ವಾಷಿಂಗ್ಟನ್ (ನ.21):Money: ಹಣ ಬಿಟ್ಟಿಯಾಗಿ ಸಿಕ್ಕರೆ ಬಿಡ್ತಾರಾ? ಹಣ ಅಂದ್ರೆ ಹೆಣ ಕೂಡ ಬಾಯಿಬಿಡುತ್ತೆ ಅಂತಾರೆ.. ರೋಡಿನಲ್ಲಿ ಟ್ರಕ್ ಒಂದರಿಂದ ಆಕಸ್ಮಿಕವಾಗಿ ರಸ್ತೆಗೆ ಚೆಲ್ಲಿದ ನೋಟುಗಳನ್ನು ಬಾಚಿಕೊಂಡ ಜನರಿಗೆ ಶಾಕ್ ಕಾದಿತ್ತು.
ಈ ರೀತಿಯ ಘಟನೆ ನಡೆದಿದ್ದು, ಯುನೈಟೆಡ್ ಸ್ಟೇಟ್ಸ್ ನ ದಕ್ಷಿಣ ಕ್ಯಾಲಿಫೋರ್ನಿಯಾದ ಹೆದ್ದಾರಿಯಲ್ಲಿ ಫೆಡರಲ್ ಡೆಪಾಸಿಟ್ ಇನ್ಶೂರೆನ್ಸ್ ಕಾರ್ಪ್ ಕಂಪನಿಗೆ ಹಣವನ್ನು ಟ್ರಕ್ ಮೂಲಕ ಸಾಗಿಸುತ್ತಿತ್ತು.
ಇನ್ನು ರಸ್ತೆಯಲ್ಲಿ ಓಡಾಡುವ ಜನರು, ಹಣವನ್ನು ನೋಡಿದ್ ತಕ್ಷಣ ನಿಲ್ಲುತ್ತಾರೆಯೇ? ಹಣ ನೋಡಿದ ಮೇಲೆ ಜನರು ತಕ್ಷಣ ಹಣವನ್ನು ಬಾಚಿಕೊಳ್ಳಲು ಮುಗಿಬಿದ್ದರು.
ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ಡೆಮಿ ಬ್ಯಾಗ್ಬಿ ಎಂಬ ಬಾಡಿ ಬಿಲ್ಡರ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡು “ನಾನು ನೋಡಿದ ಅತ್ಯಂತ ಹುಚ್ಚುತನದ ಸಂಗತಿಯಾಗಿದೆ”ಎಂದು ಬರೆದುಕೊಂಡಿದ್ದಾರೆ.
ಅಧಿಕಾರಿಗಳು ಜನರಿಗೆ ಹಣವನ್ನು ಹಿಂತಿರುಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಈ ಘಟನೆಯಲ್ಲಿ ಎಷ್ಟು ಹಣ ಕಳೆದು ಹೋಗಿದೆ ಎಂಬುದು ಅಧಿಕಾರಿಗಳಿಗೆ ಸ್ಪಷ್ಟತೆ ಇಲ್ಲ. ಅನೇಕ ಮಂದಿ ಸಾಕಷ್ಟು ಹಣ ಭಾಷೆ ಕೊಂಡಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಟ್ರಕ್ ಬಾಗಿಲು ಆಕಸ್ಮಿಕವಾಗಿ ತೆಗೆದುಕೊಂಡ ಪರಿಣಾಮ ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಣ ಬಾಚಿ ಕುಳಿತಿದ್ದಾಗಲೇ ಇಬ್ಬರನ್ನು ಬಂಧಿಸಲಾಗಿದ್ದು ಕ್ರಿಮಿನಲ್ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.