ಆಂಧ್ರಪ್ರದೇಶ: (ನ.19): Flood in Andrapradesh: ಆಂಧ್ರಪ್ರದೇಶದ ಕಡಪಾ ಜಿಲ್ಲೆಯಲ್ಲಿ ಏಕಾಏಕಿ ಪ್ರವಾಹ ಎದುರಾಗಿದೆ. ಪ್ರವಾಹದಲ್ಲಿ 30 ಜನರು ನಾಪತ್ತೆಯಾಗಿದ್ದರೆ ಮೂರು ಮಂದಿ ಮೃತಪಟ್ಟಿದ್ದು, ಮೃತದೇಹಗಳು ಪತ್ತೆಯಾಗಿದೆ.
ಧಾರಾಕಾರ ಮಳೆಯಿಂದ 30 ಜನರು ಕೊಚ್ಚಿಹೋಗರುವ ಶಂಕೆ ವ್ಯಕ್ತವಾಗಿದೆ.ಅಣೆಕಟ್ಟು ಹೊಡೆದು ಚೈಯೆರು ನದಿ ಉಕ್ಕಿ ಹರಿದ ಪರಿಣಾಮ ಕಡಪ ಜಿಲ್ಲೆಯ ಹಲವಾರು ಗ್ರಾಮಗಳಿಗೆ ನೀರು ನುಗ್ಗಿದೆ.
ಕಡಪ ಜಿಲ್ಲೆಯ ಚೆಯ್ಯುರು ನದಿಯ ಅನ್ನಮಯ್ಯ ಡ್ಯಾಮ್ ನಲ್ಲಿ ಒಳಹರಿವು ಹೆಚ್ಚಾಗಿ ಗ್ರಾಮಗಳು ಜಲಾವೃತಗೊಂಡಿದ್ದು, ನಂದ ಆಲೂರಿನ ಸ್ವಾಮಿ ಆನಂದ ದೇವಸ್ಥಾನವು ಮುಳುಗಡೆಯಾಗಿದೆ.

5 ಕ್ರೆಸ್ಟ್ ಗೇಟುಗಳನ್ನು ತೆರೆದು ಹೆಚ್ಚುವರಿ ನೀರು ಹೊರಬಿಡಲಾಗಿದೆ. ಪ್ರವಾಹದಿಂದ ಗುಂಡ್ಲೂರು, ಷೇಶಮಾಂಬಪೂರ, ಮಂದ ಪಲ್ಲಿ, ನಂದನೂರು ಸೇರಿದಂತೆ ಹಲವು ಗ್ರಾಮಗಳು ಮುಳುಗಡೆಯಾಗಿದೆ.
ಆಂಧ್ರಪ್ರದೇಶದ ತಿರುಪತಿಯಲ್ಲಿ ಭಾರಿ ಪ್ರವಾಹ ಉಂಟಾಗಿರುವ ಕಾರಣ, ಕ್ಷೇತ್ರಕ್ಕೆ ಆಗಮಿಸಿದ ಯಾತ್ರೆಗಳು ಪ್ರವಾಹದಲ್ಲಿ ಸಿಲುಕಿದ್ದಾರೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದ ಇಂದು ಮುಂಜಾನೆಯಿಂದ ಆಂಧ್ರ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ.
ಎನ್ ಡಿ ಆರ್ ಎಫ್ ಮತ್ತುಎಸ್ ಡಿಜಿ ಆರ್ ಎಫ್ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಕ್ರಮ ಕೈಗೊಂಡಿವೆ. ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರು ಮಳೆಯಿಂದ ಹಾನಿಗೊಳಗಾದ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದರು. ರಕ್ಷಣಾ ಮತ್ತು ಪರಿಹಾರ ಕ್ರಮಗಳನ್ನು ಹೆಚ್ಚಿಸುವಂತೆ ಅವರಿಗೆ ನಿರ್ದೇಶನ ನೀಡಿದರು.