MLC Elections: ಬೆಂಗಳೂರು:(ನ.23): ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಬೆಂಗಳೂರು ನಗರ ವಿಭಾಗದ ಹೆಚ್ಚು ಎಸ್ ಗೋಪಿನಾಥ್ ರೆಡ್ಡಿ ಅವರು ಇಂದು ನಾಮಪತ್ರ ಸಲ್ಲಿಸಿದರು. ಜಿಲ್ಲಾ ಚುನಾವಣೆ ಅಧಿಕಾರಿ ಆಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿಗಳಿಗೆ ಇಂದು ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಿವಿ ಸದಾನಂದಗೌಡ, ಸಚಿವ ಡಾ ಸಿಎಸ್ ಅಶ್ವಥ್ ನಾರಾಯಣ್, ಸಂಸದರಾದ ಪಿಎಸ್ ಮೋಹನ್, ರಾಜ್ಯಸಭಾ ಸದಸ್ಯರಾದ ಕೆಸಿ ರಾಮಮೂರ್ತಿ, ಶಾಸಕರು ಹಾಗೂ ವಿಧಾನಸಭೆ ಮುಖ್ಯ ಸಚೇತಕರ ಸತೀಶ್ ರೆಡ್ಡಿ, ಶಾಸಕರಾದ ಅರವಿಂದ ಲಿಂಬಾವಳಿ ಒಕ್ಕಲಿಗ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ ಕೃಷ್ಣಪ್ಪ, ಗೋಪಿನಾಥ್ ರೆಡ್ಡಿ ಹಾಗೂ ಪತ್ನಿ ಶ್ರೀಮತಿ ಗಾಯತ್ರಿ ಗೋಪಿನಾಥ್ ರೆಡ್ಡಿ ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಹಾಜರಿದ್ದರು.

ಬೆಂಗಳೂರು ನಗರ ಅಭ್ಯರ್ಥಿ ಸಫರ್ ಶರೀಫರಿಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕುವೆಂಪು ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಇಂದು ಬಿ ಫಾರಂ ನೀಡಿದರು. ಕಾರ್ಯದರ್ಶಿಯಾದ ರಾಮಲಿಂಗಾರೆಡ್ಡಿ ಜಿಲ್ಲೆ ಭಾವ ಹಾಗೂ ಇತರರು ಹಾಜರಿದ್ದರು.
ಬಳ್ಳಾರಿಯ ಉಸ್ತುವಾರಿ ರಾಮುಲುಗೆ ನೀಡಲಿ
ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಜವಾಬ್ದಾರಿಯನ್ನು ಹಿರಿಯ ಸಚಿವ ರಾಮುಲು ನೀಡುವಂತೆ ಆನಂದ್ ಸಿಂಗ್ ಅವರು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಮನವಿ ಮಾಡಿದ್ದಾರೆ.
ಎರಡು ಜಿಲ್ಲೆ ವಸ್ತುವಾರಿ ಇಂದ ಸ್ವಲ್ಪ ಒತ್ತಡ ಇದೆ ಈಗಾಗಲೇ ರಾಮುಲು ಅವರಿಗೆ ಬಳ್ಳಾರಿ ಉಸ್ತುವಾರಿ ನೀಡಬೇಕಿತ್ತು ಆದರೆ ಇನ್ನೂ ಸಾಧ್ಯವಾಗಿಲ್ಲ ಎಂದು ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಕಾಂಗ್ರೆಸ್ ಅಭ್ಯರ್ಥಿ ಕೆಸಿ ಕೊಂಡಯ್ಯ ಅವರೊಂದಿಗೆ ಸ್ನೇಹದ ವಿಚಾರವಾಗಿ ಮಾತನಾಡಿದ ಆನಂದ್ ಸಿಂಗ್ ಅವರು “ನಾವೆಲ್ಲ ಅಣ್ಣ-ತಮ್ಮಂದಿರಿದ್ದಂತೆ ರಾಜಕೀಯ ಬೇರೆತನ ಬೇರೆ ಪಕ್ಷ ಅಂತ ಬಂದಾಗ ನಾವೆಲ್ಲಾ ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ ಈ ಬಾರಿ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಯ ಗೆಲುವು ನಿಶ್ಚಿತ ಎಂದು ಸಚಿವರು ತಿಳಿಸಿದ್ದಾರೆ.