ದಕ್ಷಿಣ ಆಫ್ರಿಕಾ: (ನ.19) : ABD Resign: 360 ಡಿಗ್ರಿ ಎಂದೆ ಖ್ಯಾತಿ ಪಡೆದಿದ್ದ ಎಬಿ ಡಿವಿಲಿಯರ್ಸ್ ತಮ್ಮ ವೃತ್ತಿಗೆ ರಾಜೀನಾಮೆ ಘೋಷಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಪರವಾಗಿ ಅನೇಕ ವರ್ಷಗಳಿಂದ ಎಬಿ ಡಿವಿಲಿಯರ್ಸ್ ಆಡುತ್ತಿದ್ದ ಇವರು. ಇನ್ನುಮುಂದೆ ಯಾವುದೇ ಮಾದರಿಯ ಕ್ರಿಕೆಟ್ನಲ್ಲಿ ಆಡುವುದಿಲ್ಲ ಎಂದು ಹೇಳಿದ್ದಾರೆ.
360 ಡಿಗ್ರಿ ಎಂದೆ ಖ್ಯಾತಿ ಪಡೆದಿದ್ದ ಎಬಿ ಡಿವಿಲಿಯರ್ಸ್ ಅವರು ಕ್ರಿಕೆಟ್ ನಿಂದ ನಿವೃತ್ತಿ ಪಡೆದು, ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಐಪಿಎಲ್ ಸೀಸನ್ 14ರಲ್ಲಿ ಆರ್‌ಸಿಬಿ ಪರ ಆಟವಾಡಿದ್ದ ಎಬಿಡಿ ಫೈನಲ್ ಪ್ರವೇಶಿಸಿದೆ ಸೋಲಿನೊಂದಿಗೆ ಸಂಧಾನ ಮಾಡುವುದರ ಜೊತೆ, ಬಹುಕಾಲ ಕಪ್ಪು ಗೆಲ್ಲುವ ಕನಸು ಕನಸಾಗಿಯೇ ಉಳಿಯಿತು.
ಈ ಬಗ್ಗೆ ಆರ್‌ಸಿಬಿ ಅಭಿಮಾನಿಗಳ ಬಳಿ ಕ್ಷಮೆಯಾಚಿಸಿದ್ದರು ಆರ್ಸಿಬಿ ತಂಡವು ಅತ್ಯುತ್ತಮ ಅಭಿಮಾನಿ ಬಳಗವನ್ನು ಹೊಂದಿದೆ. ನಾವು ನಿರಾಸೆ ಮಾಡಿದೆವು ಈ ಸಲವೂ ನಾವು ಕಪ್ಪು ಗೆಲ್ಲಲು ಸಾಧ್ಯವಾಗಲಿಲ್ಲ. ಆರ್‌ಸಿಬಿ ಫ್ಯಾನ್ಸ್ ನಮ್ಮನ್ನು ಕ್ಷಮಿಸಬೇಕು ಎಂದು ಕೇಳಿಕೊಂಡಿದ್ದರು.
ಈ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದರೂ ಇತರೆ ದೇಶೀಯ ಟೂರ್ನಮೆಂಟ್ ಗಳಲ್ಲಿ ಆಟವಾಡುತ್ತಿದ್ದರು. ಇದರಲ್ಲಿ ಪ್ರಮುಖವಾಗಿ ಇಂಡಿಯನ್ ಪ್ರೀಮಿಯರ್ ಲೀಗ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ಯಾನ್ಸಿ ಪರವಾಗಿ ಅನೇಕ ವರ್ಷಗಳಿಂದ ಆಡುತ್ತಿದ್ದರು.
ಎಡಿಬಿ ಅವರು ತಮ್ಮ ರಾಜೀನಾಮೆ ಕುರಿತು “ಇದು ನಂಬಲಾಗದ ಪ್ರಯಾಣವಾಗಿದೆ, ಆದರೆ ನಾನು ಎಲ್ಲಾ ಕ್ರಿಕೆಟ್ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದೇನೆ ನನ್ನ ಹಿರಿಯ ಸಹೋದರನೊಂದಿಗೆ ಆನಂದ ಉತ್ಸಾಹದಿಂದ ಆಟವನ್ನು ಆಡಿದ್ದೇನೆ. 37ನೇ ವಯಸ್ಸಿನಲ್ಲಿ ಈ ಜ್ವಾಲೆಯು ಇನ್ನು ಮುಂದೆ ಪ್ರಕಾಶಮಾನವಾಗಿ ಉರಿಯುವುದಿಲ್ಲ ಎಂದು ಭಾವುಕರಾಗಿ ಟ್ವೀಟ್ ಮಾಡಿದ್ದಾರೆ.
It has been an incredible journey, but I have decided to retire from all cricket.
— AB de Villiers (@ABdeVilliers17) November 19, 2021
Ever since the back yard matches with my older brothers, I have played the game with pure enjoyment and unbridled enthusiasm. Now, at the age of 37, that flame no longer burns so brightly. pic.twitter.com/W1Z41wFeli
ಕ್ರಿಕೆಟ್ ನನ್ನ ಮೇಲೆ ಅಸಾಧಾರಣ ಪ್ರೀತಿ ತೋರಿದೆ. ಟೈಟಾನ್ ಅಥವಾ ಪ್ರೋಟೀಸ್ ಅಥವಾ ಆರ್‌ಸಿಬಿ ಪ್ರಪಂಚದ ಅತ್ಯಂತ ಹಾಡುತಿರಲಿ ಆಟವು ನನಗೆ ಒನ್ ಸಲದ ಅನುಭವಗಳನ್ನು ಮತ್ತು ಅವಕಾಶಗಳನ್ನು ನೀಡಿದೆ. ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ ಪ್ರತಿ ತರಬೇತುದಾರ, ಪ್ರತಿಯೊಬ್ಬ ಫಿಸಿಯೋ ಮತ್ತು ಪ್ರತಿಯೊಬ್ಬ ಸಿಬ್ಬಂದಿ ಸದಸ್ಯರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ.
ನಾನು ದಕ್ಷಿಣ ಆಫ್ರಿಕಾದಲ್ಲಿ, ಭಾರತದಲ್ಲಿ, ನಾನು ಎಲ್ಲೇ ಆಡಿದರೂ ನನಗೆ ದೊರೆತ ಬೆಂಬಲದಿಂದ ನಾನು ವಿನಮ್ರನಾಗಿದ್ದೇನೆ ಎಂದು” ಎಂದು ಬರೆದುಕೊಂಡಿರುವ ಎಬಿ ಡಿವಿಲಿಯರ್ಸ್ ಹಿಂದಿ ಭಾಷೆಯಲ್ಲೂ ಧನ್ಯವಾದ ಎಂದು ಬರೆದಿದ್ದಾರೆ.
ಈವರೆಗೆ 114 ಟೆಸ್ಟ್, 228 ಏಕದಿನ ಮತ್ತು 78 ಟಿ-20 ಪಂದ್ಯಗಳನ್ನಾಡಿದ್ದಾರೆ. ಸುಮಾರು 17 ವರ್ಷಗಳ ಕಾಲ ವೃತ್ತಿ ಬದುಕನ್ನು ಕ್ರಿಕೆಟ್ ಮೈದಾನದಲ್ಲಿ ಕಳೆದಿರುವ ಸ್ಫೋಟಕ ಬ್ಯಾಟ್ಸ್ ಮನ್ ಆಗಿದ್ದರು ಡಿವಿಲಿಯರ್ಸ್, ಐಪಿಎಲ್ನಲ್ಲಿ ಇವರು 184 ಪಂದ್ಯಗಳನ್ನು ಆಡಿದ್ದು 5162 ರನ್ ಬಾರಿಸಿದ್ದಾರೆ. ಒಟ್ಟು ಮೂರು ಶತಕ ಮತ್ತು 40 ಅರ್ಧಶತಕ ಕೂಡ ಸಿಡಿಸಿದ್ದಾರೆ. 251 ಸಿಕ್ಸರ್, 413 ಬೌಂಡರಿ ಬಾರಿಸುವುದರ ಮೂಲಕ ಕ್ರಿಕೆಟ್ ಜೀವನದಲ್ಲಿ ಸಾಧನೆ ಮಾಡಿದ್ದಾರೆ.
ಎಬಿಡಿ ಅವರು ಬೇರೆಯ ದೇಶದವರಾಗಿದೂ, ಆರ್ಸಿಬಿ ತಂಡಕ್ಕೆ ಎಬಿಡಿ ನೀಡಿದ ಕೊಡುಗೆ ಅಪಾರವೆಂದರೆ ತಪ್ಪಾಗಲಾರದು.ಆರ್ಸಿಬಿ ತಂಡ ಕಪ್ ಗೆಲ್ಲುವ ಮುನ್ನವೇ ತಮ್ಮ ವೃತ್ತಿಗೆ ವಿದಾಯ ಹೇಳಿರುವುದು ಎಡಿಬಿ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.