Jaggery Tea: (ನ.26): ಚಹಾ ಪ್ರಿಯರಿಗಾಗಿ ಈ ಲೇಖನ!! ಚಹಾ ಎಂದರೇ ಯಾರಿಗೆ ಇಷ್ಟ ಇಲ್ಲ ಹೇಳಿ. ಮನೆಯಲ್ಲಿ ಬೆಳಗ್ಗೆ ಎದ್ದರೇ ಟೀ, ಆಫೀಸ್, ಕಾಲೇಜು ಎಲ್ಲಾ ಕಡೆಯಲ್ಲೂ ಚಹಾ ಕುಡಿಯುವವರೇ ಹೆಚ್ಚು.. ಬಾ ಗುರು ಟೀ ಕುಡಿಯೋಣ ಎಂದು ಟೀ ಅಂಗಡಿಗೆ ಹೋಗುವವರು ಇದ್ದಾರೆ
ಈಗಂತೂ ಚಳಿ,ಮಳೆ ಮಿಕ್ಸ್ ಆಗಿದೆ. ಚಳಿಗಾಲಕ್ಕೆ ಸಾಮಾನ್ಯವಾಗಿ ಕಾಫಿ ಅಥವಾ ಚಹಾದೊಂದಿಗೆ ಸಂಜೆಯೊಂದಿಗೆ ಕಳೆಯುತ್ತಾರೆ. ಜನರು ಹೆಚ್ಚಾಗಿ ಸಕ್ಕರೆಯಿಂದ ಮಾಡಿದ ಚಹಾ ಎಲ್ಲೆಡೆ ಸೇವಿಸುತ್ತಾರೆ. ಬಿಳಿ ಸಕ್ಕರೆ ಅಥವಾ ಕಂದು ಬೆಲ್ಲ, ಎರಡೂ ಕಬ್ಬಿನಿಂದಲೇ ಮಾಡಿದ್ದರೂ ಎರಡನ್ನೂ ತಯಾರಿಸುವ ವಿಧಾನಗಳಲ್ಲಿ ಬೇರೆ.
ಬಿಳಿ ಬೆಲ್ಲದಲ್ಲಿ ಕಬ್ಬಿನ ಹಾಲಿನಲ್ಲಿರುವ ಪೋಷಕಾಂಶಗಳು ಮತ್ತು ಇತರ ಗುಣಗಳು ಇಲ್ಲವಾಗುತ್ತವೆ ಹಾಗೂ ಕೇವಲ ಸಿಹಿ ಒಂದೇ ಉಳಿದುಕೊಳ್ಳುವುದರಿಂದಲೇ ನೋಡಲಿಕ್ಕೆ ಸುಂದರವಾದ ಬಿಳಿ ಸಕ್ಕರೆ ಬಿಳಿವಿಷದ ಪಟ್ಟಿಯಲ್ಲಿದೆ. ಅಲ್ಲದೇ ಇದನ್ನು ಬಿಳಿಯಾಗಿಸಲು ಸುಟ್ಟ ಮೂಳೆಗಳನ್ನೂ ಬಳಸುವ ಕಾರಣ ಇದನ್ನು ಸಸ್ಯಾಹಾರಿ ಅಲ್ಲ ಎನ್ನುವವರೂ ಇದ್ದಾರೆ.
ಒಂದು ಸೀಕ್ರೆಟ್ ಹೇಳಬೇಕು ಅಂದ್ರೆ, ಸಕ್ಕರೆಗಿಂತ ಬೆಲ್ಲ ತುಂಬಾ ಟೇಸ್ಟಿ ಅಗಿರುತ್ತೆ. ಬೆಲ್ಲದ ಚಹದೊಂದಿಗೆ ಕಡಲೆಪುರಿಯೊಂದಿಗೆ ಅಥವಾ ಬಿಸಿ ಬಿಸಿ ಬಜ್ಜಿ ಬೋಂಡ ಇದ್ದರೆ.. ಆಹಾ.. ಮಜಾ ನೇ ಬೇರೆ.

ಬೆಲ್ಲದ ಚಹದ ಪ್ರಯೊಜನಗಳು:
- ಬೆಲ್ಲದ ಚಹಾ ಕುಡಿಯುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳು ಸಿಗುತ್ತದೆ.
- ಬೆಲ್ಲದ ಚಹದಿಂದ ಮೈಕ್ರೋ ಅಥವಾ ತಲೆನೋವು ದೂರಮಾಡುತ್ತದೆ.
- ಬೆಲ್ಲದ ಚಹಾ ಚಳಿಗಾಲದಲ್ಲಿ ಬೆಚ್ಚಗಿರಲು ಸಹಾಯ ಮಾಡುತ್ತದೆ.
- ಗಂಧದ ಟೀ ಕುಡಿಯುವುದರಿಂದ ನೆಗಡಿ ಹಾಗೂ ಕೆಮ್ಮು ನಿವಾರಣೆಯಾಗುತ್ತದೆ. ಬರಿ ಬೆಲ್ಲದ ಚಹ ಮಾಡಿಕೊಂಡರೆ ಸಾಲದು, ಶುಂಠಿ ಕರಿಮೆಣಸು ತುಳಸಿ ಎಲೆಗಳನ್ನು ಸೇರಿಸಿ ಕುಡಿಯಬೇಕು.
- ಬೆಲ್ಲದಲ್ಲಿ ಕಬ್ಬಿಣದ ಅಂಶ ಹೆಚ್ಚಾಗಿದ್ದು ರಕ್ತದ ಹೀಮೋಗ್ಲೋಬಿನ್ ಉತ್ಪಾದನೆಗೆ ನೆರವಾಗುತ್ತದೆಬೆರೆಸಿಯೂ ಸೇವಿಸಬಹುದು ಅಥವಾ ಸಕ್ಕರೆ ಬಳಸುವ ಇತರ ಆಹಾರಗಳಲ್ಲಿ ಬೆರೆಸಿಯೂ ತಿನ್ನಬಹುದು.ದಿನದ ಕಬ್ಬಿಣದ ಅಗತ್ಯತೆಗೆ ಸುಮಾರು ಒಂದು ದೊಡ್ಡ ಚಮಚದಷ್ಟು ಬೆಲ್ಲ ಸಾಕಾಗುತ್ತದೆ.
- ಮಹಿಳೆಯರಿಗೆ ಮಾಸಿಕ ದಿನಗಳ ಬಳಿಕ ಮುನ್ನ ಎದುರಾಗುವ ಮಾನಸಿಕ ತೊಳಲಾಟಗಳು ಮನೋಭಾವದ ಏರುಪೇರಿಗೆ ಕಾರಣವಾಗುತ್ತವೆ. ಈ ದಿನಗಳು ಆಗಮಿಸುವ ಮುನ್ನಾ ದಿನಗಳಿಂದಲೇ ದಿನಕ್ಕೊಂದು ತುಂಡು ಬೆಲ್ಲವನ್ನು ಸೇವಿಸುತ್ತಾ ಬಂದರೆ ಈ ತೊಂದರೆಗಳನ್ನು ಆದಷ್ಟೂ ಮಟ್ಟಿಗೆ ಕಡಿಮೆಯಾಗುತ್ತವೆ.
- ಬೆಲ್ಲವನ್ನು ಸೇವಿಸಿದಾಗ ಇವು ದೇಹದಲ್ಲಿ ಎಂಡಾರ್ಫಿನ್ ಗಳು ಎಂಬ ರಸದೂತವನ್ನು ಹೆಚ್ಚಾಗಿ ಬಿಡುಗಡೆ ಮಾಡುತ್ತವೆ ಹಾಗೂ ಮಾಸಿಕ ದಿನಗಳು ಎದುರಾಗುವ ಮುನ್ನ ರಸದೂತಗಳ ಪ್ರಭಾವದಿಂದ ಎದುರಾಗುವ ಮಾನಸಿಕ ತೊಳಲಾಟವನ್ನು ಆದಷ್ಟೂ ಕಡಿಮೆಗೊಳಿಸುತ್ತವೆ.
ಬೆಲ್ಲದ ಟೀ ಮಾಡುವ ವಿಧಾನ:
ಮೊದಲು ಪಾತ್ರೆಗೆ ನೀರು ಹಾಕಿ ಕುದಿಯಲು ಬಿಡಿ, ಸ್ವಲ್ಪ ಬೆಲ್ಲವನ್ನು ತುಂಡರಿಸಿ ಹಾಕಿ. ನಂತರ ಕರಿಮೆಣಸು ಲವಂಗ ಏಲಕ್ಕಿ ಶುಂಠಿ ಹಾಗೂ ತುಳಸಿ ಎಲೆಗಳನ್ನು ಹಾಕಿ. ಹಾಕದಿದ್ದರೂ ತೊಂದರೆ ಇಲ್ಲ.
ಬೆಲ್ಲ ಕರಗಿದ ನಂತರ ಪರಿಮಳ ಬರುತ್ತದೆ, ನಂತರ ಹಾಲನ್ನು ಬಿಸಿ ಮಾಡಿ ಮಿಶ್ರಣ ಮಾಡಿ.ಬೆಲ್ಲದ ಚಹದೊಂದಿಗೆ ನಿಮಗಿಷ್ಟವಾದ ಸೈಡ್ ಸ್ನಾಕ್ಸ್ ಮಾಡಿಕೊಂಡು ಬಿಸಿ ಬಿಸಿ ಬೆಲ್ಲದ Jaggery Tea ಚಹಾ ಮಾಡಿಕೊಂಡು ಕುಡಿಯಿರಿ.
ಸೂಚನೆ: ಬೆಲ್ಲವನ್ನು ಕರಗಿಸಿ ದ ನಂತರ ಒಮ್ಮೆ ಫಿಲ್ಟರ್ ಮಾಡುವುದು ಉತ್ತಮ.