ಹೈದರಾಬಾದ್: Arhaa Allu Arjun (ನ.23): ಟಾಲಿವುಡ್ ನ ಖ್ಯಾತ ನಾಯಕ ಅಲ್ಲು ಅರ್ಜುನ್ ಅವರ ಪುತ್ರಿ ಮತ್ತೊಮ್ಮೆ ಸುದ್ದಿಯಾಗಿದ್ದಾಳೆ. ಟಾಲಿವುಡ್ ನ ಶಾಕುಂತಲಂ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡುವುದರ ಜೊತೆ ಅಲ್ಲು ಅರ್ಜುನ್ ಪುತ್ರಿ ಅರ್ಹಾ ಅರ್ಜುನ್ ಮತ್ತೊಂದು ವಿಶ್ವದಾಖಲೆಯನ್ನು ಮಾಡಿದ್ದಾಳೆ.
ನಟ ಅಲ್ಲು ಅರ್ಜುನ್ ಮಗಳು ನಟನೆಯಲ್ಲೂ ಸೈ ಎನಿಸಿಕೊಂಡಿರುವವುದರ ಜೊತೆಗೆ ಚೆಸ್ ಆಡುವ ಮೂಲಕ ವಿಶ್ವ ದಾಖಲೆ ಮಾಡಿದ್ದಾಳೆ. ಈಕೆ ಅತಿ ಚಿಕ್ಕ ವಯಸ್ಸಿಗೆ ಚೆಸ್ ತರಬೇತುದಾರರಾಗಿ ಗಮನ ಸೆಳೆದಿದ್ದಾಳೆ.

ಮಗಳ ಸಾಧನೆಯ ಬಗ್ಗೆ ಅಲ್ಲು ಅರ್ಜುನ್ ಪತ್ನಿ ಅಲ್ಲೂ ಸ್ನೇಹ ರೆಡ್ಡಿ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ಮಗಳ ಹುಟ್ಟುಹಬ್ಬಕ್ಕೆ ಶುಭಕೋರುವವರು ಕಾಸ ಮತ್ತು ಸಾಧನೆ ಕುರಿತು ಬರೆದುಕೊಂಡಿದ್ದಾರೆ. ವಿಡಿಯೋದಲ್ಲಿ ಮಾಡುತ್ತಿರುವುದನ್ನು ನೋಡಬಹುದು ಜೊತೆಗೆ ಮೊಬೈಲ್ ವರ್ಲ್ಡ್ ರೆಕಾರ್ಡ್ ನೀಡುತ್ತಿರುವ ದೃಶ್ಯವನ್ನು ಕಾಣಬಹುದು. ರೆಕಾರ್ಡ್ ಮಾಡಿದ ಅರ್ಹ ಖುಷಿಯಿಂದ ಕುಣಿದು ಕುಪ್ಪಳಿಸಿದ್ದಾಳೆ.
ಇದನ್ನೂ ಓದಿ:Puneeth Rajkumar: ಅಭಿಮಾನಿಯೊಬ್ಬರ ಟ್ವೀಟ್ ಪ್ರೇರಣೆ: ಪುನೀತ್ ಅವರ ಬಯೋಪಿಕ್ ಮಾಡಲು ಸಿದ್ಧತೆ
ಖ್ಯಾತ ನಟಿ ಸಮಂತಾ ಅಕ್ಕಿನೇನಿ ಅವರು ನಟಿಸಿರುವ ಶಾಕುಂತಲಂ ಸಿನಿಮಾದಲ್ಲಿ ಆರ್ಹಾ ಶಾಕುಂತಲೆ ಉತ್ತರ ಭರತದ ಪಾತ್ರ ಮಾಡಿದ್ದಾಳೆ. ಶಾಕುಂತಲ ಚಿತ್ರದೊಂದಿಗೆ ಅಲ್ಲು ಅರ್ಜುನ್ ಕುಟುಂಬದ ನಾಲ್ಕನೇ ತಲೆಮಾರಿನ ಅಲ್ಲು ಅರ್ಹಾ ಚಿತ್ರರಂಗಕ್ಕೆ ಕಾಲೇಜು ಇರುವುದು ಹೆಮ್ಮೆಯ ಸಂಗತಿಯಾಗಿದೆ ಹಾಗೂ ಇದು ನನ್ನ ಮಗಳಿಗೆ ಸಿನಿಮಾವಾಗಿದೆ ಎಂದು ಅಲ್ಲು ಅರ್ಜುನ್ ಅವರು ಶಾಕುಂತಲ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.