ದಕ್ಷಿಣ ಕನ್ನಡ: (ನ.19): Lakshadeepothsava:ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಸ್ಥಳವಾದ ಶ್ರೀ ಕ್ಷೇತ್ರ ಧರ್ಮಸ್ಥಳ ದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಕೆಲವೇ ದಿನಗಳಲ್ಲಿ ಆರಂಭವಾಗಲಿದೆ.
ನವೆಂಬರ್ 29 ರಿಂದ ಡಿಸೆಂಬರ್ ನಾಲ್ಕರ ವರೆಗೆ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರ ಸನ್ನಿಧಿಯಲ್ಲಿ ಲಕ್ಷದೀಪೋತ್ಸವ ಸಂಭ್ರಮ ನಡೆಯಲಿದೆ. ಆರು ದಿನಗಳ ಕಾಲ ನಡೆಯುವ ಲಕ್ಷದೀಪೋತ್ಸವಕ್ಕೆ ಧರ್ಮಸ್ಥಳ ಸಜ್ಜಾಗುತ್ತಿದೆ.
ವಿವಿಧ ಕಾರ್ಯಕ್ರಮಗಳು:
ಆರು ದಿನಗಳಲ್ಲಿ ಅನ್ನದಾನ, ಸಾಹಿತ್ಯ, ಸರ್ವಧರ್ಮ ಸಮ್ಮೇಳನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
- ನವಂಬರ್ 29ರ ಸೋಮವಾರ: ಹೊಸಕಟ್ಟೆ ಉತ್ಸವ
- ನವೆಂಬರ್ 30ರ ಮಂಗಳವಾರ: ಕೆರೆಕಟ್ಟೆ ಉತ್ಸವ
- ಡಿಸೆಂಬರ್ 1ರ ಬುಧವಾರ: ಲಲಿತೊದ್ಯಾನ ಉತ್ಸವ
- ಡಿಸೆಂಬರ್ 2ರ ಗುರುವಾರ : ಕಂಚಿ ಮಾರುಕಟ್ಟೆ ಉತ್ಸವ
- ಡಿಸೆಂಬರ್ 3ರ ಶುಕ್ರವಾರ : ಗೌರಿ ಮಾರುಕಟ್ಟೆ ಉತ್ಸವ
- ಡಿಸೆಂಬರ್ 4ರ ಶನಿವಾರ: ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಲಿದೆ.

ರಾಜ್ಯಪಾಲರಿಂದ ಉದ್ಘಾಟನೆ:
ಈ ಬಾರಿಯ ಲಕ್ಷದೀಪೋತ್ಸವದಲ್ಲಿ ಡಿಸೆಂಬರ್ 2ರಂದು ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯುವ 89ನೇ ವರ್ಷದ ಸರ್ವಧರ್ಮ ಸಮ್ಮೇಳನದ ಉದ್ಘಾಟನೆ ರಾಜ್ಯಪಾಲ ತವರ್ ಚಂದ್ ಗೆಹ್ಲೊಟ್ ಮಾಡಲಿದ್ದಾರೆ.
ಅಧ್ಯಕ್ಷತೆಯನ್ನು ಬೆಂಗಳೂರು ಎಸ್ ವ್ಯಾಸ ಯೋಗ ವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ರಾಮಚಂದ್ರ ಜಿ ಭಟ್ ವಹಿಸಲಿದ್ದಾರೆ.
ಸಾಹಿತ್ಯ ಸಮ್ಮೇಳನದ ಉದ್ಘಾಟನೆಯನ್ನು, ವೈದ್ಯಕೀಯ ಶಿಕ್ಷಣ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಅವರು ಉದ್ಘಾಟನೆ ಮಾಡಲಿದ್ದಾರೆ ಹಾಗೂ ಸಮ್ಮೇಳನದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿಗಳಾದ ಡಾ. ಮಲ್ಲೇಪುರಂ ಜಿ ವೆಂಕಟೇಶ್ ಅವರು ವಹಿಸಲಿದ್ದಾರೆ.
ಹೆಚ್ಚುವರಿ ಬಸ್ ವ್ಯವಸ್ಥೆ:
ವಿವಿಧ ಕಾರ್ಯಕ್ರಮಗಳಿಂದ ಲಕ್ಷದೀಪೋತ್ಸವ ನಡೆಯಲಿದೆ. ವಸ್ತು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ನಾನಾ ರಾಜ್ಯಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸುವ ಭಕ್ತರಿಗೆ ಹೆಚ್ಚುವರಿ ಬಸ್ ಗಳ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ.
ಪಾದಯಾತ್ರೆ ಮಾಡಿ ಬರುವ ಭಕ್ತಾದಿಗಳಿಗೆ ಕ್ಷೇತ್ರದಲ್ಲಿ ವಿಶೇಷ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಹಾಗೂ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಮಾಡಿ, ಕಸ ಎಸೆಯಬೇಡಿ, ಪ್ಲಾಟ ರಸ್ತೆಗಳಲ್ಲಿ ಪಾದಯಾತ್ರೆ ಮಾಡುವ ಸ್ಥಳಗಳಲ್ಲಿ ಮಲಗಬೇಡಿ ಎಂದು ಶ್ರೀಕ್ಷೇತ್ರದ ಆಡಳಿತ ಮಂಡಳಿ ಭಕ್ತರಲ್ಲಿ ಮನವಿ ಮಾಡಿಕೊಂಡಿದೆ.
ಈ ಬಾರಿಯೂ ಲಕ್ಷದೀಪೋತ್ಸವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷಾಂತರ ದೀಪಗಳಿಂದ ಕಂಗೊಳಿಸಲಿದೆ.