ದೆಹಲಿ :(ನ.19): Famers Law: ದೇಶಾದ್ಯಂತ ನಡೆದ ಚಾರಿತ್ರಿಕ ರೈತ ಹೋರಾಟಕ್ಕೆ ಜಯ ಲಭಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಹೇಳಿದರು.
ಕೇಂದ್ರ ಸರ್ಕಾರ ಇಂದು ಕೃಷಿಕಾಯ್ದೆಗಳನ್ನು ವಾಪಸ್ ತೆಗೆದುಕೊಂಡಿರುವ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿಕ್ರಿಯಿಸಿ, ಕಳೆದ ಒಂದು ವರ್ಷದಿಂದ ಕೃಷಿ ಕಾಯ್ದೆಗಳು ರದ್ದಾಗಬೇಕೆಂದು ಹಾಗೂ ಎಂಎಸ್‌ಪಿ ಖಾತ್ರಿಗಾಗಿ ಹೊಸ ಕಾನೂನು ಬರಬೇಕೆಂದು ದೆಹಲಿ ಗಡಿಗಳಲ್ಲಿ ಹಾಗೂ ದೇಶಾದ್ಯಂತ ಹೋರಾಡಿದ ರೈತ ಹೋರಾಟಕ್ಕೆ ಇಂದು ಜಯ ಸಿಕ್ಕದೆ.
ರೈತರ ಹೋರಾಟಕ್ಕೆ ಮಂಡಿಯೂರಿರುವ ನರೇಂದ್ರ ಮೋದಿ ಸರ್ಕಾರ ಇಂದು ಕೊನೆಗೂ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿದೆ.
Mark my words, the Govt will have to take back the anti-farm laws. pic.twitter.com/zLVUijF8xN
— Rahul Gandhi (@RahulGandhi) January 14, 2021
ದಿಟ್ಟ ರೈತ ಹೋರಾಟ ಎದುರು ಮಂಡಿಯೂರಿರುವ ನರೇಂದ್ರ ಮೋದಿ ಸರ್ಕಾರ ಕೊನೆಗೂ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಈ ದೇಶದ ಅನ್ನದಾತರು ತಮ್ಮ ಸತ್ಯಾಗ್ರಹದಿಂದ ಅಹಂಕಾರದ ತಲೆ ತಗ್ಗಿಸುವಂತೆ ಮಾಡಿದ್ದಾರೆ. ಅನ್ಯಾಯದ ವಿರುದ್ಧದ ಈ ವಿಜಯಕ್ಕೆ ಅಭಿನಂದನೆಗಳು! ಜೈ ಹಿಂದ್, ಜೈ ಹಿಂದ್ ರೈತ!” ಎಂದು ಹಿಂದಿಯಲ್ಲಿ ಅವರು ಟ್ವೀಟ್ ಮಾಡಿದ್ದಾರೆ.
ಈ ಹಿಂದೆ, ರೈತರ ಹೋರಾಟ ಬೆಂಬಲಿಸಿ ಮಾತನಾಡಿದ್ದ ಅವರು, ಬರೆದಿಟ್ಟುಕೊಳ್ಳಿ, ಒತ್ತಾಯದಿಂದ ಈ ಕಾಯ್ದೆಗಳನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯುತ್ತದೆ” ಎಂದು ಆತ್ಮವಿಶ್ವಾಸದಿಂದ ಎಂದು ಅವರು ಮಾತನಾಡಿದ್ದರು.ಅಂದು ರಾಹುಲ್ ಗಾಂಧಿ ಅವರ ಆತ್ಮವಿಶ್ವಾಸದ ನುಡಿಗಳು, ಇಂದು ಜೇವಂತವಾಗಿದೆ. ಕೇಂದ್ರ ಸರ್ಕಾರ ವಾಪಸ್ ಪಡೆಯುತ್ತದೆ. ನಾನು ಹೇಳಿದ್ದನ್ನು ನೆನಪಿಟ್ಟುಕೊಳ್ಳಿ, ಧನ್ಯವಾದಗಳು” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಜನವರಿ 14 ರಂದು ಮಾಧ್ಯಮಗಳೆದುರು ರೈತ ಹೋರಾಟ ಬೆಂಬಲಿಸಿ ಮಾತನಾಡಿದ್ದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸದ್ಯ ವಿಡೀಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.