Constitution Day: (ನ.25): ನಾಳೆ ದೆಹಲಿಯ ಸಂಸತ್ ಭವನದ ಸೆಂಟ್ರಲ್ ಹಾಲ್‌ನಲ್ಲಿ ಸಂವಿಧಾನ ದಿನವನ್ನು(Constitution Day ) ಆಚರಿಸುತ್ತಿದೆ. ಸಂವಿಧಾನ ದಿನದ ಪ್ರಯುಕ್ತ ನಡೆಯವ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಗವಹಿಸಲಿದ್ದಾರೆ. ಬೆಳಗ್ಗೆ11:00 ಗಂಟೆಯಿಂದ ನೇರಪ್ರಸಾರ ನಡೆಯಲಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಸಂವಿಧಾನದ ಪ್ರಸ್ತಾವನೆಯನ್ನು ಓದಲಿದ್ದಾರೆ.
ಕ್ಯಾಲಿಯೋಗ್ರಾಫ್ ಹಾಗೂ ಕ್ಚಿಜ್ :
ಈವರೆಗಿನ ತಿದ್ದುಪಡಿಗಳನ್ನು ಒಳಗೊಂಡ ಸಂವಿಧಾನದ ಕ್ಯಾಲಿಯೋಗ್ರಾಫ್ ಕಾಪಿಯನ್ನು ಬಿಡುಗಡೆ ಮಾಡಲಿದ್ದಾರೆ. ಸಂವಿಧಾನದ ನಿಮಿತ್ತ ಒಂದು ಆನ್‌ಲೈನ್ ಕ್ವಿಜ್ ಕೂಡ ಆಯೋಜಿಸಲಾಗಿದೆ.
23 ಭಾಷೆಗಳಲ್ಲಿಆನ್ ಲೈನ್ ಸಂವಾದ:
ಸಂವಿಧಾನ ದಿನದ ಪ್ರಯುಕ್ತ ಎರಡು ದಿನ ಆಚರಿಸಲಾಗುತ್ತಿದೆ. ಪ್ರಧಾನಿ ಮೋದಿ ಅವರು ಉದ್ಘಾಟಿಸಲಿದ್ದಾರೆ. ಸಂವಿಧಾನ ದಿನದ ನಿಮಿತ್ತ ಆನ್ಲೈನ್ನಲ್ಲಿ ಸಂವಿಧಾನದ ಪ್ರಸ್ತಾವನೆ ಓದುವ ಕಾರ್ಯಕ್ರಮವಿದೆ. ಇದು ಒಟ್ಟು 23 ಭಾಷೆಗಳಲ್ಲಿ ನಡೆಯಲಿದೆ. ಲೋಕಸಭಾ ಸ್ಪೀಕರ್ ಆಯೊಜಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದ್ದಾರೆ. ಅದಾದ ಬಳಿಕ ಸುಪ್ರೀಂಕೋರ್ಟ್ ನಾಳೆಯಿಂದ ಎರಡು ದಿನ ಆಚರಿಸಲಿರುವ ಸಂವಿಧಾನ ದಿನವನ್ನು ನಾಳೆ ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ.
ಬಳಿಕ ಸುಪ್ರೀಂಕೋರ್ಟ್ ನ್ಯಾಯಾಧೀಶರು, ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು ಹಿರಿಯ ನ್ಯಾಯಾಧೀಶರು, ಸಾಲಿಸಿಟರ್ ಜನರಲ್ರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಹಾಗೇ, ಸಂವಿಧಾನ ದಿನದ ನಿಮಿತ್ತ ಆನ್ಲೈನ್ನಲ್ಲಿ ಸಂವಿಧಾನದ ಪ್ರಸ್ತಾವನೆ ಓದುವ ಕಾರ್ಯಕ್ರಮವಿದೆ. ಇದು ಒಟ್ಟು 23 ಭಾಷೆಗಳಲ್ಲಿ ಲಭ್ಯವಿದೆ.
ಈ ಕಾರ್ಯಕ್ರಮವನ್ನು ಲೋಕಸಭಾ ಸ್ಪೀಕರ್ ಆಯೋಜಿಸಲಿದ್ದು, ಅವರೂ ಪಾಲ್ಗೊಳ್ಳುತ್ತಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಂಗಳವಾರ ಮಾಹಿತಿ ನೀಡಿದ್ದಾರೆ. ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನಾಳೆ ಸಂಸತ್ತು ಮತ್ತು ವಿಜ್ಞಾನ ಭವನದಲ್ಲಿ ನಡೆಯಲಿರುವ ವಿವಿಧ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಾರೆ.
ಉಪರಾಷ್ಟ್ರಪತಿಗಳು, ಪ್ರಧಾನಮಂತ್ರಿಗಳು, ಸಭಾಪತಿಗಳು, ಸಚಿವರು, ಸಂಸತ್ ಸದಸ್ಯರು ಮತ್ತು ಇತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಸಾರ್ವಜನಿಕರಿಗಾಗಿ ಕಾರ್ಯಕ್ರಮ
ಜನರ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸಲು ಸಚಿವಾಲಯವು ಎರಡು ಪೋರ್ಟಲ್‌ಗಳನ್ನು ಅಭಿವೃದ್ಧಿಪಡಿಸಿದೆ.” ಸಂವಿಧಾನದ ಪ್ರಜಾಪ್ರಭುತ್ವದ ಬಗ್ಗೆ ಆನ್‌ಲೈನ್ ರಸಪ್ರಶ್ನೆ ಪೋರ್ಟಲ್‌ಗೆ ಗೌರವಾನ್ವಿತ ರಾಷ್ಟ್ರಪತಿಗಳು 2021ರ ನವೆಂಬರ್ 26ರಂದು ಸೆಂಟ್ರಲ್ ಹಾಲ್‌ನಲ್ಲಿ ಚಾಲನೆ ನೀಡಲಿದ್ದಾರೆ.
1.”ಸಂವಿಧಾನದ ಪೀಠಿಕೆಯ ಆನ್‌ಲೈನ್ ವಾಚನ”ಇದು 23 ಭಾಷೆಗಳಲ್ಲಿರಲಿದೆ.
2. ಸಂವಿಧಾನದ ಪ್ರಜಾಪ್ರಭುತ್ವದ ಆನ್‌ಲೈನ್ ರಸಪ್ರಶ್ನೆ ಇದರಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು ಮತ್ತು ಪ್ರಮಾಣಪತ್ರಗಳನ್ನು ಪಡೆಯಬಹುದು.
ಇದು ಭಾರತೀಯ ಸಂವಿಧಾನ ಮತ್ತು ಅದರ ಪ್ರಜಾಪ್ರಭುತ್ವದ ಬಗ್ಗೆ ಅತ್ಯಂತ ಸರಳ ಮತ್ತು ಮೂಲಭೂತ ಪ್ರಶ್ನೆಗಳನ್ನು ಹೊಂದಿರುವ ಉದ್ದೇಶದೊಂದಿಗೆ ರೂಪಿಸಿದ ಸರಳ ಡಿಜಿಟಲ್ ರಸಪ್ರಶ್ನೆಯಾಗಿದೆ.
ರಸಪ್ರಶ್ನೆಯಲ್ಲಿ ಭಾಗವಹಿಸುವವರು ಹೀಗೆ ಮಾಡಿ:
- ತಮ್ಮ ಹೆಸರು, ದೂರವಾಣಿ ಸಂಖ್ಯೆ ಮತ್ತು ವಯಸ್ಸಿನ ವಿವರಗಳೊಂದಿಗೆ ನೋಂದಣಿಯಾಗಿ ಯಾರು ಬೇಕಾದರೂ ಈ ರಸಪ್ರಶ್ನೆಯಲ್ಲಿ ಭಾಗವಹಿಸಬಹುದು ಹಾಗೂ ಇದರಲ್ಲಿ ಭಾಗವಹಿಸಿದ್ದಕ್ಕಾಗಿ ಪ್ರಮಾಣಪತ್ರವನ್ನು ಪಡೆಯಬಹುದು.
- http://constitutionquiz.nic.in/ ಜಾಲತಾಣಕ್ಕೆ ಭೇಟಿ ನೀಡಿ ನೋಂದಾಯಿಸಿಕೊಳ್ಳಿ. ರಾಷ್ಟ್ರಪತಿಯವರು ಉದ್ಘಾಟಿಸಿದ ನಂತರವಷ್ಟೇ ಹೆಸರನ್ನು ನೋಂದಾಣಿ ಮಾಡಲು ಅವಕಾಶ
- ಒಂದೇ ಮೊಬೈಲ್ ಸಂಖ್ಯೆಯನ್ನು ಬಳಸಿ ಅನೇಕ ನೋಂದಣಿಗಳಿಗೂ ಅವಕಾಶವಿದೆ. ಇದರಲ್ಲಿ ಸುಮಾರು 1000 ಪ್ರಶ್ನೆಗಳ ಪ್ರಶ್ನೆಗಳ ಭಂಡಾರವಿದ್ದು, ಮತ್ತು ಪ್ರತಿ ಬಾರಿ 5 ಪ್ರಶ್ನೆಗಳು ಯಾದೃಚ್ಛಿಕವಾಗಿ ಪ್ರತ್ಯಕ್ಷವಾಗುತ್ತವೆ.
- ರಸಪ್ರಶ್ನೆಯಲ್ಲಿ ಭಾಗವಹಿಸುವ ಯಾವುದೇ ಸ್ಪರ್ಧಿಯು ಇವುಗಳಿಗೆ ಉತ್ತರಿಸಲು ಪ್ರಯತ್ನಿಸಬೇಕು.
- ಸ್ಪರ್ಧಿಯು ಅವನ/ ಅವಳ ಉತ್ತರಗಳು ಸರಿಯಾಗಿವೆಯೇ ಎಂದು ಪರಿಶೀಲಿಸಬಹುದು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರತಿಯೊಬ್ಬರಿಗೂ ಪ್ರಮಾಣಪತ್ರವನ್ನು ನೀಡಲಾಗುವುದು.
- ಈ ರಸಪ್ರಶ್ನೆ ಕಾರ್ಯಕ್ರಮದ ಮೂಲ ಉದ್ದೇಶ ಭಾರತೀಯ ಸಂವಿಧಾನ ಮತ್ತು ಸಂಸದೀಯ ಪ್ರಜಾಪ್ರಭುತ್ವದ ಮೂಲಭೂತ ಮೌಲ್ಯಗಳನ್ನು ಜನಪ್ರಿಯಗೊಳಿಸುವುದೇ ಹೊರತು ಸ್ಪರ್ಧಿಗಳ ಜ್ಞಾನವನ್ನು ಪರೀಕ್ಷಿಸುವುದಿಲ್ಲ.
- ಪ್ರಶ್ನೆಗಳು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳೆರಡರಲ್ಲೂ ಇರುತ್ತವೆ. ಇದರಿಂದ ಹಿರಿಯ ನಾಗರಿಕರು ಸೇರಿದಂತೆ ಹೆಚ್ಚು ಹೆಚ್ಚು ಜನರು ವಿಶ್ವದಾದ್ಯಂತ ಭಾಗವಹಿಸಬಹುದು.