Subramaniyan Swamy: (ನ.25) : ನವದೆಹಲಿ: ಬಿಜೆಪಿ ರಾಜ್ಯಸಭಾ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಅವರು ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ವೈರಲ್ ಆಗಿದೆ. ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಬಿಜೆಪಿ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ. ಕೇಂದ್ರ ಸರ್ಕಾರ ತನ್ನ ಆಡಳಿತದ ಪ್ರತಿ ಅಂಶದಲ್ಲಿ ವಿಫಲವಾಗಿದೆ ಎಂದು ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಆರ್ಥಿಕ ಸ್ಥಿತಿ, ಗಡಿ ಭದ್ರತೆ, ಅಫ್ಘಾನಿಸ್ತಾನ್ ಬಿಕ್ಕಟ್ಟು ನಿರ್ವಹಣೆ, ಪೆಗಾಸಸ್ ಭದ್ರತೆ ಉಲ್ಲಂಘನೆ, ಕಾಶ್ಮೀರದ ಕಡೆಗೆ ಕಾರಣ ಯಾರು ಎಂದು ಪ್ರಶ್ನಿಸಿದ್ದಾರೆ. ಇದರೆಲ್ಲದರಲ್ಲಿಯೂ ಮೋದಿ ಸರ್ಕಾರ ವಿಫಲವಾಗಿದೆ ಎಂದು ಉಲ್ಲೇಖಿಸಿದ್ದಾರೆ. ಟ್ವೀಟ್ ಮಾಡಿರುವ ಸುಬ್ರಹ್ಮಣಿಯನ್ ಸ್ವಾಮಿ ಪ್ರಧಾನಿ ಮೋದಿ ಸರ್ಕಾರಕ್ಕೆ ರಿಪೋರ್ಟ್ ಕಾರ್ಡ್ ನೀಡುವ ಮೂಲಕ ಟೀಕಿಸಿದ್ದಾರೆ..
Modi Government's Report Card:
— Subramanian Swamy (@Swamy39) November 24, 2021
Economy—FAIL
Border Security–FAIL
Foreign Policy –Afghanistan Fiasco
National Security —Pegasus NSO
Internal Security—Kashmir Gloom
Who is responsible?–Subramanian Swamy
ರಾಜ್ಯಸಭಾ ಸಂಸದ ಸುಬ್ರಹ್ಮಣಿಯನ್ ಸ್ವಾಮಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭೇಟಿಯಾಗಿ ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ. ಇದರಲ್ಲ ಅದರ ನಡುವೆ ಸುಬ್ರಹ್ಮಣಿಯನ್ ಸ್ವಾಮಿ ಅವರು ಟ್ವೀಟ್ ಮಾಡಿದ್ದು ವೈರಲ್ ಆಗಿದೆ.
ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಸುಬ್ರಹ್ಮಣಿಯನ್ ಸ್ವಾಮಿಯವರು ಅವರನ್ನು ಹೊಗಳಿದ್ದಾರೆ. ಜಯಪ್ರಕಾಶ್ ನಾರಾಯಣ, ಮೊರಾರ್ಜಿ ದೇಸಾಯಿ, ರಾಜೀವ್ ಗಾಂಧಿ,ಚಂದ್ರಶೇಖರ್ ಮತ್ತು ಪಿ ವಿ ನರಸಿಂಹರಾವ್ ಅವರಂಥ ರಾಜಕೀಯ ದಿಗ್ಗಜರೊಂದಿಗೆ ಹೋಲಿಸಿದ್ದಾರೆ. “ನಾನು ಅನೇಕ ರಾಜಕಾರಣಿಗಳು ಒಟ್ಟಿಗೆ ಕೆಲಸ ಮಾಡಿದ್ದೇನೆ ಹಾಗೂ ಅವರನ್ನು ಭೇಟಿಯಾಗಿದ್ದೇನೆ. ಅವರನ್ನೇ ಮಮತಾ ಬ್ಯಾನರ್ಜಿ ಬಿಜೆಪಿ ಮೊರಾರ್ಜಿದೇಸಾಯಿ, ಪಿವಿ ನರಸಿಂಹ ರಾವ್ ಅವರು ಏನು ಹೇಳಿದ್ದಾರೆ ಅದನ್ನೇ ಮಾಡಿದ್ದೇನೆ. ಏನನ್ನು ಮಾಡುತ್ತಿದ್ದೇನೆ ಅದನ್ನೇ ಹೇಳಿದ್ದಾರೆ. ಭಾರತೀಯ ರಾಜಕಾರಣದಲ್ಲಿ ಅವರು ಅಪರೂಪದ ಗುಣವುಳ್ಳವರು” ಎಂದು ಸುಬ್ರಮಣಿಯನ್ ಸ್ವಾಮಿ ಅವರು ತಿಳಿಸಿದ್ದಾರೆ.