Immunity Booster Food : (ನ.25) ಚಳಿಗಾಲದಲ್ಲಿ ಸಾಮಾನ್ಯವಾಗಿ ಆರೋಗ್ಯ ಹದಗೆಡುತ್ತದೆ. ಶೀತ ನೆಗಡಿ ಕೆಮ್ಮು ಇನ್ನಿತರ ಕಾಯಿಲೆಗಳು ನಮ್ಮ ದೇಹವನ್ನು ಸುತ್ತುವರಿಯುತ್ತವೆ.ಚಳಿಗಾಲವನ್ನು ಆರಾಮವಾಗಿ ನಿಶ್ಚಿಂತೆಯಿಂದ ಕಳೆಯಲು ಇಂತಹ ಆಹಾರ ಪದಾರ್ಥಗಳನ್ನು ಸೇವಿಸುವ ಅಭ್ಯಾಸ ರೂಡಿಮಾಡಿಕೊಳ್ಳಿ.
ದೇಹವನ್ನು ಚಳಿಯಿಂದ ರಕ್ಷಿಸಲು ಕೇವಲ ಬೆಚ್ಚಗಿನ ಉಡುಪುಗಳು ಮಾತ್ರವಲ್ಲದೆ ಚಳಿಗಾಲದ ಸಮಯದಲ್ಲಿ ನೀವು ಸೇವಿಸುವ ಆಹಾರ ಕೂಡಾ ಮುಖ್ಯವಾಗುತ್ತದೆ.
ಅಹಾರದಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.ಆಹಾರ ಪದಾರ್ಥಗಳ ಸೇವನೆಯಿಂದ ನೀವು ಶಕ್ತಿಯನ್ನು ಪಡೆಯಬಹುದು.

ಒಣ ಖರ್ಜೂರ
ಡ್ರೈ ಫ್ರೂಟ್ ಎಂದು ಹೇಳುವ ಒಣ ಖರ್ಜೂರ ಸಂಧಿವಾತ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಖರ್ಜೂರ ಸೇವನೆ ತುಂಬಾ ಉಪಯೋಗವಾಗುವ ಜೊತೆಗೆ ಉತ್ತಮ ಆರೋಗ್ಯ ನೀಡುತ್ತದೆ.ಜೀವಸತ್ವಗಳು, ಖನಿಜಗಳು ಮತ್ತು ಫೈಬರ್ ಅಂಶದ ಒಳಗೊಂಡಿದೆ.
ಕ್ಯಾಲ್ಸಿಯಂನಿಂದ ಸಮೃದ್ಧವಾಗಿರುವ ಖರ್ಜೂರವು ಮೂಳೆಗಳು ಹಾಗೂ ಹಲ್ಲುಗಳನ್ನು ಬಲಶಾಲಿಯಾಗುವಲ್ಲಿ ಸಹಾಯ ಮಾಡುತ್ತದೆ.

ತುಪ್ಪ
ಚಳಿಗಾಲದಲ್ಲಿ ಶುದ್ಧ ತುಪ್ಪವು ಸುಲಭದಲ್ಲಿ ಜೀರ್ಣವಾಗುತ್ತದೆ. ಇದು ಕೊಬ್ಬಿನ ಅಂಶ ಆಗಿದ್ದರೂ, ನಿಮ್ಮ ದೇಹವನ್ನು ಬೆಚ್ಚಗಿಡಲು ಸಹಾಯ ಮಾಡುತ್ತದೆ. ತುಪ್ಪದ ಮಿತವಾದ ಸೇವನೆಯಿಂದ ಚರ್ಮ ಶುಷ್ಕ ಹಾಗೂ ಚಪ್ಪಟೆಯಾಗದಂತೆ ತಡೆಯಲು ಸಹಾಯ ಮಾಡುತ್ತದೆ.ರೊಟ್ಟಿ, ಚಪಾತಿ, ಅನ್ನವನ್ನು ಸವಿಯುವಾಗ ತುಪ್ಪ ಬಳಸಹುದಾಗಿದೆ.

ಆಲೂಗಡ್ಡೆ
ವಿಶೇಷವಾಗಿ ಚಳಿಗಾಲದ ಸಮಯದಲ್ಲಿ ಬೇಕಾಗುವ ಫೈಬರ್, ವಿಟಮಿನ್ ಎ ಮತ್ತು ಪೊಟ್ಯಾಶಿಯಂನಿಂದ ಕೂಡಿರುವ ಆಲೂಗೆಡ್ಡೆ ಹೆಚ್ಚು ಪೋಷಕಾಂಶಗಳನ್ನು ಒಳಗೊಂಡಿರುತ್ತದೆ.ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಜೊತೆಗೆ ಉರಿಯೂತ ಕಡಿಮೆ ಮಾಡುತ್ತದೆ.

ನೆಲ್ಲಿಕಾಯಿ
ಚಳಿಗಾಲದಲ್ಲಿ ಹೇರಳವಾಗಿ ಸಿಗುವ ನೆಲ್ಲಿಕಾಯಿ,
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ವಿಟಮಿನ್ ಸಿ ಹೊಂದಿದೆ. ವೈರಸ್ ವಿರುದ್ಧ ಹೋರಾಡುವ ಶಕ್ತಿ ಇದೆ. ಉಪ್ಪಿನಕಾಯಿ, ಚಟ್ನಿ, ಜ್ಯೂಸ್ ಮಾಡಿ ಕುಡಿಯುವುದು ಒಳ್ಳೆಯದು.

ಬೆಲ್ಲ
ಬೆಲ್ಲ ರಕ್ತಹೀನತೆ ಸಮಸ್ಯೆಯಿಂದ ಪರಿಹಾರ ಪಡೆಯಲು ಬೆಲ್ಲ ತಿನ್ನಿ ಕಬ್ಬಿಣಾಂಶದಿಂದ ಹೊಂದಿರುವ ಹೊಂದಿದೆ. ಬೆಲ್ಲ ಹಾಗೇ ತಿನ್ನುವ ಬದಲು ಕೊಬ್ಬರಿ ಚುರುಗಗಳೊಂದಿಗೆ ತಿನ್ನಿ, ಕೊಬ್ಬರಿಯು ಕೂಡ ಒಂದು ಚಳಿಗಾಲದಲ್ಲಿ ತಿನ್ನಬಹುದಾದ ಉತ್ತಮ ಅಹಾರ. ಕೊಬ್ಬರಿ ಎಣ್ಣೆ ಅಂಶವನ್ನೂ ದೇಹಕ್ಕೆ ನೀಡುತ್ತದೆ.

ರಾಗಿ
ಹೆಚ್ಚಿನ ಫೈಬರ್ ಮತ್ತು ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಾಂಶ ಹೊಂದಿರುವ ರಾಗಿ ದಿನ ನಿತ್ಯ ಬಳಸುವ ಉತ್ತಮ ಆಹಾರವಾಗಿದೆ.ಇದರಲ್ಲಿ ಕಡಿಮೆ ಗ್ಲೈಸೆಮಿಕ್ ಇರುವುದರಿಂದ ರಾಗಿ ತೂಕ ನಷ್ಟಕ್ಕೆ ಸಹಾಯಕಾರಿ.ರಾಗಿ ಸೇವನೆಯು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.ಫೈಬರ್ ಮತ್ತು ವಿಟಮಿನ್ ಬಿ ಅಂಶ ಹೇರಳವಾಗಿ ಹೊಂದಿದೆ.

ಸಾಸಿವೆ
ಅಡುಗೆ ಒಗ್ಗರಣೆಯಲ್ಲಿ ಸಾಸಿವೆಯನ್ನು ಬಳಸುತ್ತೇವೆ. ವಿಟಮಿನ್ ಕೆ, ಎ ಮತ್ತು ಸಿ ಅಂಶದಿಂದ ಸಮೃದ್ಧವಾಗಿದೆ. ಉತ್ಕರ್ಷಣ ನಿರೋಧಕವನ್ನು ಹೊಂದಿದ್ದು, ಹೃದ್ರೋಗ, ಅಸ್ತಮಾ ಸಮಸ್ಯೆಗಳ ನಿವಾರಣೆಗೆ ಉತ್ತಮ ಆಯ್ಕೆಯಾಗಿದೆ.

ಬಾದಾಮಿ
ನಿಮ್ಮ ಹೃದಯದ ಆರೋಗ್ಯ ಸುಧಾರಣೆಗೆ ಒಳ್ಳೆಯದು. ನಿಮ್ಮ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಬಾದಾಮಿ ಉತ್ತಮ ಅಹಾರ. ಬಾದಾಮಿ, ಗೋಡಂಬಿ ಸೇವನೆಯು ನರಮಂಡಲದ ಆರೋಗ್ಯವನ್ನು ಸುಧಾರಿಸುತ್ತದೆ.
ಚಳಿಗಾಲದಲ್ಲಿ ಮೇಲೆ ಹೇಳಿರುವ ಆಹಾರವನ್ನು ಸೇವಿಸಿ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.