ಕೊಲಂಬೋ: Manike Mage hithe: ಸಂಗೀತ ಎಂದರೇ ತಲೆದೂಗದವರು ಯಾರಿದ್ದಾರೆ? ಯೂಟ್ಯೂಬ್, ಇನ್ಸ್ಟಾಗ್ರಾಮ್ ,ವಾಟ್ಸಪ್ ಸ್ಟೇಟಸ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ ಹಾಡು “ಮನಿಕೆ ಮಾಗೆ ಹಿತೆ” ಎಂಬ ಹಾಡು.
ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರೂ ಈ ಹಾಡಿಗೆ ಫಿದಾ ಆಗಿದ್ದರು, ಮೊಬೈಲ್ ರಿಂಗ್ ಟೋನ್ನ ಲ್ಲಿಯೂ ಇದೇ ಹಾಡು.. ಅಂತರಾಷ್ಟ್ರೀಯ ಮನ್ನಣೆ ಪಡೆದಿದ್ದ “ಮನಿಕೆ ಮಾಗೆ ಹಿತೆ” ಹಾಡನ್ನು ಹಾಡಿರುವ ಗಾಯಕಿ ಯೋಹಾನಿ ಡಿ ಸಿಲ್ವಾ ಅವರನ್ನು ನ. 23ರಂದು ಸನ್ಮಾನಿಸಲು ಶ್ರೀಲಂಕಾ ಸಂಸತ್ತು ನಿರ್ಧರಿಸಿದೆ.
ಪ್ರಧಾನಿ ಮಹಿಂದಾ ರಾಜಪಕ್ಸೆ, ಸಂಸತ್ತಿನ ಸ್ಪೀಕರ್ ಮಹಿಂದ ಯಾಪಾ ಅಬೀವರ್ಧನ ಮತ್ತು ಇತರ ಹಲವಾರು ಸಂಸದರು ಈ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಚೀನಾ ಸೇರಿದಂತೆ ವಿಶ್ವದ ಎಲ್ಲಾ ಭಾಗಗಳಲ್ಲಿ ಮನಿಕೆ ಮಾಗೆ ಹಿತೆ ಇನ್ನು ಹಾಡುವು ಜನಪ್ರಿಯಗೊಂಡಿತ್ತು. ಅಲ್ಲದೆ ಹಲವಾರು ಭಾಷೆಗಳ ಗಾಯಕರು ಈ ಹಾಡನ್ನು ತಮ್ಮ ಭಾಷೆಗಳಿಗೆ ಅನುವಾದಿಸಿಕೊಂಡು ಹಾಡಿದ್ದರು.
ಅಲ್ಲದೆ ಯೋಹಾನಿ ಅವರಿಗೆ ಭಾರತದಲ್ಲಿ ಅಲ್ಲದೆ ಬಾಲಿವುಡ್ ಹಾಡುಗಳಿಗೆ ಹಿನ್ನೆಲೆಗಾಯಕಿಯಾಗಿ ಅವಕಾಶ ಪಡೆದುಕೊಂಡಿದ್ದಾರೆ.
ಈ ಹಾಡನ್ನು ಒಟ್ಟಾರೆ ಯೂಟ್ಯೂಬ್ ನಲ್ಲಿ 183 ಮಿಲಿಯನ್ ಬಾರಿ ವೀಕ್ಷಿಸಿದ್ದಾರೆ. ಇದು ಶ್ರೀಲಂಕಾ ಸ್ಥಳೀಯ ಸಂಗೀತ ಉದ್ಯಮಕ್ಕೆ ಉತ್ತೇಜನ ಎಂದು ನೀಡಲಾಗುತ್ತದೆ. ನೀವು ಒಮ್ಮೆ ಈ ಹಾಡನ್ನು ಕೇಳಿ ಆನಂದಿಸಿ..