ಭೇಟಿ: Musical Video: (ನ.19): ನಾಯಿ ಮನುಷ್ಯನಿಗೆ ಹತ್ತಿರವಾದ ಪ್ರಾಣಿ. ನಾಯಿಗಳಿಗೆ ಸ್ವಲ್ಪ ಊಟ ಹಾಕಿದರು ಬಾಲ ಅಲ್ಲಾಡಿಸಿಕೊಂಡು ಮನುಷ್ಯನ ಹಿಂದೆ ಹೋಗುತ್ತದೆ.
ಮನುಷ್ಯರಿಗೂ ಪ್ರಾಣಿಗಳಲ್ಲಿ ಅತ್ಯಂತ ಪ್ರಿಯವಾದ ಪ್ರಾಣಿಯೆಂದರೆ(Dog) ಶ್ವಾನ. ಇದೆಲ್ಲ ನಿಮ್ಗೆಲ್ಲಾ ಗೊತ್ತಿರುವ ವಿಷಯ.. ಆದರೆ ವಿಷಯ ಬೇರೇನೇ ಇದೆ!
ನಾಯಿಯನ್ನೇ ಮುಖ್ಯ ಪಾತ್ರಧಾರಿ ಯಾಗಿದ್ದು ಕೊಂಡು ಇನ್ನೊಂದು ಮ್ಯೂಸಿಕಲ್ ವಿಡಿಯೋ ಎಂಟ್ರಿ ಕೊಡಲಿದೆ. ನಾಯಿಮರಿ ಇಂದ ಕೂಡಲೇ ರಕ್ಷಿತ್ ಶೆಟ್ಟಿ ಅವರ(Charli 777) ಚಾರ್ಲಿ 777 ಎಂಬ ಸಿನಿಮಾ ನೆನಪಾಗಬಹುದು. ಇದೀಗ ಪ್ರೀತಿಯ ಕಥೆ ಹೇಳುವ ಮ್ಯೂಸಿಕ್ ವಿಡಿಯೋ ‘ಭೇಟಿ’ ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಂದು ಬಿಡುಗಡೆಗೊಂಡ ಗರುಡ ಗಮನ ಋಷಭ ವಾಹನ ಸಿನಿಮಾ ನಿರ್ದೇಶಕ ನಟ ರಾಜ್ ಬಿ ಶೆಟ್ಟಿ ಈ ಮ್ಯೂಸಿಕ್ ವಿಡಿಯೋವನ್ನು ಬಿಡುಗಡೆಗೊಳಿಸಿದ್ದಾರೆ.

ಮಂಗಳೂರಿನಲ್ಲಿ(Blinks Films) ಬ್ಲಿಂಕ್ ಫಿಲಂಸ್ ಎನ್ನುವ ಸ್ವಂತ ಪ್ರೊಡಕ್ಷನ್ ಸಂಸ್ಥೆ ನಡೆಸುತ್ತಿರುವ ವಿವೇಕ್ ಎನ್ನುವವರು ಮ್ಯೂಸಿಕಲ್ ವಿಡಿಯೋಗೆ (Musical Video)ನಿರ್ದೇಶನ ಸಿನಿಮಾಟೋಗ್ರಾಫಿ ಎಡಿಟಿಂಗ್ ಮಾಡಿದ್ದಾರೆ.
ಮ್ಯೂಸಿಕಲ್ ವಿಡಿಯೋದ ಹೆಸರೇ “ಭೇಟಿ” ಇದರ (tagline)ಅಡಿಬರಹವಾಗಿ ಪ್ರೀತಿ ಮತ್ತು ಬದುಕಿನ ಸಮ್ಮಿಲನ ಎಂದು ಹೇಳಿದ್ದಾರೆ. ನಾಯಕನಿಗೆ ರಸ್ತೆ ಬದಿಯಲ್ಲಿ ಸಿಗುವ ಅನಾಥ ನಾಯಿಮರಿಯನ್ನು ಮನೆಗೆ ತಂದು ಸಾಕುತ್ತಾನೆ. ನಾಯಿ ಅವನ ಜೀವನದ ಅವಿಭಾಜ್ಯ ಅಂಗವಾಗಿ ಅವನ ನಗು-ಅಳುವೇ ಅದರ ಜಗತ್ತಾಗಿರುತ್ತದೆ. ನಾಯಕನಿಗೆ ಹುಡುಗಿ ಭೇಟಿಯಲ್ಲಿ(dog) ನಾಯಿ ಪರೋಕ್ಷವಾಗಿ ಕಾರಣವಾಗುತ್ತದೆ. ಈ ಭೇಟಿಗೆ ಸ್ನೇಹಕ್ಕೆ ತಿರುಗಿ (love)ಪ್ರೀತಿಯಾಗಿ ಬದಲಾಗುತ್ತದೆ. ಇವರಿಬ್ಬರ ಪ್ರೀತಿಗೆ ಸೇತುವೆಯಾಗಿದ್ದು ನಾಯಿ.
ಸಂಭಾಷಣೆಯಿಲ್ಲದೇ ಕೇವಲ ದೃಶ್ಯದಿಂದಲೇ ಕಥೆಯನ್ನು ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನ ಮಾಡಿದ್ದಾರೆ. ಒಂದು ತರಹ ಮೂಕಿ ಚಿತ್ರ ಎಂದೇ ಹೇಳಬಹುದು.
ಮ್ಯೂಸಿಕಲ್ ವಿಡಿಯೋದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ನಾಯಿಯ ಹೆಸರೇನು ಗೊತ್ತಾ?sasha)( ಸಾಶಾ ಎಂದು ಮುದ್ದಿನ ನಾಯಿಯ ಹೆಸರಾಗಿದೆ.
ರಕ್ಷಿತ್ ಶೆಟ್ಟಿ ಹಾಗೂ ಒಂದು ಮೊಟ್ಟೆಯ ಕಥೆ ಸಿನೆಮಾದ ರಾಜ್ ಬಿ ಶೆಟ್ಟಿ ಅವರು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವುದರ (share)ಮೂಲಕ ವಿವೇಕ್ ಗೌಡ ಅವರನ್ನು ಪ್ರೋತ್ಸಾಹಿಸಿದ್ದಾರೆ.
ಮ್ಯೂಸಿಕ್ ವಿಡಿಯೋ ಮಾಡಿ, ವಿಡಿಯೋಗೆ ಸಿಕ್ಕಿರುವ ಪ್ರತಿಕ್ರಿಯೆಯಿಂದ ಮುಂದೊಂದು ದಿನ ಸಿನಿಮಾ ಮಾಡಲು ವಿಶ್ವಾಸ ಹೊಂದಿದೆ ಎಂದು ವಿಶ್ವಾಸ್ ಹಾಗೂ ಅವರ ತಂಡ ಸಂತಸದಿಂದ ತಿಳಿಸಿದ್ದಾರೆ.
ನೀವೂ ಶ್ವಾನ ಪ್ರಿಯರಾಗಿದ್ದರೇ.. ವಿಡಿಯೋ ಒಮ್ಮೆ ನೋಡಿ ಬನ್ನಿ….