. ಎರಡು ವರ್ಷಗಳ ಕಾಲ ಇವರು ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿದ್ದರು. ವರ್ಗಾವಣೆ ವಿಷಯ ತಿಳಿದ ಬಳಿಕ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
An officer and a true friend of the people!
— Indian Police Foundation (@IPF_ORG) November 24, 2021
An emotional send off by local citizens to a Police SubInspector in Gujarat on his transfer. He was instrumental in saving lives during Corona outbreak. Officers of such quality of heart n mind make us proud of the service.🙏 pic.twitter.com/MFa9m0J7DB
ಭಾರತೀಯ ಪೊಲೀಸ್ ಪ್ರತಿಷ್ಠಾನವು ವಿಡಿಯೋವನ್ನು ಹಂಚಿಕೊಂಡಿದ್ದು ಒಬ್ಬ ಅಧಿಕಾರಿ ಮತ್ತು ಜನರ ನಿಜವಾದ ಸ್ನೇಹಿತ ಎಂದು ಶೀರ್ಷಿಕೆ ನೀಡಿದ್ದಾರೆ. ವಿಶಾಲ್ ಭಾಯ್ ಪಟೇಲ್ ಅವರು ಕೊರೊನಾ ಸಮಯದಲ್ಲಿ ಜನರ ಜೀವ ಉಳಿಸುವಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದರು ಹಾಗೂ ಒಳ್ಳೆಯ ಮನಸ್ಸಿನ ಅಧಿಕಾರಿಗಳು ಅಧಿಕಾರಿ ಎಂದು ಬರೆಯಲಾಗಿದೆ.
ಪೊಲೀಸರೆಂದರೆ ಭಯಪಡುವ ಅವಶ್ಯಕತೆ ಇಲ್ಲ, ಅವರು ನಮ್ಮಂತೆಯೇ ಸಾಮಾನ್ಯರು ಎಲ್ಲೋ ಕೆಲವರಿಂದ ಎಲ್ಲಾ ಪೊಲೀಸ್ ಅಧಿಕಾರಿಗಳನ್ನು ಭ್ರಷ್ಟರು ಎಂದು ಹೇಳಲು ಸಾಧ್ಯವಿಲ್ಲ.