ಬೆಂಗಳೂರು: (ನ.25) Vegetables Price Hike: ರಾಜ್ಯದಲ್ಲಿ ಅಕಾಲಿಕವಾಗಿ ಸುರಿದಿರುವ ಭಾರಿ ಮಳೆ ಸಾಕಷ್ಟು ಹಾನಿ ಅವಾಂತರಗಳನ್ನು ಉಂಟು ಮಾಡಿದೆ. ವರುಣಾರ್ಭಟಕ್ಕೆ ಲಕ್ಷ ಲಕ್ಷ ಹೆಕ್ಟೇರ್ ನಲ್ಲಿ ಬೆಳೆದ ಬೆಳೆಗಳು ನೆಲೆ ಕಚ್ಚಿವೆ. ಬೆಳೆ ಹಾನಿ ಹಿನ್ನಲೆ ತರಕಾರಿ ಬೆಲೆ ಗಗನಕ್ಕೇರಿದೆ. ಅದ್ರಲ್ಲೂ ಕಳೆದ ಎರಡ್ಮೂರು ದಿನಗಳಿಂದ ಟೊಮ್ಯಾಟೊ ಬೆಲೆ ನೂರರ ಗಡಿ ದಾಟಿದ್ದು ಗೃಹಿಣಿಯರ ತಲೆಕೆಡಿಸಿದೆ.. ಟೊಮ್ಯಾಟೊ ರಸಂ , ಟೊಮ್ಯಾಟೊ ಬಾಥ್ ಮಾಡ್ಬೇಕು ಅನ್ನೋ ಮಹಿಳೆಯರು ಯೋಚಿಸುವಂತಾಗಿದೆ.. ಟೊಮ್ಯಾಟೊ ಜೊತೆ ಬೇರೆ ತರಕಾರಿಗಳ ಬೆಲೆಯು ಹೆಚ್ಚಾಗಿದ್ದು ಗ್ರಾಹಕರಿಗೆ ಬಿಸಿ ತಟ್ಟಿದೆ.
ಹೌದು ನಿರಂತರ ಮಳೆಯಿಂದ ಬೆಳೆಗಳು ಹಾನಿಯಾಗಿವೆ. ನಗರದ ಮಾರುಕಟ್ಟೆಗಳಿಗೆ ತರಕಾರಿಗಳು ಸಮರ್ಪಕ ಪೂರೈಕೆಯಾಗ್ತಿಲ್ಲಾ.. ಹೀಗಾಗಿ ಟೊಮೇಟೊ, ಕ್ಯಾಪ್ಸಿಕಂ ಸೇರಿದಂತೆ ತರಕಾರಿಗಳ ಬೆಲೆ ದುಪ್ಪಟ್ಟಾಗಿದ್ದು ಗ್ರಾಹಕರ ಜೇಬಿಗೆ ಕತ್ತರಿ ಬಿದ್ದಿದೆ.

ಹಲವು ದಿನಗಳಿಂದ ರಾಜ್ಯದಲ್ಲಿ ಮಳೆ ನಿರಂತರವಾಗಿ ಸುರಿಯುತ್ತಿರುವ ಮಳೆಯೇ ಬೆಲೆ ಏರಿಕೆಗೆ ಕಾರಣವಾಗಿದೆ. ನಿರಂತರ ಮಳೆಯಿಂದ ಸೊಪ್ಪು, ತರಕಾರಿ ಜಮೀನಿನಲ್ಲೇ ಹಾಳಾಗಿವೆ. ಒಂದ್ಕಡೆ ರೈತ ಬೆಳೆದ ಬೆಳೆ ನೀರು ಪಾಲಾಗಿರೋದಕ್ಕೆ ಚಿಂತಿಸ್ತಾ ಇದ್ರೆ ಇತ್ತ ಗ್ರಾಹಕರು ಬೆಲೆ ಏರಿಕೆಗೆ ಕಂಗಾಲಗಿದ್ದಾರೆ
ಇದನ್ನೂ ಓದಿ: Covid Vaccine: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಲಸಿಕಾ ವಾಹನಗಳಿಗೆ ಚಾಲನೆ
ರಾಜಧಾನಿಯಲ್ಲಿ ಇಂದಿನ ತರಕಾರಿ ದರ ಹೀಗಿದೆ
ತರಕಾರಿ ದರ
ಬೆಳ್ಳುಳ್ಳಿ 132 ರೂ.
ಟೊಮೇಟೊ 103 ರಿಂದ 120 ರೂ
ದಪ್ಪ ಮೆಣಸಿನಕಾಯಿ 128 ರಿಂದ 140 ರೂ
ಹಸಿ ಮೆಣಸಿನಕಾಯಿ 60 ರಿಂದ 70 ರೂ
ಕ್ಯಾರೆಟ್ 94 ರಿಂದ 110 ರೂ
ಬೀನ್ಸ್ 1009 ರೂ
ಬದನೆಕಾಯಿ 108 ರೂ
ಸೌತೆಕಾಯಿ 30 ರೂ
ನುಗ್ಗೆ ಕಾಯಿ 270 ರೂ
ಶುಂಠಿ 84 ರೂ
ಈರುಳ್ಳಿ ( ಮಧ್ಯಮ) 53 ರೂ
ಸಾಂಬರ್ ಈರುಳ್ಳಿ 56 ರೂ
ಆಲೂಗಡ್ಡೆ 44 ರೂ.
ಮೂಲಂಗಿ 70 ರೂ
ಕೊತ್ತಂಬರಿ ಸೊಪ್ಪು 86 ರೂ
ಮೆಂತ್ಯ ಸೊಪ್ಪು 128 ರೂ.
ಪಾಲಕ್ ಸೊಪ್ಪು 107 ರೂ.
ಸಬ್ಬಕ್ಕಿ ಸೊಪ್ಪು 70 ರೂ.
ಕರಿಬೇವು 67 ರೂ.
ದಂಟಿನ ಸೊಪ್ಪು 114 ರೂ.