ನವದೆಹಲಿ:Farmers Law: (ನ.19): ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ಕೇಂದ್ರ ನಿರ್ಧರಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕೃಷಿ ಕಾನೂನುಗಳಿಂದ ರೈತರಿಗೆ ತೊಂದರೆಯಾಗುತ್ತಿರುವ ಸಂದರ್ಭದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಮೂರು ವಿರೋಧಾತ್ಮಕ ಕಾನೂನುಗಳನ್ನು ಹಿಂಪಡೆಯಲಾಗುವುದು ಎಂದು ಮೋದಿ ಪೋಷಿಸಿದ್ದಾರೆ. ಗುರುನಾನಕ್ ದಿನದಂದೇ ಈ ಘೋಷಣೆ ಮಾಡಿದ್ದು ರೈತಾಪಿ ವರ್ಗ ಮೋದಿ ನಿರ್ಧಾರವನ್ನು ಸ್ವೀಕರಿಸಿದೆ.

ನಮ್ಮ ನಿರ್ಣಯದಲ್ಲಿಯೇ ಎಲ್ಲೋ ತಪ್ಪು ಆಗಿರಬಹುದು. ಹಾಗಾಗಿ ನಾನು ದೇಶವಾಸಿಗಳಲ್ಲಿ ಕ್ಷಮೆ ಕೋರುವೆ. ತನ್ಮೂಲಕ ಮೂರೂ ಕೃಷಿ ಮಸೂದೆಗಳನ್ನು ಇದೇ ತಿಂಗಳು ಸಂಸತ್ತಿನಲ್ಲಿ ವಾಪಸ್ ತೆಗೆದುಕೊಳ್ಳುವೆ. ರೈತ ಬಂಧುಗಳು ತಮ್ಮ ತಮ್ಮ ಹೊಲ, ತೋಟಗಳಿಗೆ ವಾಪಸ್ ಹೋಗಿ, ಕೃಷಿಯಲ್ಲಿ ತೊಡಗಿರಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಈ ಕಾಯ್ದೆಗಳನ್ನು ರೈತರ ಹಿತದೃಷ್ಟಿಯಿಂದ ಜಾರಿಗೆ ತಂದಿದ್ದೇವು. ಅದರಲ್ಲೂ ಸಣ್ಣ ರೈತರ ಅಭಿವೃದ್ಧಿಗಾಗಿ ಕಾನೂನುಗಳನ್ನು ರೂಪಿಸಲಾಗಿತ್ತು. ಕಾನೂನುಗಳ ಅರಿವು ಮೂಡಿಸಲು ಸರ್ಕಾರ ಪ್ರಯತ್ನಿಸಿತ್ತು. ಆದರೂ ಕೆಲ ರೈತರು ಇದನ್ನು ವಿರೋಧ ವ್ಯಕ್ತಪಡಿಸಿದ್ದು ವಿಷಾದನೀಯ ಎಂದು ಮೋದಿ ಹೇಳಿದ್ದಾರೆ.
ಇನ್ನು ಇದು ರೈತರ ಗೆಲುವು ಎಂದು ಅಖಿಲ ಭಾರತ ಕಿಸಾನ್ ಸಭಾ ಪ್ರತಿಕ್ರಿಯಿಸಿದ್ದು, ನಿಯಮಗಳಷ್ಟೇ ಅಲ್ಲ ರೈತರ ಬಗೆಗಿನ ನೀತಿಯೂ ಬದಲಾಗಬೇಕು. ಸಮಸ್ಯೆಗಳಿಗೆ ಸಂಪೂರ್ಣ ಪರಿಹಾರದ ಅಗತ್ಯವಿದೆ. ಮುಷ್ಕರವನ್ನು ಬದಲಾಯಿಸಲು ಮಾತುಕತೆ ನಡೆಸುವುದಾಗಿ ಕಿಸಾನ್ ಸಭಾ ಹೇಳಿದೆ.