ಕಾರವಾರ:ISIS Magazine:(ನ.23):ಕರ್ನಾಟಕದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾದ ಉತ್ತರಕನ್ನಡದ ಮುರುಡೇಶ್ವರ ಕ್ಷೇತ್ರದ ಮೇಲೆ ಉಗ್ರರ ಕೆಂಗಣ್ಣು ಬಿದ್ದಿದೆ.
ಮುರುಡೇಶ್ವರದಲ್ಲಿರುವ ಬೃಹತ್ ಈಶ್ವರ ಪ್ರತಿಮೆಯ ಚಿತ್ರವನ್ನು ಸಂಘಟನೆಯ ಪತ್ರಿಕೆಯಲ್ಲಿ ಪ್ರಕಟವಾಗಿದ್ದು ಇದು ಉಗ್ರ ಸಂಘಟನೆ ದಾಳಿಯ ಮುನ್ನೆಚ್ಚರಿಕೆಯ ಸಂಚಾಗಿದಿಯೆ? ಎಂಬ ಅನುಮಾನ ವ್ಯಕ್ತವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿರುವ ಮುರುಡೇಶ್ವರನ ಶಿವನ ಶಿರವನ್ನು ಕತ್ತರಿಸಿ ಎಡಿಟ್ ಮಾಡಲಾಗಿರುವ ಫೋಟೋವನ್ನು ಉಗ್ರ ಸಂಘಟನೆಯ ಐಸಿಸ್ ಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಶಿವನ ಫೋಟೋ ವೈರಲ್ ಆಗುತ್ತಿದೆ.
ಅಂಕುಶ್ ಸಕ್ಸೇನ ಎಂಬುವವರು ಇನ್ಸ್ಟಾಗ್ರಾಂ ಖಾತೆಯಲ್ಲಿ ಉಗ್ರರ ಪತ್ರಿಕೆಯಲ್ಲಿ ಪ್ರಕಟವಾಗಿರುವ ಫೋಟೋವನ್ನು ಪೋಸ್ಟ್ ಮಾಡಿ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. ಉಗ್ರ ಸಂಘಟನೆಯ ಪತ್ರಿಕೆಯಾದ (The Voice of Hind)ದಿ ವಾಯ್ಸ್ ಆಫ್ ಹಿಂದ್ ಪತ್ರಿಕೆಯ ಮುಖಪುಟದಲ್ಲಿ ಮುರುಡೇಶ್ವರ ಶಿವನ ವಿಗ್ರಹವನ್ನು ಪ್ರಕಟಿಸಲಾಗಿದೆ ಹಾಗೂ ಇದರ ಮೇಲೆ ಇದು ‘ನಕಲಿ ದೇವರನ್ನು ಒಡೆಯುವ ಸಮಯ’ ‘It is time to the break False God”ಎಂದು ಬರೆಯಲಾಗಿದೆ.
ಶಿವನ ಶಿರವನ್ನು ಅರ್ಧಕ್ಕೆ ಕತ್ತರಿಸಿ ತಲೆಯ ಭಾಗದಲ್ಲಿ ಉಗ್ರ ಸಂಘಟನೆಯ ಮಾದರಿಯ ಧ್ವಜ ಹರಡುತ್ತಿರುವಂತೆ ಎಡಿಟ್ ಮಾಡಲಾಗಿದೆ.
ISIS' magazine 'The Voice of Hind' pic.twitter.com/B4jloTNOOJ
— Anshul Saxena (@AskAnshul) November 22, 2021
ಸದ್ಯ ಈ ಪೋಸ್ಟ್ ಬಗ್ಗೆ ಅಧಿಕೃತ ಮಾಹಿತಿ ಇಲ್ಲವಾದರೂ, ಕೂಡಲೇ ಈ ಬಗ್ಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಂಕುಶ್ ಅವರು ತಮ್ಮ ಪೋಸ್ಟಿನಲ್ಲಿ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮುರುಡೇಶ್ವರನ ಶಿವನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಇದರ ಬಗ್ಗೆ ಇನ್ನಷ್ಟು ಮಾಹಿತಿ ಹೊರಬರಬೇಕಿದೆ. ಈ ಪೋಸ್ಟ್ ಹಿಂದಿರುವ ಸತ್ಯವನ್ನು ಬಿಡಿಸಿ ಸಂಬಂಧ ಇಲಾಖೆ ಕ್ರಮ ವಹಿಸಬೇಕು ಹಾಗೂ ಇಂತಹ ದುಷ್ಕೃತ್ಯಕ್ಕೆ ಸರ್ಕಾರ ಅವಕಾಶ ನೀಡಬಾರದು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.