ಜಪಾನ್: Suicide Forest: (ನ.21): ಸುತ್ತ ಮುತ್ತಲೂ ಹಸಿರು ಕಾಡು, ಹಲವರಿಗೆ ಕಾಡೆಂದರೆ ಇಷ್ಟ, ಟ್ರಕ್ಕಿಂಗ್ ಹೋಗುವುದು, ಕಾಡಿನ ಬಗ್ಗೆ ಅಧ್ಯಯನ ಮಾಡುವರು ಇದ್ದಾರೆ.
ಮೋಜು ಮಸ್ತಿ ಮಾಡಲು ಕಾಡಿಗೆ ಹೋಗಿ ಬಾರದವರು ಇದ್ದಾರೆ, ಹಾಗಾದ್ರೆ ಕಾಡಿನಲ್ಲಿ ಏನಾದ್ರೂ ರಹಸ್ಯ ಇದಿಯಾ?
ಆ ತರಹದ ಕಾಡು, ನಿಜವಾಗಲೂ ಇದಿಯಾ ಎನ್ನುವ ಪ್ರಶ್ನೆಗೆ ಉತ್ತರ… ಹೌದು ಇದೆ.ಹಾಗಾದರೆ ಯಾವುದು ಆ ಕಾಡು?

ಜಪಾನ್ ನಲ್ಲಿರುವ ಟೋಕಿಯೋದಿಂದ ಎರಡು ಗಂಟೆಗಳ ಪ್ರಯಾಣ ಮಾಡಿದರೆ, ಭಯಾನಕ ಕಾಡು ಸಿಗುತ್ತದೆ. ಈ ಕಾಡಲ್ಲಿ ರಹಸ್ಯವೊಂದು ಅಡಗಿದೆ.ಅದುವೇ ಆಕಿಗಹರಾ ಕಾಡು.
ಆಕಿಗಹರಾ ಕಾಡಿಗೆ ಬರುವ ಅನೇಕ ಮಂದಿ ಇಲ್ಲಿ ಅಲೆದಾಡುತ್ತಾ ಪ್ರಾಣ ಕಳೆದುಕೊಂಡಿದ್ದಾರೆ. ಈ ಕಾಡನ್ನು ಸೂಸೈಡ್ ಫಾರೆಸ್ಟ್ ಎಂದು ಕರೆಯುತ್ತಾರೆ. ಇಲ್ಲಿಯವರೆಗೆ ಅನೇಕರು ಈ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಉದಾಹರಣೆಗಳು ಇದೆ.

ಇಲ್ಲಿದೆ ಅನೇಕ ಮೃತದೇಹಗಳು
ಕಾಡಿನೊಳಗೆ ಹೋದವರು ವಾಪಸ್ ಬರುವುದಿಲ್ಲ. ಹಾಗೂ ಹಲವಾರು ಆತ್ಮಹತ್ಯಾ ಘಟನೆಗಳು ಕೇಳಿದರೆ, ಕಾಡು ಹೆಸರಿರಲಿ, ಕಾಡಿಗೆ ಹೋಗೋದಕ್ಕೆ ಭಯ ಆಗುತ್ತದೆ.ಇಲ್ಲಿಯ ಜನರು ಆ ಸ್ಥಳವನ್ನು ಭಯಾನಕ ಎಂದು ಹೇಳಲು ಪ್ರಾರಂಭಿಸಿದ್ದಾರೆ.
ಕುಟುಂಬದವರು ಹಾಗೂ ಮಕ್ಕಳು ಮೋಜಿಗಾಗಿ ಈ ಕಾಡನ್ನು ಆಯ್ಕೆಮಾಡಿಕೊಂಡರೇ, ಖಂಡಿತವಾಗಿಯೂ ನಿಮ್ಮ ಕುಟುಂಬದವರ ಬಗ್ಗೆ ಯೋಚಿಸಬೇಕು. ಈ ಕಾಡಿನ ಒಳಗೆ ಪ್ರವೇಶಿಸುವ ಮೊದಲು ಪ್ರವೇಶದ್ವಾರದಲ್ಲಿ ಬೋರ್ಡ್ ಹಾಕಲಾಗಿದೆ. ನೀವು ಜೀವನವನ್ನು ನಿಮ್ಮ ಪೋಷಕರು ನೀಡಿದ ಅಮೂಲ್ಯ ಕೊಡುಗೆ ಎಂದು ಕಾಡಿಗೆ ಹೋಗುವ ಪ್ರವೇಶದ್ವಾರದಲ್ಲಿ ಬೋರ್ಡ್ ನೇತು ಹಾಕಲಾಗಿದೆ.

ಈ ಕಾಡಿನಲ್ಲಿ ಜ್ವಾಲಾಮುಖಿ ಲಾವಾ ಇರುವುದರಿಂದ ಇಲ್ಲಿ ಯಾವುದೇ ಮ್ಯಾಪ್ ಹಾಗೂ ಜಿಪಿಎಸ್ ಕಾರ್ಯನಿರ್ವಹಿಸುವುದಿಲ್ಲ. ಜಪಾನ ಟೋಕಿಯೋದಿಂದ 2ಗಂಟೆಗಳ ದೂರದಲ್ಲಿರುವ ಈ ಅರಣ್ಯವು 35 ಚದರ ಕಿಲೋಮೀಟರ್ ಗಳನ್ನು ಒಳಗೊಂಡಿದೆ. ಈ ಕಾಡಿಗೆ ಹೋದವರು ಮತ್ತೆ ಬರುತ್ತಾರೆ ಎಂಬ ಗ್ಯಾರಂಟಿ ಇಲ್ಲ.
ಕಾಡಿನಲ್ಲಿ ಅಲೆದಾಡುತ್ತಾ ಪ್ರಾಣ ಬಿಟ್ಟಿರುವ ಮೃತದೇಹಗಳು ಕೂಡ ಪತ್ತೆಯಾಗಿದೆ.
ಆದರೆ ಯಾವ ಕಾರಣಕ್ಕೆ ಸತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಮಾತ್ರ ಇಂದಿಗೂ ಸಿಕ್ಕಿಲ್ಲ.