ಬೆಂಗಳೂರು,ನ.19: ರಸ್ತೆಯಲ್ಲಿನ ಗುಂಡಿ ತಪ್ಪಿಸಲು ಹೋಗಿ ನಿಯಂತ್ರಣ ತಪ್ಪಿ ಬೈಕ್ ಬಿದ್ದು ಹಿಂಬದಿ ಕುಳಿತಿದ್ದ ಬಾಲಕನ ಮೇಲೆ ಹಿಂದಿನಿಂದ ಬಂದ ಟ್ರ್ಯಾಕ್ಟರ್ ಹರಿದು ಸ್ಥಳದಲ್ಲಿಯೇ ಮೃತಪಟ್ಟರೆ ಸವಾರ ಗಾಯಗೊಂಡಿರುವ ದಾರುಣ ಘಟನೆ ನೆಲಮಂಗಲದ ರೇಣುಕಾ ನಗರದ ಬಳಿ ನಡೆದಿದೆ.
ಮೃತಪಟ್ಟ ಬಾಲಕನನ್ನು ಇಸ್ಲಾಂಪುರದ ಮೊಹ್ಮದ್ ಹ್ಯಾರಿಸ್(15)ಎಂದು ಗುರುತಿಸಲಾಗಿದೆ.
ದ್ವಿಚಕ್ರವಾಹನ ಚಾಲನೆ ಮಾಡುತ್ತಿದ್ದ ಮೊಹ್ಮದ್ ಅಲ್ತಾಫ್ ಎಂಬಾತ ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಇದನ್ನೂ ಓದಿ: Reduce Belly Fat: ಈ ರೀತಿ ಮಾಡಿದರೇ ನಿಮ್ಮ ಬೆಲ್ಲಿ ಫ್ಯಾಟ್ ಕರಗೋದು ಗ್ಯಾರೆಂಟಿ!
ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಸ್ತೆಯಲ್ಲಿನ ಗುಂಡಿಗಳು ವಾಹನ ಸವಾರರ ಜೀವವನ್ನು ಬಲಿ ಪಡೆಯುತ್ತಿವೆ.
ಮಳೆಯಿಂದಾಗಿ ರಸ್ತೆಯಲ್ಲಿನ ಗುಂಡಿಗಳು ಯಾವುದು?, ರಸ್ತೆ ಯಾವುದೆಂದು ತಿಳಿಯದೆ ಅಪಘಾತಗಳು ನಡೆಯುತ್ತಿವೆ.
ನೆಲಮಂಗಲ ಸಂಚಾರ ಪೊಲೀಸರು ಪ್ರಕರಣ ದಾಖಲಿಸಿ ಟ್ರ್ಯಾಕ್ಟರ್ ಅನ್ನು ಪೊಲೀಸರು ವಶಪಡಿಸಿಕೊಂಡು ಪರಾರಿಯಾಗಿರುವ ಚಾಲಕನಿಗಾಗಿ ತೀವ್ರ ಶೋಧ ನಡೆಸಿದ್ದಾರೆ.