ಬೆಂಗಳೂರು:( ನ.27) OmicronVirus: ಡಿಸೆಂಬರ್ ತಿಂಗಳ ಬಳಕೆ ಎರಡನೇ ಲಸಿಕೆ ಹಾಕಿಸುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿದೇಶಗಳಲ್ಲಿ ಹೊಸ ತಳಿಯ ಒಮಿಕ್ರಾನ್ ವೈರಸ್ ಪದ್ಯದ ಹಿನ್ನೆಲೆಯಲ್ಲಿ ಇಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಹತ್ವದ ಸಭೆಯಲ್ಲಿ ನಡೆಸಿದ್ದಾರೆ.
ಮುಖ್ಯಮಂತ್ರಿಯ ಗೃಹ ಕಚೇರಿ ಕೃಷ್ಣ ದಲ್ಲಿ ಇಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ,
WHO ಅಧಿಕಾರಿಗಳು ಹಾಗೂ ಗೋವಿಂದ ತಾಂತ್ರಿಕ ಸಲಹಾ ಸಮಿತಿ ಮುಖ್ಯಸ್ಥ ಡಾಕ್ಟರ್ ಸುದರ್ಶನ್ ಬೆಂಗಳೂರು ನಗರ ಜಿಲ್ಲಾಧಿಕಾರಿ ಮಂಜುನಾಥ್ ಅವರು ಸಭೆಯಲ್ಲಿ ಹಾಜರಿದ್ದರು.

ಗಡಿಭಾಗದಲ್ಲಿ ಕಟ್ಟೆಚ್ಚರಿಕೆ:
ಕೊರೋನಾ ಹೊಸ ತಳಿಯ ರೂಪಾಂತರವಾಗಿರುವ ಒಮಿಕ್ರಾನ್ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೇರಳ, ಮಹಾರಾಷ್ಟ್ರ ಗಡಿಗಳಲ್ಲಿ ಕಟ್ಟೆಚ್ಚರ ವಹಿಸಲು ನಿರ್ಧರಿಸಲಾಗಿದೆ. ರಾಜ್ಯದ ಮಂಗಳೂರು, ಮೈಸೂರು, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗಡಿಭಾಗದ ಚಕ್ ಪೋಸ್ಟ್ ಗಳಲ್ಲಿ ಕಡ್ಡಾಯವಾಗಿ ತಪ್ಪದೇ 2008 ಸೂಚನೆ ನೀಡಿದ್ದು ಕೇರಳದಿಂದ ಬರುವವರಿಗೆ ಆರ್ಟಿ ಪಿಸಿಆರ್ ತೆಸ್ಟ್ ಕಡ್ಡಾಯ ಇರಲಿದೆ ಹಾಗೂ ಹಾಸ್ಟೆಲ್ನಲ್ಲಿ ಇದ್ದವರಿಗೆ ಎರಡನೇ ಬಾರಿ ಮಾಡಿಸಬೇಕು ಎಂದು ಸಚಿವ ಆರ್ ಅಶೋಕ್ ಅವರು ಸಿಎಂ ಜೊತೆ ಸಭೆ ನಡೆಸಿದ ಬಳಿಕ ತಿಳಿಸಿದ್ದಾರೆ.
ಹೋಟೆಲ್ , ಕಚೇರಿಗಳು ಹಾಗೂ ಮಾಲುಗಳಲ್ಲಿ ಇರುವ ಸಿಬ್ಬಂದಿಗಳು ಕಡ್ಡಾಯವಾಗಿ ಎರಡನೇ ಡೋಸ್ ಲಸಿಕೆ ಪಡೆದಿರಬೇಕು ಹಾಗೂ ಶಾಲಾ ಕಾಲೇಜುಗಳಲ್ಲಿ ಕೊರೊನಾ ಕೇಸ್ ಹೆಚ್ಚಾಗುತ್ತಿದ್ದು ಕೇಸ್ ಹೆಚ್ಚಾದ ಭಾಗಗಳಲ್ಲಿ ನಿಗಾವಹಿಸಲು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: Omicron ಒಮಿಕ್ರಾನ್ ವೈರಸ್ ಬಗ್ಗೆ ಎಚ್ಚರ : ಆರೋಗ್ಯ ಸಚಿವ ಡಾ.ಕೆ. ಸುಧಾಕರ್
ಮಾರ್ಗಸೂಚಿ ಬಿಡುಗಡೆ:
ಆರೋಗ್ಯ ಇಲಾಖೆಯಿಂದ ಸದ್ಯದಲ್ಲೇ ಮಾರ್ಗಸೂಚಿ ಹೊರಡಿಸಲಾಗುತ್ತದೆ ಎಂದರು. ಮದುವೆ ಸಮಾರಂಭಗಳಲ್ಲಿ ಜನರು ಮಾಸ್ಕ ಧರಿಸುವುದು ಕಡ್ಡಾಯ ವಾಗಲಿದ್ದು ಕಾಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮುಂದೂಡುವಂತೆ ಸೂಚನೆ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಕರೋನದ ಸ್ಥಿತಿಗತಿಗಳನ್ನು ನೋಡಿ ಕಠಿಣಕ್ರಮ ಜಾರಿಗೊಳಿಸಲಾಗುತ್ತದೆ ಎಂದು ಹೇಳಿದ್ದಾರೆ.
ಡಿಸೆಂಬರ್ ತಿಂಗಳಲ್ಲಿ ಬರುವ ಕ್ರಿಸ್ಮಸ್ ಹಾಗೂ ನ್ಯೂ ಇಯರ್ ಸೆಲೆಬ್ರೇಶನ್ ಬಗ್ಗೆ ಮತ್ತೊಮ್ಮೆ ಸಭೆ ಮಾಡುತ್ತೇವೆ ಹಾಗೂ ವಿಮಾನನಿಲ್ದಾಣಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲು ಸೂಚನೆ ಕೊಡಲಾಗಿದೆ.
ರಾಜ್ಯದಲ್ಲಿ ಸದ್ಯ ಪಾಸಿಟಿವಿಟಿ ರೇಟ್ 0.42 ರಷ್ಟು ಇದೆ ಇಂದು ಮಾಹಿತಿ ಲಭ್ಯವಾಗಿದ್ದು ಧಾರವಾಡ ಜಿಲ್ಲೆಯಲ್ಲಿ 1.82, ಮೈಸೂರಿನಲ್ಲಿ 1.08, ಉಡುಪಿಯಲ್ಲಿ 0.42, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 0.54, ಬೆಂಗಳೂರು ನಗರದಲ್ಲಿ 0.42 ರಷ್ಟು ಇದೆ.
ಕೇರಳದಿಂದ ಬರುವ ಪ್ರಯಾಣಿಕರಿಗೆ ಸೂಚನೆ:
ಗಡಿಭಾಗದ ಕೇರಳದಿಂದ ಬರುವ ಪ್ರಯಾಣಿಕರಿಗೆ ಕಡ್ಡಾಯವಾಗಿ ಮಾಡಿಸಬೇಕು ಹಾಗೂ ಬೆಂಗಳೂರಿನಲ್ಲಿ ಸೋಂಕು ಹೆಚ್ಚಳವಾದ ಹಿನ್ನೆಲೆಯಲ್ಲಿ ಟೆಸ್ಟ್ ಕಡ್ಡಾಯವಾಗಿದೆ. ಕೇರಳದಿಂದ ಬಂದ ನರಸಿಂಹ ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದ್ದು ಈ ಹಿನ್ನೆಲೆಯಲ್ಲಿ ರೈಲು ಬಸ್ ನಿಲ್ದಾಣಗಳಲ್ಲಿ ಕೇರಳ ಪ್ರಯಾಣಿಕರಿಗೆ ಮಾಡಿಸಲಾಗುತ್ತದೆ ಎಂದು ಬಿಬಿಎಂಪಿ ಸೂಚಿಸಿದೆ.