Ambarish Remembrance: (ನ.24): ರೆಬಲ್ ಸ್ಟಾರ್ ಅಂಬರೀಶ್ ಸಾವನ್ನಪ್ಪಿ ಇಂದಿಗೆ ಮೂರು ವರ್ಷಗಳು ಕಳೆದಿದೆ. ಅಂಬಿ ಪುಣ್ಯತಿಥಿಯಂದು ಅಂಬರೀಶ್ ಪತ್ನಿ ಸುಮಲತಾ ಸಾಮಾಜಿಕ ಜಾಲತಾಣದಲ್ಲಿ ಭಾವುಕ ಸಂದೇಶ ಬರೆದುಕೊಂಡಿದ್ದಾರೆ.
ಹೌದು ಕನ್ನಡದ ಹಿರಿಯ ನಟ ಅಂಬರೀಷ್ 2018 ನವೆಂಬರ್ 24 ರಂದು ನಿಧನರಾಗಿದ್ದಾರೆ. ಅವರನ್ನು ಕನ್ನಡ ಚಿತ್ರರಂಗ ಹಾಗೂ ಅಭಿಮಾನಿಗಳು ಕಳೆದುಕೊಂಡು ಮೂರು ವರ್ಷ ಕಳೆದಿದೆ. ಅಂಬರೀಶ್ ಇಲ್ಲದೇ ಮೂರು ವರ್ಷಗಳಾಗಿದ್ದು ಇಂದು ಅವರ ಪುಣ್ಯಸ್ಮರಣೆ ನಡೆಯಲಿದೆ. ಇನ್ನೂ ಪುಣ್ಯಸ್ಮರಣೆ ಹಿನ್ನೆಲೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಅಂಬಿ ಅವರನ್ನು ನೆನಪು ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಅಂಬರೀಷ್ ಸಮಾಧಿಗೆ ಇಂದು ಕುಟುಂಬದವರು, ಆಪ್ತರು, ಅಭಿಮಾನಿಗಳು ಭೇಟಿ ನೀಡಲಿದ್ದಾರೆ.
ಇನ್ನೂ ಅಂಬರೀಶ್ ಪುಣ್ಯ ಸ್ಮರಣೆ ಹಿನ್ನಲೆ ಸುಮಲತಾ ಅಂಬರೀಶ್ ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ. ಕಳೆದ ಮೂರು ವರ್ಷಗಳಿಂದ ನೀವು ನಮ್ಮ ಹೃದಯದಲ್ಲಿ, ಚಿಂತನೆಯಲ್ಲಿ ಮತ್ತು ಆತ್ಮದ ಜೊತೆಗೆ ಒಂದಾಗಿದ್ದೀರಿ. ಎಂದೆಂದಿಗೂ ನಿಮ್ಮನ್ನು ಪ್ರೀತಿಸುವೆ ಎಂದು ಸುಮಲತಾ ಬರೆದುಕೊಂಡಿದ್ದಾರೆ.ನವೆಂಬರ್ 24ರಂದು 66 ವರ್ಷದ ಅಂಬರೀಷ್ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು.
ಇದನ್ನೂ ಓದಿ:B C Patil: ಕಾಂಪೋಸ್ಟ್ ಬಳಕೆಗೆ ಹೆಚ್ಚಿನ ಗಮನ ನೀಡುವಂತೆ ಕ್ರಮ: ಬಿ.ಸಿ.ಪಾಟೀಲ್