ಮೈಸೂರು: (ನ.18) Folk Museum: ಏಷ್ಯಾದ ಅತಿದೊಡ್ಡ ಜಾನಪದ ವಸ್ತುಸಂಗ್ರಹಾಲಯ ಎಂಬ ಖ್ಯಾತಿ ಪಡೆದಿದ್ದ ಜಯಲಕ್ಷ್ಮಿ ವಿಲಾಸ್ ಅರಮನೆಯ ಚಾವಣಿ ಕುಸಿದಿರುವ ಘಟನೆ ಬೆಳಗ್ಗೆ ಬಂದಿದೆ.
ಮೈಸೂರಿನ ಮನಸಗಂಗೋತ್ರಿ ಆವರಣದಲ್ಲಿರುವ ಜಯಲಕ್ಷ್ಮಿ ವಿಲಾಸ ಅರಮನೆಯ ಮೊದಲ ಮಹಡಿಯ ಛಾವಣಿ ಕುಸಿದು ಬಿದ್ದಿದ್ದು, ಮತ್ತಷ್ಟು ಕುಸಿದು ಬೀಳುವ ಸಾಧ್ಯತೆಗಳಿದೆ.
ನಗರದಲ್ಲಿ ಸುರಿದ ಭಾರಿ ಮಳೆಗೆ ಅರಮನೆಯ ದಕ್ಷಿಣ ಭಾಗದಲ್ಲಿರುವ ಕಟ್ಟಡದ ಮೊದಲ ಮಹಡಿಯ ಚಾವಣಿ 10 ಅಡಿಯಷ್ಟು ಆಳಕ್ಕೆ ಉಳಿದ ಭಾಗಗಳು ಕುಸಿವ ಹಂತಕ್ಕೆ ತಲುಪಿದೆ.

ಜಯಲಕ್ಷ್ಮಿ ವಿಲಾಸ್ ಅರಮನೆಯನ್ನು ಜಾನಪದ ವಸ್ತುಸಂಗ್ರಹಾಲಯವಾಗಿ ಮಾಡಿ, 6,500 ಹೆಚ್ಚು ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಸಂಗ್ರಹಾಲಯದಲ್ಲಿ, ಹಳ್ಳಿಗಳಲ್ಲಿ ಬಳಸುತ್ತಿದ್ದ ವಸ್ತುಗಳು, ಸಾಂಪ್ರದಾಯಿಕ ಕರಕುಶಲ ಹಾಗೂ ಮೈಸೂರು ಸುತ್ತಮುತ್ತಲಿನ ಜನರ ಜೀವನಕ್ರಮದ ವಸ್ತುಗಳು ಪ್ರದರ್ಶನಕ್ಕಿಡಲಾಗಿತ್ತು.
ಅನುದಾನದ ಕೊರತೆ ಇಂದ, ಅರಮನೆ ಹಲವುಭಾಗಗಳಲ್ಲಿ ನೀರು ಸೋರುತ್ತಿದೆ. ಅರಮನೆ ಕುಸಿವ ಹಂತ ತಲುಪಿದೆ. ಅರಮನೆ ದುರಸ್ತಿಗೆ, ಕನಿಷ್ಠ ಹದಿನೈದರಿಂದ ಇಪ್ಪತ್ತು ಕೋಟಿ ಅವಶ್ಯಕತೆ ಇದೆ ಎಂದು ಮೈಸೂರು ವಿವಿ ಆಡಳಿತ ಮಂಡಳಿ ತಿಳಿಸಿದೆ.
ಅರಮನೆಯ ನವೀಕರಣಕ್ಕಾಗಿ ಒಂದು ವರ್ಷದ ಹಿಂದೆ ಅಗತ್ಯ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಈಗ ಮಳೆ ನಿಂತ ಕೂಡಲೇ ವಿವಿಯಿಂದ ಹಂತಹಂತವಾಗಿ ದುರಸ್ತಿ ಕಾರ್ಯ ನಡೆಸುತ್ತೇವೆ ಎಂದು ಮೈಸೂರು ವಿವಿ ಕುಲಪತಿ ಪ್ರೊ. ಜಿ ಹೇಮಂತ್ ಕುಮಾರ್ ಅವರು ತಿಳಿಸಿದ್ದಾರೆ.
ಅರಮನೆಯ ವೀಕ್ಷಣೆಗೆ, ಸಾವಿರಾರು ಪ್ರವಾಸಿಗರು ಹಾಗೂ ವಿದೇಶಿಯರು ಭೇಟಿ ನೀಡಿ, ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯನ್ನು ಅಧ್ಯಯನ ಮಾಡುತ್ತಿದ್ದಾರೆ. ಕೆಲವು ಕನ್ನಡ ಚಿತ್ರಗಳಿಗೆ ಜಯಲಕ್ಷ್ಮಿ ವಿಲಾಸದ ಮುಂಭಾಗದಲ್ಲಿ ಶೂಟಿಂಗ್ ಗಾಗಿ ಬಳಸಿಕೊಳ್ಳಲಾಗಿತ್ತು. ಪಾರಂಪರಿಕ ಕಟ್ಟಡಗಳನ್ನು ಉಳಿಸಿಕೊಳ್ಳುವ ಜವಾಬ್ದಾರಿ ಸರ್ಕಾರದ್ದಾಗಿದೆ.