MLC Election ಬೆಂಗಳೂರು: (ನ.23): ವಿಧಾನಪರಿಷತ್ ಚುನಾವಣೆಗೆ ಜೆಡಿಎಸ್ ಪಕ್ಷದಿಂದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ ರಾಜ್ಯದಲ್ಲಿ ಒಟ್ಟು 25 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಜೆಡಿಎಸ್ ನಿಂದ 7 ಸ್ಥಾನಗಳಿಗೆ ಮಾತ್ರ ಸ್ಪರ್ಧಿಸುತ್ತಿದೆ. ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯನ್ನು ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಅವರು ಬಿಡುಗಡೆ ಮಾಡಿದರು.
ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ:
ಹಾಸನ : ಸೂರಜ್ ರೇವಣ್ಣ
ಮಂಡ್ಯ: ಅಪ್ಪಾಜಿಗೌಡ
ತುಮಕೂರು: ಅನಿಲ್ ಕುಮಾರ್
ಮೈಸೂರು: ಸಿ ಎನ್ ಮಂಜೇಗೌಡ
ಕೋಲಾರ: ವಕ್ಕಲೇರಿ ರಾಮು
ಬೆಂಗಳೂರು ಗ್ರಾಮಾಂತರ: ಎಚ್ ಎಂ ರಮೇಶಗೌಡ
ಕೊಡಗು: ಹೆಚ್ ಯು ಇಸಾಕ್ ಖಾನ್
ಉಳಿದ ಜಿಲ್ಲೆಗಳಾದ ದಕ್ಷಿಣ ಕನ್ನಡ ಉಡುಪಿ ಕ್ಷೇತ್ರದಿಂದ ಯಾವುದೇ ಜೆಡಿಎಸ್ ಅಭ್ಯರ್ಥಿಗಳು ಸ್ಪರ್ಧಿಸುತ್ತಿಲ್ಲ ಎಂದು ತಿಳಿಸಿದ್ದಾರೆ.

ಮೈಸೂರು-ಚಾಮರಾಜನಗರ ದ್ವಿಸದಸ್ಯ ಸ್ಥಾನ ಸ್ಪರ್ಧೆಗೆ 2 ಪಕ್ಷಗಳು ಅಂತಿಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಡಾ. ತಿಮ್ಮಯ್ಯ ಅವರಿಗೆ ಟಿಕೆಟ್ ನೀಡಲಾಗಿದೆ. ಹಾಲಿ ವಿಧಾನ ಪರಿಷತ್ ಸದಸ್ಯರಾದ ಕಾಂಗ್ರೆಸ್ಸ ಧರ್ಮಸೇನ ಹಾಗೂ ಜೆಡಿಎಸ್ ಪಕ್ಷದ ಸಂದೇಶ ನಾಗರಾಜ್ ಅವರಿಗೆ ಟಿಕೆಟ್ ಪಡೆಯುವಲ್ಲಿ ನಿರಾಸೆಯಾಗಿದೆ.
ಜೆಡಿಎಸ್ ಬದಲಿಗೆ ಬಿಜೆಪಿಯಿಂದ ಟಿಕೆಟ್ ಬಯಸಿದ್ದ ಸಂದೇಶ್ ನಾಗರಾಜ್ ಅವರಿಗೆ ಎರಡು ಪಕ್ಷಗಳಿಂದ ಟಿಕೆಟ ದೊರೆಯದೆ. ಕೈಕೊಟ್ಟಿದೆ.
ಸಂದೇಶ್ ನಾಗರಾಜ್ ಅವರಿಗೆ ಬಿಜೆಪಿಯಿಂದ ಟಿಕೆಟ್ ಕೈ ತಪ್ಪಿರುವ ಹಿನ್ನೆಲೆ ನಾಗರಾಜ್ ಅವರು ಮತ್ತೆ ವಾಪಸ್ಸು ಜೆಡಿಎಸ್ ಕಡೆ ಮುಖ ಮಾಡಿದ್ದಾರೆ. ಸಂದೇಶ್ ನಾಗರಾಜ್ ಪಕ್ಷ ಬಿಡುವುದಾಗಿ ಹೇಳಿದರು ಹಾಗೂ ಪಕ್ಷಡಿಂದ ಅಂತರ ಕಾಯ್ದುಕೊಂಡಿದ್ದರು.
ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಸಿಎಂ ಮಂಜೇಗೌಡ ರನ್ನು ಜೆಡಿಎಸ್ ಪಕ್ಷಕ್ಕೆ ಸೇರಿಸಿಕೊಂಡು ಟಿಕೆಟ್ ನೀಡುವುದಾಗಿ ಯೋಜನೆ ಹಾಕಿಕೊಳ್ಳಲಾಗಿತ್ತು.
ಮಂಜೇಗೌಡ ಅವರು ಪಕ್ಷ ಸೇರ್ಪಡೆ ಕಾರ್ಯಕ್ರಮಕ್ಕೂ ಮುನ್ನ ಮಾಜಿ ಸಿಎಂ ಕುಮಾರಸ್ವಾಮಿ ಅವರಲ್ಲಿ ಮಾತನಾಡಿ ಸಂದೇಶ್ ನಾಗರಾಜ್ ಅವರಿಗೆ ಜೆಡಿಎಸ್ ನಿಂದ ಸ್ಪರ್ಧೆ ಮಾಡಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಈ ವೇಳೆ ಜೆಡಿಎಸ್ ಪಕ್ಷದ ಮುಖಂಡರ ಸಭೆಯಲ್ಲಿ ಟಿಕೆಟ್ ನೀಡುವುದರ ಕುರಿತು ಅಂತಿಮ ನಿರ್ಧಾರ ಕೈಗೊಂಡಿದ್ದು, ಸಂದೇಶ್ ನಾಗರಾಜ್ ಅವರ ಬದಲಿಗೆ ಮಂಜೇಗೌಡ ರಿಗೆ ಜೆಡಿಎಸ್ ಟಿಕೆಟ್ ನೀಡುವುದಾಗಿ ಪ್ರಕಟಿಸಿದರು.
ಇದನ್ನೂ ಓದಿ: Congress Party: ವಿಧಾನಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಎರಡು ಪಕ್ಷದಿಂದ ಟಿಕೆಟ್ ಸಿಗದೇ ವಂಚಿತರಾಗಿರುವ ಸಂದೇಶ್ ನಾಗರಾಜ್ ಅವರಿಗೆ ಸದ್ಯದ ಪರಿಸ್ಥಿತಿ ಅಡ್ಡಗೋಡೆಯ ಮತ್ತೆ ದೀಪ ಇಟ್ಟಿರುವ ಹಾಗಿದೆ. ಸತ್ಯ ಸಂದೇಶ ನಾಗರಾಜ್ ಅವರು ತಮ್ಮ ಬೆಂಬಲರಿಗೆ ಹಾಗೂ ಅಭಿಮಾನಿಗಳಿಗೆ ಪತ್ರ ಬರೆದಿದ್ದಾರೆ.
ಬೆಂಬಲರಿಗೆ ಹಾಗೂ ಅಭಿಮಾನಿಗಳಿಗೆ ಪತ್ರ
ಸಂದೇಶ್ ನಾಗರಾಜ್ ಅವರು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿಲ್ಲ ಎಂದು ಪತ್ರದಲ್ಲಿ ಬರೆದಿದ್ದಾರೆ. 12 ವರ್ಷಗಳಿಂದ ವಿಧಾನಪರಿಷತ್ ಸದಸ್ಯರಾಗಿ ಜನಪರ ಕೆಲಸ ಮಾಡಿದ ತೃಪ್ತಿ ಇದೆ. ಈ ಮೂಲಕ ಮತದಾರರು ಹಾಗೂ ಪಕ್ಷದ ಋಣ ತೀರಿಸುತ್ತೇನೆ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಆಸೆ ಇತ್ತು ಆದರೆ ಪಕ್ಷದ ನಿಯಮದಂತೆ ವಯೋಮಿತಿ ಕಾರಣಕ್ಕೆ ನನಗೆ ಟಿಕೆಟ್ ನೀಡಲಿಲ್ಲ ಆದರೂ ನನಗಾಗಿ ಶ್ರಮಿಸಿದ ಬಿಜೆಪಿ ಎಲ್ಲಾ ಮುಖಂಡರುಗಳಿಗೆ ವಂದನೆಗಳು ಎಂದು ಪತ್ರದಲ್ಲಿ ಬರೆದಿದ್ದಾರೆ.
ಬಿಜೆಪಿಯ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮೈಸೂರು ನಗರಾಧ್ಯಕ್ಷ ಶ್ರೀವತ್ಸ ರವಿಶಂಕರ್ ಹೇಮಂತ್ ಕುಮಾರ್ ಗಣೇಶ ಸೇರಿದಂತೆ ಎಲ್ಲಾ ಬಿಜೆಪಿ ಮುಖಂಡರಿಗೂ ಹಾಗೂ ಕಾರ್ಯಕರ್ತರಿಗೆ ಧನ್ಯವಾದಗಳು ಎಂದು ಉಲ್ಲೇಖಿಸಿದ್ದಾರೆ.