Constitution Day: (ನ. 26) : ಇಂದು ಸಂವಿಧಾನ ದಿನ, ವಿಶ್ವದ ಅತಿ ದೊಡ್ಡ (Big Constitution) ಸಂವಿಧಾನ ಎಂಬ ಹಿರಿಮೆ ಭಾರತಕ್ಕೆ ಸಲ್ಲುತ್ತದೆ. ಹೌದು ನಮ್ಮ ( Constitution Day )ಭಾರತ ಸಂವಿಧಾನ ವಿಶ್ಚದ ಅತೀ ದೊಡ್ಡ ಸಂವಿಧಾನ.1949ರಲ್ಲಿ ನ.26ರಂದು ಸಂವಿಧಾನವನ್ನು ಅಳವಡಿಸಿಕೊಳ್ಳಲಾಯಿತು.2015ರಲ್ಲಿ ನ.19ರಂದು (Government of India) ಭಾರತ ಸರ್ಕಾರ ಅಧಿಕೃತವಾಗಿ ಆದೇಶ ಹೊರಡಿಸಿತ್ತು.ಆದರೆ 2015ರ ಅಕ್ಟೋಬರ್ 11ರಂದು ಪ್ರಧಾನಿ ನರೇಂದ್ರ ಮೋದಿ ಮುಂಬೈಯಲ್ಲಿ ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಅವರ ಸ್ಮಾರಕಕ್ಕೆ ಅಡಿಗಲ್ಲು ಹಾಕುವ ಮೂಲಕ ನವೆಂಬರ್ 26ರಂದು ಸಂವಿಧಾನ ದಿನವಾಗಿ ಆಚರಿಸುವ ಘೋಷಣೆ ಮಾಡಿದರು.

ಪ್ರತಿವರ್ಷ ನವೆಂಬರ್ 26ರಂದು ಸಂವಿಧಾನ ದಿನವನ್ನಾಗಿ ಆಚರಿಸಲಾಗುತ್ತಿದೆ. ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ ದಿನ. 1949ರ ನವೆಂಬರ್ 26ರಂದು ಸಂವಿಧಾನವನ್ನು ಅಂಗೀಕರಿಸಲಾಯಿತು. 1950ರ ಜನವರಿ 26ರಂದು (ಗಣರಾಜ್ಯೋತ್ಸವ ದಿನಾಚರಣೆ) ಅನುಷ್ಠಾನಕ್ಕೆ ತರಲಾಗಿತ್ತು.
ಭಾರತ ಸಂವಿಧಾನ ಪ್ರತಿ ಪ್ರಜೆಯ ಆಸ್ತಿಯಾಗಿದೆ. ಇದರಿಂದ ಸರ್ವರಿಗೂ ಸಮಾನತೆ,ಮೂಲಭೂತ ಹಕ್ಕುಗಳು ,ಕರ್ತವ್ಯವನ್ನೂ ಸಂವಿಧಾನ ನೀಡಿದೆ. ನಮ್ಮ ಸಂವಿಧಾನ ದೇಶದ ಜನರನ್ನು ಸಶಕ್ತಗೊಳಿಸಿದೆ ಸಂವಿಧಾನದ ಮಹತ್ವದ ಬಗ್ಗೆ ಎಲ್ಲರಿಗೂ ಅರಿವು ಹಾಗೂ ಅವರ ಸಾಧನೆಯ ಬಗ್ಗೆ ಜಾಗೃತಿ ಮೂಡಿಸುವುದು ಈ ದಿನದ ಉದ್ದೇಶವಾಗಿದೆ. ಅಂದು ಎಲ್ಲಾ ಶಾಲೆ ಕಾಲೇಜು ಸರ್ಕಾರಿ ಕಛೇರಿಗಳಲ್ಲಿ ಡಾ ಬಿ ಆರ್ ಅಂಬೇಡ್ಕರ್ ಅವರ ಬಗ್ಗೆ ಹಾಗೂ ಸಂವಿಧಾನದ ಮಹತ್ವ ತಿಳಿಸಲಾಗುತ್ತದೆ.
ಭಾರತ ಸಂವಿಧಾನವನ್ನು (Constitution Day) ರೂಪುಗೊಳಿಸಲು ಇತರ ದೇಶಗಳ ಸಂವಿಧಾನದದಿಂದಲೂ ಕೆಲವು ಅಂಶಗಳನ್ನು ಅಳವಡಿಸಿಕೊಂಡಿದ್ದೇವೆ.
ಬ್ರಿಟನ್ನಿನ ಸಂವಿಧಾನ
- ಸರಕಾರದ ಸಂಸದೀಯ ಸ್ವರೂಪ
- ಏಕಸ್ವಾಮ್ಯ ಪೌರತ್ವ
- ನ್ಯಾಯದ ಪ್ರಭುತ್ವ
- ಲೋಕಸಭಾಧ್ಯಕ್ಷ ಮತ್ತವರ ಪಾತ್ರ
- ಶಾಸನೆ ರಚನೆಯ ವಿಧಾನ
- ನ್ಯಾಯ ನಿರ್ಧರಿಸುವ ಕಾರ್ಯವಿಧಾನ
ಅಮೇರಿಕ ಸಂಯುಕ್ತ ಸಂಸ್ಥಾನದ ಸಂವಿಧಾನ
- ಮೂಲಭೂತ ಹಕ್ಕುಗಳು
- ರಾಜ್ಯಗಳ ಒಕ್ಕೂಟದ ಸರ್ಕಾರದ ಮಾದರಿ
- ನ್ಯಾಯಾಂಗದ ಸ್ವಾತಂತ್ರ್ಯತೆ ಮತ್ತು ಶಾಸಕಾಂಗದ ನಿರ್ಧಾರಗಳನ್ನು ಪರಿಶೀಲಿಸುವ ಅಧಿಕಾರ.
- ರಾಷ್ಟ್ರಪತಿಗೆ ಮಹಾಸೇನಾಧಿಪತಿಯ ಪಟ್ಟ
- ನ್ಯಾಯ ನಿರ್ಧರಿಸುವ ಕಾರ್ಯವಿಧಾನ
ಐರ್ಲೆಂಡ್ ದೇಶದ ಸಂವಿಧಾನ
1.ಸರ್ಕಾರಿ ಕಾರ್ಯನೀತಿಯ ಸಾಂವಿಧಾನಿಕ ತಾಕೀತು (ರಾಜ್ಯ ನೀತಿ ನಿರ್ದೇಶಕ ತತ್ವಗಳು)
ಫ್ರಾನ್ಸ್ ದೇಶದ ಸಂವಿಧಾನ
- ಸ್ವಾತಂತ್ರ್ಯ,
- ಸಮಾನತೆ ಮತ್ತು
- ಭ್ರಾತೃತ್ವ ಆದರ್ಶಗಳು
ಕೆನಡಾ ದೇಶದ ಸಂವಿಧಾನ
- ರಾಜ್ಯಗಳ ಒಕ್ಕೂಟದೊಂದಿಗೆ ಪ್ರಬಲ ಕೇಂದ್ರ ಸರ್ಕಾರದ ಮಾದರಿ
- ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರದ ಮೇಲುಳಿದ ಶಕ್ತಿಗಳು
ಆಸ್ಟ್ರೇಲಿಯ ದೇಶದ ಸಂವಿಧಾನ
- ಪ್ರಸ್ತುತ ವಿಷಯಗಳ ಪಟ್ಟಿ
- ರಾಜ್ಯಗಳ ಮಧ್ಯ ಅನಿರ್ಭಂದಿತ ವ್ಯಾಪರ – ವಹಿವಾಟಿಗೆ ಸ್ವಾತಂತ್ರ್ಯ
ಜಪಾನ್ ದೇಶದ ಸಂವಿಧಾನ
- ಮೂಲಭೂತ ಕರ್ತವ್ಯಗಳು
ಜರ್ಮನಿ ದೇಶದ ಸಂವಿಧಾನ (Constitution of Germany )
- ತುರ್ತು ಪರಿಸ್ಥಿತಿಯ ಏರ್ಪಾಡು