ಕರಾಚಿ: ತಂದೆ ತಾಯಿಯರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ತ್ಮ ಜೀವನವನ್ನೇ ಮುಡಿಪಿಡುತ್ತಾರೆ. ತಮ್ಮ ಮಕ್ಕಳಿಗೋಸ್ಕರ ಎಷ್ಟೆಲ್ಲಾತ್ಯಾಗ ಮಾಡುವುದನ್ನು ನಾವು ನೋಡಿದ್ದೇವೆ. ಆದರೆ ಇಲ್ಲೊಬ್ಬ ಅಪ್ಪ ತನ್ನ ಮಕ್ಕಳನ್ನೇ ಮಾರಾಟ ಮಾಡಲು ಹೊರಟಿದ್ದಾನೆ. ಹೌದು ಹೀಗೆ ಸಾಮಾಜಿಕ ಜಾಲತಾಣದಲ್ಲಿ ಆಘಾತಕಾರಿ ವಿಡಿಯೋವೊಂದು (Viral Video of Social Media) ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಪೊಲೀಸ್ ಸಮವಸ್ತ್ರದಲ್ಲಿ ನಿಂತಿರುವ ವ್ಯಕ್ತಿಯೊಬ್ಬರು ತನ್ನ ಇಬ್ಬರು ಮಕ್ಕಳನ್ನು ಮಾರಾಟ ಮಾಡುತ್ತಿರುವುದನ್ನು ಕಾಣಬಹುದಾಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ತನ್ನ ಮಕ್ಕಳನ್ನು 50 ಸಾವಿರ ರೂಪಾಯಿಗೆ ಮಾರಾಟ ಮಾಡಲು ಹರಾಜು ಹಾಕುತ್ತಿದ್ದಾನೆ ಅಂತ ಟ್ವಿಟರ್ ನಲ್ಲಿ (Policeman selling his children ) ಹೇಳಿಕೊಂಡಿದ್ದಾರೆ.
Actions been taken by CM Sindh Murad ali shah. Complainer was granted 14 days leave for his childs operation and inquiry being called against the officer who ask for bribe. https://t.co/Bhwg9skBLO
— Sheikh Sarmad (@ShSarmad71) November 18, 2021
ಅಂದ ಹಾಗೇ ವೈರಲ್ ವಿಡಿಯೋವು ಪಾಕಿಸ್ತಾನದ ದೇಶದ್ದು ಆಗಿದ್ದು (Pakistan Viral Videos) ಈ ಆಘಾತಕಾರಿ ವೀಡಿಯೋ ಪಾಕಿಸ್ತಾನದ ಸಿಂಧ್ ಪ್ರದೇಶದ ಘೋಟ್ಕಿ ಜಿಲ್ಲೆಯಲ್ಲಿ ಪೊಲೀಸ್ ಆಗಿ ಕೆಲಸ ಮಾಡುತ್ತಿರುವ ನಿಸಾರ್ ಲಶಾರಿ ಎಂಬ ವ್ಯಕ್ತಿ, ರಸ್ತೆಯ ಮೇಲೆ ನಿಂತು ತನ್ನ ಇಬ್ಬರು ಚಿಕ್ಕ ಮಕ್ಕಳನ್ನು ಹರಾಜು ಹಾಕುತ್ತಿದ್ದಾರೆ. ಹೀಗೆ ಪೊಲೀಸ್ ಪೇದೆ ತನ್ನ ಮಕ್ಕಳನ್ನು ಹರಾಜು ಹಾಕಲು ಕಾರಣ ತನ್ನ ಮಗುವಿನ ಚಿಕಿತ್ಸೆಗೆ ರಜೆ ನೀಡಿದ್ದಕ್ಕೆ ಪ್ರತಿಯಾಗಿ ಲಂಚ ಕೇಳುತ್ತಿದ್ದಾರೆ. ಲಂಚ ಕೊಡಲು ಆಗದೇ ಹೋದ ಪರಿಣಾಮ ನಗರದಿಂದ 120 ಕಿ.ಮೀ ದೂರದ ಲರ್ಕಾನಾಗೆ ಲಶಾರಿಯನ್ನು ವರ್ಗಾಯಿಸಿದ್ದಾರಂತೆ.
ಇದನ್ನೂ ಓದಿ: ladakh: ಲಡಾಖ್ ನಲ್ಲಿ ಯುದ್ದಸ್ಮಾರಕ ಉದ್ಘಾಟಿಸಿದ ರಾಜನಾಥ್ ಸಿಂಗ್
ಭ್ರಷ್ಟಾಚಾರದಿಂದ ಕಂಗೆಟ್ಟ ನಿಸಾರ್, ಘೋಟ್ಕಿಯ ರಸ್ತೆಯಲ್ಲಿ ನಿಂತು ತಮ್ಮ ಅನಾರೋಗ್ಯದ ಮಗುವನ್ನು 50 ಸಾವಿರಕ್ಕೆ ಹರಾಜು ಹಾಕಲು ಮುಂದಾಗಿದ್ದಾನೆ ಎನ್ನಲಾಗಿದೆ. ನಿಸಾರ್ ಲಶರಿ ಅವರ ಈ ವೀಡಿಯೊ ವೈರಲ್ ಆದ ನಂತರ, ಮುಖ್ಯಮಂತ್ರಿ ಮುರಾದ್ ಅಲಿ ಶಾ ಮಧ್ಯಪ್ರವೇಶಿಸಿ ಅವರು ನಿಸಾರ್ ಅವರ ಕೆಲಸವನ್ನು ಘೋಟ್ಕಿಯಲ್ಲಿಯೇ ಇರುವಂತೆ ಆದೇಶಿಸಿ ಮತ್ತು ಮಗುವಿನ ಚಿಕಿತ್ಸೆಗಾಗಿ 14 ದಿನಗಳ ರಜೆ ನೀಡುವಂತೆಯೂ ಆದೇಶೀಸಿದ್ದಾರೆ.