Irregular Periods: (ನ.21): ಪ್ರತಿ ಮಹಿಳೆಗೂ ಕಾಡುವ ಸಮಸ್ಯೆ ಎಂದರೇ (Irregular Periods)ಅನಿಯಮಿತ ಪೀರಿಯಡ್ಸ್. ಕೆಲವರಿಗೆ ತಿಂಗಳಲ್ಲಿ ಬೇಗ ಆದರೆ, ಇನ್ನೂ ಕೆಲವರಿಗೆ ಆಗುವುದೇ ಇಲ್ಲ ಚಿಂತೆ ಮಾಡಬೇಡಿ.. ಪ್ರತಿ ತಿಂಗಳು ಸರಿಯಾಗಿ ಮುಟ್ಟು ಆಗನಿಲ್ಲ ಎಂದು ಕುಳಿತರೆ ಸಾಲದು, ನಿಯಮಿತವಾಗಿ ಯಾಕೆ ಆಗುವುದಿಲ್ಲ ಎಂದು ತಿಳಿದುಕೊಳ್ಳಬೇಕು.ಸಾಮಾನ್ಯವಾಗಿ(Cycle) ಋತುಚಕ್ರವು 28 ದಿನದ ಸೈಕಲ್. ಆದರೆ ಪ್ರತಿ ಮಹಿಳೆಯರಿಗೂ 15 ದಿನದಿಂದ ಹಿಡಿದು 40 ದಿನಗಳವರೆಗೂ ಈ ಚಕ್ರದಲ್ಲಿ ವ್ಯತ್ಯಾಸವಿರಬಹುದು.

ಅತಿಯಾದ ತೂಕ:
ಮಹಿಳೆಯರಿಗೆ ಅನಿಯಮಿತ ಮುಟ್ಟಿಗೆ ಅತಿಯಾದ (Heavy Weight)ತೂಕ ಕೂಡ ಮುಖ್ಯ ಕಾರಣವಾಗುತ್ತದೆ. ಜೀವನ ಶೈಲಿಯ ಬದಲಾವಣೆ ಇಂದ ಪೀರಿಯಡ್ ಆಗುವುದಿಲ್ಲ. ಚಿಂತೆ ಮಾಡಬೇಡಿ, ನಿಯಮಿತವಾಗಿ ವ್ಯಾಯಾಮ, ಯೋಗ ಮಾಡಿ ಸರಿಯಾದ ಆಹಾರ ಸೇವನೆ ಮಾಡಿ.
ಪ್ರಗ್ನೆನ್ಸಿ:
ನಿಮ್ಮ ಋತುಚಕ್ರ ಎಂದಿನಷ್ಟು ದಿವಸ ಕಳೆದು ವಾರವಾದರೂ ಆಗಿಲ್ಲವೆಂದರೆ ಅದಕ್ಕೆ ಕೆಲ ಕಾರಣಗಳಿರಬಹುದು. ಮೊದಲನೆಯದಾಗಿ ಪ್ರಗ್ನೆನ್ಸಿ (pregnancy’s)ಇರಬಹುದು.ಮನೆಯಲ್ಲೇ ಟೆಸ್ಟ್ ಮಾಡಿಕೊಳ್ಳಬಹುದು. ಹೀಗೆ ಚಕ್ರ ತಪ್ಪಿದ್ದಕ್ಕೆ ಅತಿಯಾದ ವ್ಯಾಯಾಮ ಅಥವಾ ಅತಿಯಾಗಿ ತೂಕ ಕಳೆದುಕೊಂಡಿರುವುದು ಕೂಡಾ ಕಾರಣವಿರಬಹುದು. ಅತಿಯಾಗಿ ವ್ಯಾಯಾಮ ಮಾಡುವುದರಿಂದ ಋತುಚಕ್ರ ನಿಯಂತ್ರಿಸುವ ಹಾರ್ಮೋನ್ ಮಟ್ಟದಲ್ಲಿ ಏರುಪೇರಾಗಬಹುದು.

ಅತಿಯಾದ ಡಯಟ್:
ಇತ್ತೀಚಿನ ಯುವತಿಯರು, ಡಯಟ್ (Diet)ಮೊರೆ ಹೋಗುವುದು ಹೆಚ್ಚಾಗುತ್ತದೆ. ಸರಿಯಾಗಿ ಊಟ ಇಲ್ಲದೆ ಉಪವಾಸ ಇರುವುದು ಡಯಟ್ ಅಲ್ಲ. ದೇಹದಲ್ಲಿನ ಬಹಳಷ್ಟು ಇರುವ ಕೊಬ್ಬನ್ನು ಕಳೆದುಕೊಂಡರೆ ಪೀರಿಯಡ್ಸ್ ಗೆ ಸಮಸ್ಯೆ ಆಗಬಹುದು.ಹಾರ್ಮೋನ್‌ಗಳ ಉತ್ಪಾದನೆಗೆ ದೇಹದಲ್ಲಿ ಸ್ವಲ್ಪ ಫ್ಯಾಟ್ ಇರುವುದು ಅತ್ಯಗತ್ಯ.
ಪಿಸಿಒಎಸ್
ದೇಹದಲ್ಲಿನ ಹಾರ್ಮೋನ್ ಏರುಪೇರಿನಿಂದ ಪೀರಿಯಡ್ಸ್ ಏರುಪೇರಾಗುತ್ತದೆ ಇದ್ದಕ್ಕೆ ಮುಖ್ಯ ಕಾರಣ(PCOS) ಪಿಸಿಒಎಸ್
(ಪಾಲಿಸಿಸ್ಟಿಕ್ ಓವರಿಯನ್ ಸಿಂಡ್ರೋಮ್) ಇದರಿಂದ ಮುಟ್ಟು ಮುಂದಕ್ಕೆ ಹೋಗುತ್ತದೆ. ಕೆಲವರಿಗೆ 2 ರಿಂದ 3ತಿಂಗಳ ಸಮಯ ತೆಗೆದುಕೊಳ್ಳುತ್ತದೆ. ಸೂಕ್ತ ವೈದ್ಯಕೀಯ ಪರೀಕ್ಷೆಯಿಂದ ಸಮಸ್ಯೆ ದೂರವಾಗಬಹುದು.

ಥೈರಾಯ್ಡ್:
ಪೀರಿಯಡ್ ಸಮಸ್ಯೆಗೆ ಹೈಪೋಥೈರಾಯಿಡ್ (Hypothyroid) ಕೂಡ ಕಾರಣವಾಗಬಹುದು. ಇದರಿಂದಲೂ ತುಂಬಾ ದಿನಗಳ ವರೆಗೆ ಪೀರಿಯಡ್ ಆಗದಿದ್ದರೆ, ಥೈರಾಯ್ಡ್ ಇದೆ ಎಂದು ಕೂಡ ಭಾವಿಸಬಹುದು. ಥೈರಾಯ್ಡ್ ಇದೆ ಎಂದು ತಿಳಿದುಕೊಳ್ಳಲು, ಕೆಲವೊಂದು ಕ್ರಮಗಳು ಇದ್ದು ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆ ಪಡೆದುಕೊಳ್ಳಿ.
ಈ ಮೇಲಿನ ಸಮಸ್ಯೆಗಳು ಕಾಡುತ್ತಿದರೆ ಕೂಡಲೇ ನಿಮ್ಮ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ಹೆಚ್ಚಿನ ಸುದ್ದಿಗಳಿಗಾಗಿ ಸೆಕ್ಯೂಲರ್ ಟಿವಿ ವೆಬ್ ಓದಿರಿ