ಕೊಪ್ಪಳ: (ನ.28) Covid Vaccine: ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಸಾರ್ವಜನಿಕರಿಗೆ ಲಸಿಕಾ ಕಾರ್ಯಕ್ರಮ ಹಮ್ಮಿಕೊಂಡಿತ್ತು. ಆದರೆ ಇನ್ನೂ ಕೆಲವರು ಮೊದಲನೇ ಹಾಕಿಸಿಕೊಳ್ಳಲು ಉದಾಹರಣೆಗಳು ಇದೆ. ಸರಕಾರಗಳು ಕರೋನ ಲಸಿಕೆ ಕುರಿತು ಜನ ಜಾಗೃತಿ ಕಾರ್ಯಕ್ರಮಗಳು ಮಾಡಿದ್ದರೂ ಜನರಲ್ಲಿ ಭಯ ಹೋಗಿಲ್ಲ.
ಕೋರೋನಾ ಲಸಿಕೆ ಹಾಕಿಸಿಕೊಳ್ಳಲು ಇಲ್ಲೊಬ್ಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ್ದಾನೆ.
ಹೌದು, ಕೊಪ್ಪಳದಲ್ಲಿ ಕೋರೋಣ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಈ ವ್ಯಕ್ತಿ ಹೆದರಿ ಆತ್ಮಹತ್ಯೆ ಮಾಡಿಕೊಳ್ಳಲು ಹೋಗಿದ್ದಾನೆ.
ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಬೂದಗುಂಪಾ ಗ್ರಾಮದಲ್ಲಿ ಇಂದು ಲಸಿಕಾ ಅಭಿಯಾನ ಹಮ್ಮಿಕೊಂಡಿದ್ದರು. ಆರೋಗ್ಯ ಅಧಿಕಾರಿಗಳು ಸಿಬ್ಬಂದಿಗಳು ಗ್ರಾಮಸ್ಥರ ಮನವೊಲಿಸಿ ಲಸಿಕೆ ಹಾಕಲು ಮುಂದಾಗಿದ್ದಾರೆ.ಇದೇ ಸಮಯದಲ್ಲಿ ಆರೋಗ್ಯ ಅಧಿಕಾರಿಗಳು ಸಿಬ್ಬಂದಿಗಳು ಗ್ರಾಮದ ಹುಚ್ಚಪ್ಪ ಚಲವಾದಿ ಎಂಬವರ ಮನೆಗೆ ಲಸಿಕೆ ಹಾಕಿಸಿ ಕೊಳ್ಳುವಂತೆ ಕರೆದಿದ್ದರು.

ಲಸಿಕೆ ಬಗ್ಗೆ ಜಾಗೃತಿ ಅಗತ್ಯ
ಆರೋಗ್ಯ ಸಿಬ್ಬಂದಿಗಳು ಮನೆಗೆ ತೆರಳಿ ಲಸಿಕೆ ಹಾಕುವುದಕ್ಕೆ ಮುಂದಾದಾಗ, ಹುಚ್ಚಪ್ಪ ಚಲವಾದಿ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಭಯದಿಂದ ಮನೆಯ ಮಾಳಿಗೆಗೆ ತೆರಳಿದ್ದಾನೆ. ನಾನು ಲಸಿಕೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೆದರಿಸಿದ್ದಾನೆ.
ಇದನ್ನೂ ಓದಿ: Omicron ಕೇರಳದಿಂದ ಬರುವವರಿಗೆ ಆರ್ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯ
ಮಾಳಿಗೆ ಏರಿದ್ದರಿಂದ ಆತನನ್ನು ಮನವೊಲಿಸಿ ದಂತಹ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಕೆಳಗಿಳಿಸಿ ಕೋರೋಣ ಲಸಿಕೆ ಸಂಪೂರ್ಣವಾಗಿ ತಿಳಿಸಿದ್ದಾರೆ. ಕೊನೆಗೆ ಆತನನ್ನು ಮನವೊಲಿಸಿ ಹುಚ್ಚಪ್ಪ ಚಲವಾದಿ ಗೆ ಕೊನೆಗೂ ಲಸಿಕೆ ಹಾಕಿದ್ದಾರೆ.
ಇಂದಿಗೂ ಹಲವಾರು ಜನರು ಕರೋನಾ ಲಸಿಕೆ ಹಾಕಿಸಿಕೊಳ್ಳುವುದಕ್ಕೆ ಹಿಂದು ಮುಂದು ನೋಡುತ್ತಿದ್ದಾರೆ. ಸರ್ಕಾರ ಎಷ್ಟೇ ಪ್ರಯತ್ನ ಮಾಡಿದರೂ ಜನರು ಲಸಿಕೆ ಹಾಕಿಸಿಕೊಳ್ಳಲು ಭಯಪಡುತ್ತಿದ್ದಾರೆ. ಕೊರೋನ ಹೋಗಲಾಡಿಸಲು ಲಸಿಕೆ ಹಾಕಿಸಿಕೊಳ್ಳುವುದು ಅಗತ್ಯವಾಗಿದ್ದು ಸಾರ್ವಜನಿಕರು ಲಸಿಕೆಯನ್ನು ಹಾಕಿಸಿಕೊಳ್ಳಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.